Advertisment

ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗನದ್ದೇ ಹವಾ.. ದರ್ಶನ್‌ಗೇ ಆರ್ಡರ್ ಮಾಡಿ ಕರೆಸಿಕೊಳ್ತಿದ್ದ ರೌಡಿಶೀಟರ್!

author-image
Bheemappa
Updated On
ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗನದ್ದೇ ಹವಾ.. ದರ್ಶನ್‌ಗೇ ಆರ್ಡರ್ ಮಾಡಿ ಕರೆಸಿಕೊಳ್ತಿದ್ದ ರೌಡಿಶೀಟರ್!
Advertisment
  • ತನ್ನವರನ್ನು ಭೇಟಿಯಾದ ಮೇಲೆ ದರ್ಶನ್ ಎಲ್ಲಿಗೆ ಹೋಗುತ್ತಿದ್ದರು?
  • ಹೀಗೆಲ್ಲಾ ಮಾಡಬಾರದು, ಅಲ್ಲಿಗೆ ಹೋಗಬಾರದು ಅಂತಿದ್ದ ಸಿಬ್ಬಂದಿ
  • ಹುಡುಗರಿಗೆ ಹೇಳಿ ನಟನನ್ನ ಕರೆಸಿಕೊಳ್ತಿದ್ದ ವಿಲ್ಸನ್ ಗಾರ್ಡನ್ ನಾಗ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋ ವೈರಲ್ ಆದ ಮೇಲೆ ಒಂದೊಂದೇ ಶಾಕಿಂಗ್‌ ವಿಚಾರಗಳು ಹೊರ ಬರುತ್ತಿವೆ. ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಜೈಲಿನಲ್ಲಿ ವಿಸಿಟರ್ಸ್ ಅನ್ನು ಭೇಟಿಯಾದ ಬಳಿಕ ನಟ ದರ್ಶನ್ ನೇರ ವಿಲ್ಸನ್​ ಗಾರ್ಡನ್ ನಾಗನನ್ನ ಭೇಟಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Advertisment

ಇದನ್ನೂ ಓದಿ: ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ?

ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನ 3ನೇ ಬ್ಯಾರಕ್​ನಿಂದ ಹೊರ ಬಂದು ವಿಸಿಟರ್ಸ್​ ಅನ್ನು ಭೇಟಿ ಮಾಡುತ್ತಿದ್ದರು. ವಿಸಿಟರ್ಸ್​ ಭೇಟಿಯಾದ ಮೇಲೆ ದರ್ಶನ್​ ನೇರ ಜೈಲಿನ ಕುಚುಕು ನಾಗನನ್ನು ಭೇಟಿ ಮಾಡುತ್ತಿದ್ದರು.

ಇದನ್ನೂ ಓದಿ:ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು?

Advertisment

publive-image

ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸೆಕ್ಯೂರಿಟಿ 1ರಲ್ಲಿ ಇರುತ್ತಿದ್ದ. ದರ್ಶನ್ ಜೈಲಿನ ಸೆಕ್ಯೂರಿಟಿ 3ರಲ್ಲಿ ಇರುತ್ತಿದ್ದರು. ವಿಸಿಟರ್ಸ್ ಅನ್ನು ಭೇಟಿಯಾದ ಮೇಲೆ ಅಧಿಕಾರಿಗಳ ಕಣ್ಣು ತಪ್ಪಿಸಿ ನಾಗನ ಬ್ಯಾರಕ್ ಕಡೆ ದರ್ಶನ್ ಓಡುತ್ತಿದ್ದರಂತೆ. ಇದನ್ನು ಕಂಡು ಜೈಲಿನ ಅಧಿಕಾರಿಗಳು ಹೀಗೆ ಬೇರೆಯವರನ್ನು ಭೇಟಿ ಮಾಡಬಾರದು, ಈ ರೀತಿ ಇರಬಾರದು ಎಂದು ಹೇಳುತ್ತಿದ್ದರು. ಇದಕ್ಕೆ ದರ್ಶನ್ ಬದಲು ಎದುರುತ್ತರ ಕೊಡುತ್ತಿದ್ದ ನಾಗ ಒಂದೆರಡು ನಿಮಿಷ ತಡೀರಿ ಬರುತ್ತಾರೆ ಎನ್ನುತ್ತಿದ್ದನಂತೆ. ಅಧಿಕಾರಿಗಳು ಹೇಳಿದರೂ ತನ್ನ ಸೆಕ್ಯೂರಿಟಿಗೆ ದರ್ಶನ್ ಬೇಗ ಹೋಗುತ್ತಿರಲಿಲ್ಲ. ಇದು ಅಲ್ಲದೇ ವಿಲ್ಸನ್ ಗಾರ್ಡನ್ ನಾಗ ತನ್ನ ಹುಡುಗರಿಗೆ ಹೇಳಿ ದರ್ಶನ್​ರ​ನ್ನ ಕರೆಸಿಕೊಳ್ಳುತ್ತಿದ್ದನು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment