/newsfirstlive-kannada/media/post_attachments/wp-content/uploads/2024/12/DARSHAN_NEW-1.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ದರ್ಶನ್ ಸೇರಿ ಕೆಲವರು ಜೈಲಿನಿಂದ ರಿಲೀಸ್ ಆಗಿದ್ದಾರೆ. 7 ಮಂದಿ ಆರೋಪಿಗಳಿಗೆ ಸೆರೆವಾಸದಿಂದ ಮುಕ್ತಿ ಸಿಕ್ಕಿದೆ. ಇದರ ಮಧ್ಯೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ದಾಸ ಮೈಸೂರಿನಲ್ಲಿ ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ದಾರೆ. ಮೈಸೂರಿಗೆ ತೆರಳಲು ಅನುಮತಿ ಸಿಗುತ್ತಿದ್ದಂತೆ ಫಾರ್ಮ್‌ಹೌಸ್‌ನ ಕೆಲಸಗಳನ್ನ ಮಾಡಿಸೋದರಲ್ಲಿ ಬ್ಯುಸಿ ಆಗಿದ್ದಾರೆ.
ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಗಳಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. ಇದೀಗ ದರ್ಶನ್‌ಗೆ ತಮ್ಮ ತವರಿಗೆ ತೆರಳಲು ಅನುಮತಿ ಸಿಕ್ಕಿದೆ. ಇದರ ಬೆನ್ನಲ್ಲೇ ದಾಸ ತವರೂರಿಗೆ ಪಯಣಿಸಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಓಡಾಡುತ್ತಾ ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ದಾರೆ.
ಪರ್ಮಿಷನ್ ಸಿಗುತ್ತಿದ್ದಂತೆ ಫಾರ್ಮ್‌ಹೌಸ್‌ನಲ್ಲಿ ‘ದರ್ಶನ’
ರೆಗ್ಯುಲರ್ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದ ದರ್ಶನ್‌ಗೆ ಮೈಸೂರಿನ ಫಾರ್ಮ್ ಹೌಸ್ ಕಡೆ ಹೋಗಲು ತುಡಿತ ಹೆಚ್ಚಾಗಿತ್ತು. ಇದೇ ನಿಟ್ಟಿನಲ್ಲಿ ಸೆಷನ್ಸ್ ಕೋರ್ಟ್‌ಗೆ ದಾಸ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕೂಡಾ ದರ್ಶನ್‌ಗೆ ಅನುಮತಿ ನೀಡಿತ್ತು. ಡಿಸೆಂಬರ್ 20ರಿಂದ ಜನವರಿ 05ರವರೆಗೆ 2 ವಾರ ಪರ್ಮಿಷನ್ ಕೊಟ್ಟಿದೆ. ಅನುಮತಿ ಕೊಟ್ಟ ಬೆನ್ನಲ್ಲೇ ನಿನ್ನೆ ಬೆಳಗ್ಗೆ ದರ್ಶನ್ ಮೈಸೂರಿಗೆ ಪಯಣಿಸಿದ್ದಾರೆ. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ವಿನೀಶ್ ಕ್ಯಾಟವೇರಿ ಫಾರ್ಮ್ ಹೌಸ್ನಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಫಾರ್ಮ್ ಹೌಸ್ನಲ್ಲಿ ಪ್ರಾಣಿಗಳ ಜೊತೆ ಕಾಲಕಳೆಯುತ್ತ ದರ್ಶನ್ ಓಡಾಡುತ್ತಿದ್ದಾರೆ. ತೋಟದ ಕೆಲಸ ಮಾಡಿಸುತ್ತ ಬೆನ್ನುನೋವನ್ನೇ ಮರೆತಂತೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ.. ಸಕ್ಕರೆ ನಾಡಿನಲ್ಲಿ ಕನ್ನಡ ಡಿಂಡಿಮವ
ಇನ್ನೂ ದರ್ಶನ್ ಜೊತೆ ನಟ ಧನ್ವೀರ್ ಕೂಡ ಫಾರ್ಮ್‌ಹೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲಿಗೆ ಹೋದಾಗಿನಿಂದ ಕಾನೂನು ಹೋರಾಟದಲ್ಲಿ ದಾಸನಿಗೆ ಸಾಥ್ ಕೊಟ್ಟಿದ್ದ ಧನ್ವೀರ್ ತಮ್ಮನಂತೆ ನಟ ದರ್ಶನ್‌ಗೆ ಬೆಂಬಲವಾಗಿ ನಿಂತಿದ್ದಾರೆ.
ಇಷ್ಟುದಿನ ಕತ್ತಲಕೋಣೆಯಲ್ಲಿ ಬಂಧಿಯಾಗಿದ್ದ ದಾಸ ಈಗ ಫ್ರೀ ಬರ್ಡ್ ಆಗಿದ್ದಾರೆ. ಮೈಸೂರಿನಲ್ಲಿರುವ ತೋಟದ ಹಸಿರಿನ ಮಧ್ಯೆ ರಿಲ್ಯಾಕ್ಸ್ ಆಗುತ್ತಿದ್ದಾರೆ. ಇದರ ಮಧ್ಯೆ ಸುಪ್ರೀಂಕೋರ್ಟ್‌ಗೆ ಪ್ರಕರಣವನ್ನ ಕೊಂಡೊಯ್ಯಲು ಪೊಲೀಸರು ಸಜ್ಜಾಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಕೇಸ್ ವಿಚಾರಣೆಗೆ ಬರುವವರೆಗೆ, ಬಂದ ಮೇಲೆ ಏನಾಗುತ್ತೋ, ಏನೋ?. ಆದ್ರೆ, ಅಲ್ಲಿವರೆಗೆ ದಾಸ ಸೇಫ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ