/newsfirstlive-kannada/media/post_attachments/wp-content/uploads/2024/12/Vijayalakshmi.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದಾಗಿನಿಂದ ಪರಿ ಪರಿಯಾಗಿ ಪರದಾಡಿದ್ದು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್​. ಅವರು ಕೈಮುಗಿಯದ ಒಂದೇ ಒಂದು ದೇವಸ್ಥಾನವೇ ಇಲ್ಲವೇನೋ ಅನ್ನುವ ರೀತಿಯಲ್ಲಿ ಅವರು ದೇಗುಲಗಳ, ದೇವರ ಶಕ್ತಿಗಳ ಮೊರೆ ಹೋದರು. ನನ್ನ ಪತಿಗೆ ಎಲ್ಲೂ ಕಷ್ಟವಾಗದಂತೆ, ವರ್ಷಾನುಗಟ್ಟಲೇ ಜೈಲಿನಲ್ಲಿ ಕೊಳೆಯದಂತೆ ಮಾಡು ದೇವರೇ ಎಂದು ಬೇಡಿಕೊಂಡಿದ್ದರು. ಸದ್ಯಕ್ಕೆ ವಿಜಯಲಕ್ಷ್ಮೀ ಅವರ ನಿರಂತರ ಪ್ರಾರ್ಥನೆ ಫಲಿಸಿದೆ. ದರ್ಶನ್ ಸೇರಿ ಏಳು ಜನ ಆರೋಪಿಗಳಿಗೆ ಈಗ ಪೂರ್ಣಾವಧಿ ಜಾಮೀನು ಸಿಕ್ಕಿದೆ. ಅದೇ ಖುಷಿಯಲ್ಲಿದ್ದಾರೆ ವಿಜಿ ದರ್ಶನ್​.
ಇದನ್ನೂ ಓದಿ:ದರ್ಶನ ಗ್ಯಾಂಗ್​ಗೆ ಜಾಮೀನು; ಬೇಸರದಲ್ಲಿ ರೇಣುಕಾಸ್ವಾಮಿ ತಂದೆ ಹೇಳಿದ್ದೇನು?
ದರ್ಶನ್ ಬೇಲ್​ಗಾಗಿ ವಿಜಯಲಕ್ಷ್ಮೀ ಬಳ್ಳಾರಿಯ ಕನಕ ದುರ್ಗಮ್ಮನ್ನ ಮೊರೆ ಹೋಗಿದ್ದರು. ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದಿದ್ದರು. ಮಧ್ಯಂತರ ಜಾಮೀನು ಸಿಕ್ಕಾಗ ಕನಕ ದುರ್ಗಮ್ಮ ದೇವಿಯ ಮೊರೆ ಹೋಗಿದ್ದ ವಿಜಯಲಕ್ಷ್ಮೀ ದರ್ಶನ್​ ಕುಂಕುಮ ಪ್ರಸಾದವನ್ನು ಪಡೆದಿದ್ದರು. ಒಟ್ಟು ನಾಲ್ಕು ಬಾರಿ ದುರ್ಗಮ್ಮ ದೇವಿ ಪೂಜೆ ಮಾಡಿದ್ದರು. ಪತಿಯ ಕಷ್ಟಕ್ಕೆ ಮರುಗಿದ್ದ ವಿಜಯಲಕ್ಷ್ಮೀ ದರ್ಶನ್, ದೇಗುಲದಲ್ಲಿಯೇ ಕಣ್ಣೀರು ಇಟ್ಟಿದ್ದರು.
ಇದನ್ನೂ ಓದಿ: ಬರೋಬ್ಬರಿ 6 ತಿಂಗಳ ಬಳಿಕ ರಿಲೀಫ್; ಪವಿತ್ರ ಗೌಡ ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?
ಹೀಗೆ ಮಠ ಮಂದಿರಗಳನ್ನು ಸುತ್ತುತ್ತಾ ಪತಿಯ ಬಿಡುಗಡೆಗಾಗಿ ಸೆರಗೊಡ್ಡಿ ಬೇಡುತ್ತಲೇ ಇದ್ದ ವಿಜಯಲಕ್ಷ್ಮೀ ಅವರ ಪ್ರಾರ್ಥನೆ ಕೊನೆಗೂ ಫಲಿಸಿದೆ. ವಿಜಯಲಕ್ಷ್ಮೀಗೆ ಸದ್ಯ ಖುಷಿ ಹಂಚಿಕೊಳ್ಳಲು ಪದಗಳು ಉಳಿದಿಲ್ಲ. ಎಲ್ಲಾ ಸಂಭ್ರಮವನ್ನು ಒಂದೇ ಒಂದು ಫೋಟೋದಲ್ಲಿ ಆಚೆ ಹಾಕಿದ್ದಾರೆ. ನನ್ನ ಎಲ್ಲಾ ಹರಕೆಗಳು ಪ್ರಾರ್ಥನೆಗಳು ಹುಸಿ ಹೋಗಲಿಲ್ಲ ಎಂಬ ಅರ್ಥದಲ್ಲಿ ಕೈಯಲ್ಲಿ ಹೂವು ಹಿಡಿದು ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮೀ ದರ್ಶನ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us