Advertisment

ಡಿಕೆಶಿ ಭೇಟಿ ಮಾಡಲು ದಿನಕರ್​ ಜೊತೆ ಬಂದ ದರ್ಶನ್​ ಪತ್ನಿ.. ಡಿಸಿಎಂ ಭೇಟಿಗೆ ಕಾದು ಕುಳಿತ ವಿಜಯಲಕ್ಷ್ಮೀ

author-image
AS Harshith
Updated On
ಡಿಕೆಶಿ ಭೇಟಿ ಮಾಡಲು ದಿನಕರ್​ ಜೊತೆ ಬಂದ ದರ್ಶನ್​ ಪತ್ನಿ.. ಡಿಸಿಎಂ ಭೇಟಿಗೆ ಕಾದು ಕುಳಿತ ವಿಜಯಲಕ್ಷ್ಮೀ
Advertisment
  • ನಿನ್ನೆ ವಿಜಯಲಕ್ಷ್ಮೀ ನನ್ನ ಭೇಟಿಗೆ ಸಮಯ ಕೇಳಿದ್ದಾರೆ ಎಂದ ಡಿಕೆಶಿ
  • ನೊಂದವರೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ
  • ಇಂದು ಬೆಳಿಗ್ಗೆ ಡಿಕೆಶಿ ಭೇಟಿ ಮಾಡಲು ಬಂದ ವಿಜಯಲಕ್ಷ್ಮೀ

ರಾಮನಗರ: ನಟ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಹಾಗೂ ತಮ್ಮ ದಿನಕರ್​ ತೂಗುದೀಪರವರು ಡಿ ಕೆ ಶಿವಕುಮಾರ್​​ರವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದಾರೆ. ಸದ್ಯ ಡಿಸಿಎಂ ಅವರ ಭೇಟಿಗಾಗಿ ಇಬ್ಬರು ಕಾದು ಕುಳಿತ್ತಿದ್ದಾರೆ.

Advertisment

ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮೀ ನನ್ನ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ  ನಿನ್ನೆ ರಾಮನಗರದಲ್ಲಿ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಡಿಕೆಶಿಯವರನ್ನು ಭೇಟಿ ಮಾಡಲು ಬಂದಿದ್ದಾರೆ.

ನಿನ್ನೆ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಡಿಕೆಶಿ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿರುವ ಡಿಸಿಎಂ, ಅಧಿವೇಶನ ಇದ್ದ ಕಾರಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದೇನೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಮತಕೊಟ್ಟು ಇಕ್ಬಾಲ್​​ನನ್ನು ಗೆಲ್ಲಿಸಿದ್ದೀರಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ನಿಮ್ಮ ಸೇವೆ ಮಾಡಲು, ರಾಮನಗರ ಕ್ಷೇತ್ರ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದೀರಿ. ಡಿಕೆ ಸುರೇಶ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಸೇರಿ ನಾನು ನಿಮ್ಮ ಸೇವೆಗೆ ಶ್ರಮಿಸುತ್ತೇನೆ‌‌ ಎಂದು ಡಿಕೆಶಿ ಹೇಳಿದ್ದರು.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ.. 4 ತಿಂಗಳ ಗರ್ಭಿಣಿ ಸೊಸೆಯನ್ನು ಕೊಂದು ಸುಟ್ಟು ಹಾಕಿದ ಅತ್ತೆ-ಮಾವ

Advertisment

ಅನ್ಯಾಯ ಆಗಿದ್ರೆ ಸರಿಪಡಿಸಲು ಪ್ರಯತ್ನ ಮಾಡ್ತೇನೆ

ಡಿಕೆಶಿ ಭಾಷಣದ ಮಧ್ಯೆ ದರ್ಶನ್ ಅಭಿಮಾನಿಗಳಿಂದ ಡಿ ಬಾಸ್, ಡಿ ಬಾಸ್ ಘೋಷಣೆ ಕೇಳಿಬಂದಿತ್ತು. ಈ ವೇಳೆ ಅದರ ಬಗ್ಗೆ ನಾಳೆ ಮಾತನಾಡ್ತೀನಿ ಎಂಬ ಡಿ ಕೆ ಶಿವಕುಮಾರ್​, ದರ್ಶನ್​ರವರ ಪತ್ನಿ ಭೇಟಿ ಮಾಡೋಕೆ ಸಮಯ ಕೇಳಿದ್ದಾರೆ. ನಾಳೆ ಬೆಳಿಗ್ಗೆ ಅವರನ್ನ ಭೇಟಿ ಮಾಡ್ತೇನೆ. ಏನಾದ್ರೂ ಅನ್ಯಾಯ ಆಗಿದ್ರೆ ಸರಿಪಡಿಸಲು ಪ್ರಯತ್ನ ಮಾಡ್ತೇನೆ. ಆದರೆ ನಾವು ಕಾನೂನಿಗೆ ಗೌರವ ಕೊಡಬೇಕು. ದೇಶದ ಹಾಗೂ ನೆಲದ ಕಾನೂನು ಪಾಲಿಸಬೇಕು. ಅನ್ಯಾಯ ಯಾರಿಗೆ ಆಗಿದ್ದರೂ ನಾವೆಲ್ಲ ಸೇರಿ ನ್ಯಾಯ ಒದಗಿಸುವ ಕೆಲಸ‌ ಮಾಡೋಣ. ನೊಂದವರೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್.. ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಕೊಲೆ

ಅದರಂತೆಯೇ ವಿಜಯಲಕ್ಷ್ಮೀ ಮತ್ತು ಮೈದುನ ದಿನಕರ್​ ಜೊತೆಗೆ ಡಿಕೆಶಿಯವರ ನಿವಾಸಕ್ಕೆ ಬಂದಿದ್ದಾರೆ. ದರ್ಶನ್​ ಕುರಿತಾಗಿ ಹಲವು ವಿಚಾರಗಳನ್ನು ಮಾತನಾಡಲು ಕಾದು ಕುಳಿತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment