ಕಾಟೇರನಿಗೆ ಶಕ್ತಿ ತುಂಬಲು ಆ ದೇವಿ ಮೊರೆ ಹೋದ ವಿಜಯಲಕ್ಷ್ಮಿ; ದರ್ಶನ್‌ಗಾಗಿ ಬೇಡಿಕೊಂಡಿದ್ದೇನು?

author-image
Veena Gangani
Updated On
ಕಾಟೇರನಿಗೆ ಶಕ್ತಿ ತುಂಬಲು ಆ ದೇವಿ ಮೊರೆ ಹೋದ ವಿಜಯಲಕ್ಷ್ಮಿ; ದರ್ಶನ್‌ಗಾಗಿ ಬೇಡಿಕೊಂಡಿದ್ದೇನು?
Advertisment
  • ಮತ್ತೆ ಕಾಮಾಕ್ಯ ದೇವಸ್ಥಾನಕ್ಕೆ ಹೋದ ವಿಜಯಲಕ್ಷ್ಮೀ ದರ್ಶನ್​
  • ಪತಿ ಜೈಲಿಗೆ ಹೋಗಿದ್ದಾಗಲೂ ಈ ಶಕ್ತಿಪೀಠಕ್ಕೆ ಭೇಟಿ ಕೊಟ್ಟಿದ್ದ ಪತ್ನಿ
  • ಗುವಾಹಟಿ ನಗರದ ನೀಲಾಚಲ ಬೆಟ್ಟದ ಮೇಲಿದೆ ಈ ದೇವಸ್ಥಾನ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ಜೈಲು ಸೇರಿದ್ದ ದರ್ಶನ್ ಅಂಡ್​ ಸದ್ಯ ಬೇಲ್​ ಮೇಲೆ ಆಚೆ ಬಂದಿದ್ದಾರೆ. ಹತ್ಯೆ ಆರೋಪದ ಮೇಲೆ ಜೈಲಿಗೆ ಹೋಗಿದ್ದ ನಟ ದರ್ಶನ್​ ಅವರನ್ನು ಹೊರ ತರೋದಕ್ಕೆ ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟಗಳನ್ನು ಮಾಡುತ್ತಿದ್ದರು.

ಇದನ್ನೂ ಓದಿ:ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. 10 ಗ್ರಾಂಗೆ ಎಷ್ಟು ಹೆಚ್ಚಳ ಆಗಿದೆ?

publive-image

ಅಷ್ಟೇ ಅಲ್ಲದೇ ಸಾಕಷ್ಟು ದೇವಾಲಯಗಳಿಗೆ ಭೇಟಿ ಕೂಡ ಕೊಟ್ಟಿದ್ದರು. ಆ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಕ್ಯಾ ದೇವಿ ಮಂದಿರಕ್ಕೂ ಭೇಟಿ ನೀಡಿದ್ದರು. ಕಾಮಾಕ್ಯ ದೇವಿ ದರ್ಶನ ಪಡೆದು ಬಂದ ಕೆಲವೇ ಸಮಯದಲ್ಲಿ ದರ್ಶನ್​ ಅವರಿಗೆ ಬೇಲ್ ಸಿಕ್ಕಿ ಜೈಲಿನಿಂದ ಬಿಡುಗಡೆ ಕೂಡ ಆಗಿದ್ದರು. ಇದಾದ ಬಳಿಕ ಪತಿ ದರ್ಶನ್ ಜೈಲಿನಿಂದ ಆಚೆ ಬಂದ ಸಂದರ್ಭದಲ್ಲೂ ವಿಜಯಲಕ್ಷ್ಮೀ ಕಾಮಾಕ್ಯ ಮಂದಿರದ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಮತ್ತೆ ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ.

publive-image

ಹೌದು, ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮತ್ತೆ ಕಾಮಾಕ್ಯ ದೇವಿ ದರ್ಶನ ಪಡೆದು ಬಂದಿದ್ದಾರೆ. ಕಾಮಾಕ್ಯ ದೇವಾಲಯವು ಅಸ್ಸಾಂನ ಗುವಾಹಟಿ ನಗರದ ನೀಲಾಚಲ ಬೆಟ್ಟದ ಮೇಲಿದೆ. ಇದು ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡು ದಾಸ ಮಹಾವಿದ್ಯಾ ದಂತೆ ತಾಯಿ ದೇವಿಯ ವಿವಿಧ ರೂಪಗಳಿಗೆ ವೈಯಕ್ತಿಕ ದೇವಾಲಯಗಳ ಸಂಕೀರ್ಣದಲ್ಲಿರುವ ಮುಖ್ಯ ದೇವಾಲಯವಾಗಿದೆ. ಭಕ್ತರ ನಂಬಿಕೆ ಪ್ರಕಾರ, ಈ ದೇಗುಲದಲ್ಲಿ ಯಾರಾದರೂ ಹರಕೆ ಹೊತ್ತಿದ್ದರೆ, ಆ ಕಾರ್ಯವು ಖಂಡಿತವಾಗಿಯೂ ನೆರವೇರುತ್ತೆ ಎನ್ನುವ ನಂಬಿಕೆ ಇದೆ. ಹೀಗಾಗಿ ಮತ್ತೆ ವಿಜಯಲಕ್ಷ್ಮಿ ಅವರು ಕಾಮಕ್ಯ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ.

ಇದೇ ಫೋಟೋವನ್ನು ಇನ್​ಸ್ಟಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಂಪು ಬಣ್ಣದ ಚೂಡಿದಾರ ಧರಿಸಿಕೊಂಡಿರೋ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೊಗೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅತ್ತಿಗೆ ಅಣ್ಣನಿಗಾಗಿ ಹರಕೆ ತೀರಿಸೋಕೆ ಹೋಗಿದ್ದಾರೆ ಅಂತ ಕಾಮೆಂಟ್ಸ್​ ಸಹ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment