ದರ್ಶನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ‘ಸ್ಪೆಷಲ್ ಫೋಟೋ’ ಶೇರ್ ಮಾಡಿ ಹೊಸ ಭರವಸೆ ಮೂಡಿಸಿದ ವಿಜಯಲಕ್ಷ್ಮಿ

author-image
Veena Gangani
Updated On
ನಾಳೆ ದರ್ಶನ್​​​ ರಿಲೀಸ್​​ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ ಉರುಳು ಸೇವೆ; 101 ತೆಂಗಿನ ಕಾಯಿ ಹೊಡೆದು ಪೂಜೆ
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರೋ ನಟ ದರ್ಶನ್
  • ವರಮಹಾಲಕ್ಷ್ಮಿ ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ದರ್ಶನ್ ಪತ್ನಿ
  • ವಿಜಯಲಕ್ಷ್ಮಿ ದರ್ಶನ್ ಶೇರ್ ಮಾಡಿದ ಸ್ಪೆಷಲ್ ಫೋಟೋ ಏನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಪತಿಯನ್ನು ಸೆರೆವಾಸದಿಂದ ಬಿಡಿಸಿಕೊಂಡು ಬರಲು ವಿಜಯಲಕ್ಷ್ಮಿ ಶತ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಈ ಮಧ್ಯೆ ಇಂದು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಪ್ರತಿ ಹಬ್ಬದಲ್ಲೂ ಪತಿಯೊಂದಿಗೆ ಪತ್ನಿ ವಿಜಯಲಕ್ಷ್ಮಿ ಸಂಭ್ರಮಿಸುತ್ತಿದ್ದರು.

ಇದನ್ನೂ ಓದಿ:ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ ವಿಜಯಲಕ್ಷ್ಮಿ; ದರ್ಶನ್ ಪತ್ನಿ ಹೇಳಿದ್ದೇನು?

publive-image

ಆದರೆ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದಲ್ಲಿ ದರ್ಶನ್ ಜೈಲಿನಲ್ಲಿರುವ ಕಾರಣ, ಮನೆಯಲ್ಲಿ ದರ್ಶನ್ ಅವರ ಅನುಪಸ್ಥಿತಿ ಎದ್ದು ಕಾಡುತ್ತಿದೆ. ಜೊತೆಗೆ ಪ್ರತಿ ಹಬ್ಬದ ಸಂದರ್ಭದಲ್ಲೂ ದರ್ಶನ್ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದಿಂದ ಶುಭಾಶಯಗಳನ್ನು ಕೋರುತ್ತಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹಾರೈಕೆಯಿಂದ ಖುಷಿ ಪಡುತ್ತಿದ್ದರು. ಇಂದು ದರ್ಶನ್ ಜೈಲಿನಲ್ಲಿರುವ ಕಾರಣ ಅಭಿಮಾನಿಗಳು ಸಹ ಬೇಸರದಲ್ಲಿದ್ದಾರೆ.

publive-image

ಇದನ್ನು ಮನಗಂಡಿರುವ ವಿಜಯಲಕ್ಷ್ಮಿ ದರ್ಶನ್ ಅವರು ಈ ಹಿಂದೆ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಅಭಿಷೇಕ ಮಾಡುತ್ತಿರುವ ಕೈ ದರ್ಶನ್​ ಅವರದ್ದಾಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ದಿಲ್ ಖುಷ್ ಎನ್ನುತ್ತಿದ್ದಾರೆ.

publive-image

ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಜಯಲಕ್ಷ್ಮಿ ದರ್ಶನ್ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಫೋಟೋವನ್ನೇ ಅಭಿಮಾನಿಗಳು ತಮ್ಮ ಪೋಸ್ಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲಾ ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, ದೇವಿಯು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ, ನಮ್ಮ ಡಿ ಬಾಸ್ ಬೇಗ ರಿಲೀಸ್ ಆಗಬೇಕು ಎಂದು ದೇವಿಯಲ್ಲಿ ಬೇಡಿಕೊಳ್ಳೋಣ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment