newsfirstkannada.com

ಖುಷಿ ಯಾರ ಮಗಳು ಗೊತ್ತಾ? ನಿಜ ಸಂಗತಿ ಹೇಳಿಕೊಂಡ ಪವಿತ್ರಾ ಗೌಡ

Share :

Published January 26, 2024 at 1:52pm

    ನಾನು ದರ್ಶನ್​ ಜೊತೆಯಲ್ಲಿ ಸಂತೋಷವಾಗಿದ್ದೀವಿ

    ವಿಜಯಲಕ್ಷ್ಮಿ ಅವರಿಗೆ ಈ ವಿಚಾರ ಮೊದಲೇ ತಿಳಿದಿರುತ್ತದೆ

    ಮಗಳು ಖುಷಿ ಗೌಡ ಬಗ್ಗೆ ಹೇಳಿಕೊಂಡ ಪವಿತ್ರಾ ಗೌಡ

ಪವಿತ್ರಾ ಗೌಡ ಇನ್​​ಸ್ಟಾಗ್ರಾಂನಲ್ಲಿ ಮತ್ತೆ ಪೋಸ್ಟ್​ ಹಂಚಿಕೊಂಡಿದ್ದಾರೆ. ಶೇರ್​ ಮಾಡಿದ ಪೋಸ್ಟ್​ನಲ್ಲಿ ದರ್ಶನ್​ ಜೊತೆಗಿನ ಸಂಬಂಧ ಮತ್ತು ಖುಷಿ ಗೌಡ ಯಾರ ಮಗಳೆಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕಾಟೇರ ಸಿನಿಮಾದ ಬಳಿಕ ದರ್ಶನ್​ ಇದೀಗ ಸುದ್ದಿಯಲ್ಲಿದ್ದಾರೆ. ಪವಿತ್ರಾ ಗೌಡ ಹಂಚಿಕೊಂಡಿದ್ದ ಪೋಸ್ಟ್​ವೊಂದರ ನಂತರ ನಟ ದರ್ಶನ್​ ಕುರಿತಾಗಿ ಹಲವು ಚರ್ಚೆಗಳು ಹುಟ್ಟಿಕೊಂಡಿದ್ದವು. ಮಾತ್ರವಲ್ಲದೆ ಪೋಸ್ಟ್​ನಲ್ಲಿ ಪವಿತ್ರಾ ಗೌಡ ‘ನಮ್ಮಿಬ್ಬರ ಪ್ರೀತಿಗೆ 10 ವರ್ಷ’ ಎಂದು ಬರೆದುಕೊಂಡಿದ್ದರು. ಈ ಸಂಗತಿ ಫ್ಯಾನ್ಸ್​ ಅಚ್ಚರಿಗೆ ಕಾರಣವಾಗಿತ್ತು. ಇದಾದ ಬಳಿಕ ವಿಜಯಲಕ್ಷ್ಮೀಯವರು ಪವಿತ್ರಾ ಗೌಡ ಅವರ ಮೊದಲ ಗಂಡನ ಜೊತೆಗಿನ ಪೋಸ್ಟ್​ ಹಂಚಿಕೊಂಡಿದ್ದಲ್ಲದೆ, ತನ್ನ ಪತಿ ಜೊತೆಗಿನ ಫೋಟೋದ ಕುರಿತಾಗಿ ಆಕ್ರೋಶ ಹೊರಹಾಕಿದ್ದರು.

ಇದೀಗ ಪವಿತ್ರಾ ಗೌಡ ಮತ್ತೊಂದು ಪೋಸ್ಟ್​ ಹಂಚಿಕೊಂಡಿದ್ದು, ಅದರಲ್ಲಿ ಮಗಳು ಖುಷಿ ಗೌಡ ಯಾರ ಮಗಳೆಂಬುದನ್ನು ಹೇಳಿದ್ದಾರೆ. ಮಾತ್ರವಲ್ಲದೆ, ಮೊದಲ ಪತಿಯ ಜೊತೆಗಿನ ವಿಚ್ಛೇದನ ಬಗ್ಗೆ ಹೇಳಿಕೊಂಡಿದ್ದಾರೆ. ಸಂಜಯ್​ ಎಂಬವರ ಜೊತೆಗೆ ಮೊದಲು ವಿವಾಹವಾಗಿ ಅವರಿಂದ ಖುಷಿ ಎಂಬ ಮಗಳು ಪಡೆದೆನು. ಆದರೆ ಆ ಬಳಿಕ ಕೆಲವು ಸಮಸ್ಯೆಗಳಿಂದ ನಾನು ಸಂಜಯ್​ ದೂರವಾದೆವು. ಲ್ಲಿಯವರಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ. ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ ಎಂದು ಹೇಳಿದ್ದಾರೆ.

ಪವಿತ್ರಾ ಗೌಡ 18 ನೇ ವಯಸ್ಸಿಗೆ ಸಂಜಯ್ ಸಿಂಗ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಬಳಿಕ ಆತನಿಂದ ಒಂದು ಹೆಣ್ಣು ಮಗುವನ್ನು ಪಡೆದರು. ಪವಿತ್ರಾ ಮೊದಲ ಪತಿ ಸಂಜಯ್ ಸಿಂಗ್ ದಿನಸಿ ಅಂಗಡಿ ವ್ಯಾಪಾರ ಮಾಡುತ್ತಿದ್ದು, ಸದ್ಯ ಪವಿತ್ರ ಗೌಡ ಆತನಿಂದ ದೂರ ಇದ್ದಾರೆ.

ದರ್ಶನ್​ ಪರಿಚಯ ಹೇಗಾಯ್ತು?

ಪವಿತ್ರಾ ಗೌಡಗೆ ‘ಜಗ್ಗುದಾದ’ ಸಿನಿಮಾ ಆಡಿಷನ್ ಕೊಡಲು ಹೋಗಿದ್ದ ವೇಳೆ ದರ್ಶನ್ ಪರಿಚಯವಾಗುತ್ತದೆ. ಅಂದಿನಿಂದ ಪವಿತ್ರಾ ಗೌಡ ದರ್ಶನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಪರಿಚಯವಾದ ನಂತರ ಪತಿ ಸಂಜಯ್​ನಿಂದ ಪವಿತ್ರ ದೂರವಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಇನ್ನು ಪವಿತ್ರಾ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾ ಮೂಲಕ ಬಣ್ಣ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಬೆರಳೆಣಿಕೆಯ ಸಿನಿಮಾ ಮಾಡಿದ್ದರು. ಆದರೆ ಆ ಸಿನಿಮಾಗಳಿ ಆಷ್ಟೊಂದು ಹೆಸರು ಮಾಡಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖುಷಿ ಯಾರ ಮಗಳು ಗೊತ್ತಾ? ನಿಜ ಸಂಗತಿ ಹೇಳಿಕೊಂಡ ಪವಿತ್ರಾ ಗೌಡ

https://newsfirstlive.com/wp-content/uploads/2024/01/Darshan-8.jpg

Load More