/newsfirstlive-kannada/media/post_attachments/wp-content/uploads/2025/04/vij-darshan2.jpg)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಇಂದು ಮೆಜೆಸ್ಟಿಕ್​ನಲ್ಲಿರೋ ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಇಂದು ಅಣ್ಣಮ್ಮ ದೇವಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಹರಕೆ ತೀರಿಸಿದ್ದಾರೆ.
ಇದನ್ನೂ ಓದಿ:ವಿಚಾರಣೆಯ ರಣವ್ಯೂಹದಲ್ಲಿ ಉಗ್ರ ರಾಣಾ.. ಭಾರತಕ್ಕೆ ಕರೆ ತರ್ತಿದ್ದಂತೆ ಏನೆಲ್ಲ ಆಯ್ತು..?
ಈ ಹಿಂದೆ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದರು. ಆಗ ಸಹೋದರ ದಿನಕರ್ ತೂಗುದೀಪ ಅಣ್ಣಮ್ಮ ದೇವಾಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದರಂತೆ. ಸದ್ಯ ಜಾಮೀನು ಪಡೆದು ದರ್ಶನ್ ಜೈಲಿನಿಂದ ಆಚೆ ಬಂದಿದ್ದಾರೆ. ಇದೀಗ ದಿನಕರ್ ತೂಗುದೀಪ ಅವರ ಆಸೆಯಂತೆ ವಿಜಯಲಕ್ಷ್ಮಿ ಅಣ್ಣಮ್ಮ ದೇವರ ಸನ್ನಿಧಿಗೆ ಬಂದಿದ್ದಾರೆ.
ದಿನಕರ್ ಪರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹರಕೆ ತೀರಿಸಿದ್ದಾರೆ. ಬೆಳಗ್ಗೆ ಅಣ್ಣಮ್ಮ ದೇವಾಸ್ಥಾನಕ್ಕೆ ಭೇಟಿ ಕೊಟ್ಟಿದ್ದ ವಿಜಯಲಕ್ಷ್ಮಿ ದೇವಿಗೆ ವಿಶೇಷ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಅಣ್ಣಮ್ಮನಿಗೆ ಮಡಿಲಕ್ಕಿ ಮತ್ತು ಸೀರೆ ಕೊಟ್ಟು ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ