Advertisment

ದರ್ಶನ್​​ಗೆ ಜೈಲಿನಲ್ಲಿ ಮತ್ತೊಂದು ಸಂಕಷ್ಟ.. ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ.. ಅಂಥದ್ದೇನಾಯ್ತು?

author-image
AS Harshith
Updated On
ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?
Advertisment
  • ಜೈಲು ಸೇರಿದ 20 ದಿನಗಳ ನಂತರ ದರ್ಶನ್-ಪ್ರಜ್ವಲ್ ಭೇಟಿ
  • 10 ನಿಮಿಷಗಳ ಕಾಲ ಮಾತುಕತೆ ನಡೆಸಿದ ದರ್ಶನ್-ಪ್ರಜ್ವಲ್
  • ಪರಪ್ಪನ ಅಗ್ರಹಾರ ಜೈಲಿನಲ್ಲಿ ನೋವಿನಿಂದ ಬಳಲುತ್ತಿರುವ ದರ್ಶನ್​

ಒಂದ್ಕಡೆ ಜೈಲಿನ ಊಟ ಸೇರುತಿಲ್ಲ. ನೆಲದ ಮೇಲೆ ಮಲಗೋದಕ್ಕೆ ಆಗ್ತಾ ಇಲ್ಲ. ಮನೆಯ ಊಟ, ಮನೆಯ ವಸ್ತುಗಳ ಬಳಕೆಗೆ ಕೋರ್ಟ್ ಅನುಮತಿ ಕೇಳುವಂತೆ ರಿಟ್ ಅರ್ಜಿ ಸಲ್ಲಿಸಿರೋ ದರ್ಶನ್​ಗೆ ಇದೀಗ ಮತ್ತೊಂದು ನೋವು ಎದುರಾಗಿದೆ. ಅದೇನು ಅಂತಿರಾ ಈ ಸ್ಟೋರಿ ನೋಡಿ.

Advertisment

ಆಕ್ಸಿಡೆಂಟ್ ಆಗಿದ್ದ ದಾಸನ ಬಲಗೈಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾದ ನಟ ದರ್ಶನ್​ ಸ್ಥಿತಿ ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು ಅನ್ನೋ ಸ್ಥಿತಿ. ಜೈಲು ಸೇರೋದಕ್ಕು ಮುಂಚೆ ಡೆವಿಲ್​ ಸಿನಿಮಾ ಶೂಟಿಂಗ್​ನಲ್ಲಿ ಕೈಮೂಳೆ ಮುರಿದು ಪಡಬಾರದ ನೋವು ಯಾತನೆ ಪಡ್ತಿದ್ದಾರೆ. ಬ್ಯಾಂಡೆಜ್​​​ ಸುತ್ಕೊಂಡಿದ್ದ ದಾಸನಿಗೆ ಜೈಲು ಆಸ್ಪತ್ರೆಯಲ್ಲೇ ಬಲಗೈಗೆ ಚಿಕಿತ್ಸೆ ಪಡೆದಿದ್ದಾರೆ.

ಇದನ್ನೂ ಓದಿ: ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ.. ಸಖತ್ ಸೌಂಡ್ ಮಾಡ್ತಿದೆ ಅಣ್ಣಯ್ಯ ಸೀರಿಯಲ್​ ಪ್ರೊಮೋ..!

ಏಕಾಏಕಿ ನೋವು ಉಲ್ಬಣಕ್ಕೆ ಕಾರಣ ಈ ಮಳೆಗಾಲ. ನೆಲವನ್ನೇ ಸುಪ್ಪತ್ತಿಗೆ ಮಾಡ್ಕೊಂಡು ರಟ್ಟೆಯೇ ತಲೆದಿಂಬಾಗಿಸಿದ್ದ ದರ್ಶನ್​​​ಗೆ ಮಳೆಯ ಚಳಿ, ಬಿಸಿ ಮುಟ್ಟಿಸಿದೆ. ಗಾಯವಾಗಿದ್ದ ಬಲಗೈ ನೋವು ವಿಪರೀತ ಜಾಸ್ತಿ ಆಗಿದೆ. ನೋವಿನಿಂದ ಬಳಲುತ್ತಿದ್ದ ದರ್ಶನ್​ಗೆ ಚೀಫ್ ಮೆಡಿಕಲ್ ಆಫೀಸರ್ ಹರ್ಷವರ್ಧನ್ ಹಾಗೂ ಡಾಕ್ಟರ್ ನಾಗರಾಜ್​ ಚಿಕಿತ್ಸೆ ನೀಡಿದ್ದಾರೆ.

Advertisment

publive-image

ಕೈನೋವು ಹೆಚ್ಚಾಗಿರೋ ಕಾರಣ ಬೆರಳುಗಳು ಸರಿಯಾಗಿ ಮಡುಚಲು ಆಗದೇ ದರ್ಶನ್​ ಒದ್ದಾಡಿತ್ತಿದ್ದಾರೆ. ಆದಕ್ಕಾಗಿ ಊಟ ಮಾಡಲು ಚಮಚ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಕೋರಿದ್ದಾರೆ. ಸದ್ಯ ದರ್ಶನ್​ಗೆ ವೈದ್ಯಕೀಯ ಪರೀಕ್ಷೆ ಮಾಡಿ ರಿಪೋಟನ್ನ ವಿಚಾರಣೆ ವೇಳೆ ಹೈಕೋರ್ಟ್​ ನೀಡಬಹುದು ಎನ್ನಲಾಗ್ತಿದೆ. ಚಮಚ ಏಕೆ ನೀಡಬೇಕು ಅನ್ನೋದಕ್ಕೆ ವರದಿಯೂ ಸಿದ್ಧ ಪಡಿಸೋ ಸಾಧ್ಯತೆ ಇದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಜೊತೆ ಮಹಿಳಾ ಶಿಕ್ಷಕರು ಲೈಂಗಿಕ ಸಂಪರ್ಕ.. ಇಬ್ಬರು ಅರೆಸ್ಟ್!

ಜೈಲಿನಲ್ಲಿ ದರ್ಶನ್-ಪ್ರಜ್ವಲ್​ ಮೀಟ್​!

ಜೈಲು ಸೇರಿದ 20 ದಿನಗಳ ನಂತರ ನಟ ದರ್ಶನ್, ಹಾಸನ ಮಾಜಿ ಸಂಸದ ಪ್ರಜ್ವಲ್ ಭೇಟಿ ಮಾಡಿದ್ದಾರೆ. ಚೀಫ್ ಮೆಡಿಕಲ್ ಆಫಿಸರ್ ಕಚೇರಿಯಲ್ಲಿ ದರ್ಶನ್ ಮತ್ತು ಪ್ರಜ್ವಲ್ ಭೇಟಿಯಾಗಿ ಔಪಚಾರಿಕ ಮಾತುಕತೆ ನಡೆಸಿದ್ದಾರಂತೆ. ಚೀಫ್ ಮೆಡಿಕಲ್ ಆಫೀಸರ್ ಹರ್ಷವರ್ಧನ್, ಹಾಗೂ ಡಾಕ್ಟರ್ ನಾಗರಾಜ ಅವರ ಸಮ್ಮುಖದಲ್ಲಿ ಇಬ್ಬರ ಮಾತನಾಡಿದ್ದು, ಸ್ವತಃ ಹರ್ವವರ್ಧನ್ ಭೇಟಿ ಮಾಡಿಸಿದ್ದಾರೆಂಬ ಮಾಹಿತಿ ಸಿಕ್ಕಿದೆ. 10 ನಿಮಿಷಗಳ ಕಾಲ ದರ್ಶನ್ ಮತ್ತು ಪ್ರಜ್ವಲ್ ಉಭಯ ಕುಶಲೋಪರಿ ನಡೆಸಿದ್ರಂತೆ. ಇನ್ನೂ ಜೈಲಿನ ವಾತವರಣದ ಬಗ್ಗೆ ಇಬ್ಬರು ಸಹ ಜೈಲಿನ ಆಹಾರ ಸೆಟ್ ಆಗ್ತಿಲ್ಲ, ಹೊರಗಿನ ಊಟ ಪಡೆಯುವ ಬಗ್ಗೆಯೂ ಚರ್ಚೆ ಮಾಡಿದ್ದಾರೆ. ಸದ್ಯ ಪ್ರಜ್ವಲ್ ಜೈಲು ಆಸ್ಪತ್ರೆ ವಾರ್ಡ್ ಸೆಲ್​ನಲ್ಲೇ ಇದ್ದು, ನ್ಯೂಸ್ ಫಸ್ಟ್​ಗೆ ಜೈಲು ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

Advertisment

ಒಟ್ಟಿನಲ್ಲಿ, ಪ್ರಜ್ವಲ್ ಆಗಲಿ ನಟ ದರ್ಶನ್​ ಆಗಲಿ ಇಬ್ಬರೂ ಐಷಾರಾಮಿ ಜೀವನಕ್ಕೆ ಅಭ್ಯಾಸ ಬಿದ್ದವರು. ಹೀಗಿರಬೇಕಾದ್ರೆ ಜೈಲು ಜೀವನಕ್ಕೆ ಹೊಂದಿಕೊಳ್ಳೋದು ಸ್ವಲ್ಪ ಕಷ್ಟನೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment