Advertisment

BREAKING: ಜೈಲೂಟ ಸಾಕಪ್ಪ ಸಾಕು.. ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌; ಮನೆ ಊಟದ ಜೊತೆ ಏನೇನು ಕೇಳಿದ್ರು?

author-image
admin
Updated On
‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..!
Advertisment
  • ದಿನ ಕಳೆದಂತೆ ದರ್ಶನ್ ದೇಹದ ತೂಕ ಕೂಡ ಕಡಿಮೆ ಆಗುತ್ತಿದೆ
  • ಜೈಲಿನಲ್ಲಿ ಸಿಗುವ ಊಟಕ್ಕೆ ಪರದಾಡುತ್ತಿರುವ ನಟ ದರ್ಶನ್ ಗ್ಯಾಂಗ್‌
  • ಸಾಕಪ್ಪ ಸಾಕು ಜೈಲೂಟ ಅಂತ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ದರ್ಶನ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರಿಗೆ ಜೈಲೂಟ ಸಾಕಾಗಿ ಹೋಗಿದೆ. ಸಾಕಪ್ಪ ಸಾಕು ಜೈಲೂಟ ಅಂತಿರುವ ದರ್ಶನ್ ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Advertisment

ದರ್ಶನ್ ಅವರು ಹೇಳಿ, ಕೇಳಿ ಸೆಲೆಬ್ರಿಟಿ ಆದವರು. ಅದಕ್ಕಿಂತಲೂ ಮುಖ್ಯವಾಗಿ ನಾನ್ ವೆಜ್ ಪ್ರಿಯರು. ಆದರೆ ಜೈಲಿನಲ್ಲಿ ಸಿಗುವ ಊಟಕ್ಕೆ ದರ್ಶನ್ ಅಡ್ಜೆಸ್ಟ್ ಆಗೋದು ಕಷ್ಟವಾಗಿದೆ. ಜೊತೆಗೆ ದಿನ ಕಳೆದಂತೆ ದರ್ಶನ್ ಅವರ ದೇಹದ ತೂಕ ಕೂಡ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಜೈಲೂಟ ಬೇಡ. ನಮ್ಮ ಕಕ್ಷಿದಾರರಿಗೆ ಮನೆ ಊಟಕ್ಕೆ ಅನುಮತಿ ಕೋರಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

publive-image

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್ 

ಜೈಲು ಊಟಕ್ಕೆ ಬೇಸತ್ತ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ ಪರ ವಕೀಲರು ಊಟ, ಹಾಸಿಗೆ, ಪುಸ್ತಕವನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment