/newsfirstlive-kannada/media/post_attachments/wp-content/uploads/2024/07/DARSHAN_WIFE-3.jpg)
ಮನೆಯೂಟಕ್ಕಾಗಿ ಕೋರ್ಟ್​ ಮೊರೆ ಹೋಗಿರುವ ನಟ ದರ್ಶನ್​ಗೆ ನಾಳೆ ಡಿ-ಡೇ​. ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್​ಗೆ ಮನೆ ಊಟ ಕೊಡ್ಬೇಕಾ.. ಬೇಡ್ವಾ ಅನ್ನೋದು ನಾಳೆ ಮ್ಯಾಜಿಸ್ಟ್ರೇಟ್​ ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ. ಇಂತಹ ಸಮಯದಲ್ಲೇ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ.
ಸಪ್ತಪದಿ ತುಳಿದು, ತಾಳಿ ಕಟ್ಟಿದ ಪತಿ ಒಳ್ಳೆಯದನ್ನೇ ಮಾಡಲಿ ಕೆಟ್ಟದನ್ನೇ ಮಾಡಲಿ, ಪತ್ನಿಗೆ ಪತಿಯೇ ಪರದೈವ. ಆತ ಏನೇ ತಪ್ಪು ಮಾಡಿರಲಿ. ಕಷ್ಟದಲ್ಲಿ ಸಿಲುಕಿದ್ರೆ ಪತ್ನಿಯ ಮನಸ್ಸು ವಿಲವಿಲ ಒದ್ದಾಡುತ್ತೆ. ನಟ ದರ್ಶನ್​ ಅವರ ಧರ್ಮ ಪತ್ನಿ ವಿಜಯಲಕ್ಷ್ಮಿ ಪರಸ್ಥಿತಿಯೂ ಹಾಗೇ ಇದೆ. ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ಪತಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರಬೇಕೆಂದು ವಿಜಯಲಕ್ಷ್ಮಿ ಪ್ರತಿನಿತ್ಯ ಒದ್ದಾಡುತ್ತಿದ್ದಾರೆ.
ಇತ್ತ ದರ್ಶನ್​ ಅಭಿಮಾನಿಗಳು ವಿಜಯಲಕ್ಷ್ಮಿ ಭೇಟಿಗೆ ಸಮಯಾವಕಾಶ ಕೊಡ್ತಿಲ್ಲ ಎಂದು ರಾಮನಗರದಲ್ಲಿ ಡಿಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇವತ್ತು ದರ್ಶನ್​ ಪತ್ನಿ ವಿಜಯಲಕ್ಷ್ಮಿ ಡಿಕೆಶಿಯನ್ನು ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿದ್ದಾರೆ. ಆದ್ರೆ ಜೈಲೂಟಕ್ಕೆ ಒಗ್ಗಿಕೊಳ್ಳಲಾಗದೇ ಮನೆಯೂಟಕ್ಕೆ ಅವಕಾಶ ಕೋರಿ ಕೋರ್ಟ್​ ಮೊರೆ ಹೋಗಿದ್ದಾರೆ. ನಟ ದರ್ಶನ್​ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್​ ಕೋರ್ಟ್​ ನಾಳೆಗೆ ತೀರ್ಪು ಕಾಯ್ದಿರಿಸಿದೆ.
ಕೋರ್ಟ್‌ನಲ್ಲಿ ಆಗಿದ್ದೇನು?
ದರ್ಶನ್​ ಪರ ವಕೀಲ
ಡಯೇರಿಯಾದಿಂದ ಜೈಲು ಆಹಾರ ಜೀರ್ಣಿಸಿಕೊಳ್ಳಲು ಆಗ್ತಿಲ್ಲ
ಜೈಲ್​ ನಿಯಮ ಸೆಕ್ಷನ್​​ 30ರಡಿ ಹೊರಗಿನ ಊಟ ಪಡೆಯಬಹುದು
ವಿಚಾರಣಾಧೀನ ಕೈದಿಯ ಮೂಲಭೂತ ಹಕ್ಕು ಕಸಿಯುವಂತಿಲ್ಲ
ಮಾನವೀಯತೆಯ ಪ್ರಕಾರ ಆಹಾರ ನೀಡಲು ನಿರಾಕರಣೆ ಸರಿಯಲ್ಲ
ಎಸ್​ಪಿಪಿ ಪ್ರಸನ್ನಕುಮಾರ್​
ನಾನು ಊಟ ಕೊಡಬೇಡಿ ಅಂದಿಲ್ಲ. ನಿಯಮ ಏನಿದೆ ಹೇಳಿದ್ದೀನಿ
ಕೈದಿಗಳಿಗೆ ಕೆಲವು ಷರತ್ತುಗಳಿವೆ. ಅವರು ಸ್ಟಾರು ಗೀರು ಅಂತಾರೆ
ಕಾನೂನಿನ ಮುಂದೆ ಶ್ರೀಮಂತ, ಸ್ಟಾರ್ & ದೊಡ್ಡವರು ಅಂತಾ ಏನಿಲ್ಲ
ನೀವು ಸಿನಿಮಾ ಆ್ಯಕ್ಟರ್ ಆಗಿದ್ದು ತಪ್ಪಲ್ಲ, ಮರ್ಡರ್ ಮಾಡಿದ್ದು ತಪ್ಪು
ವಾದ-ಪ್ರತಿವಾದ ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿರುವ ಕೋರ್ಟ್​
ದರ್ಶನ್​ ಮಗನ ಸ್ಕೂಲ್​ ವಿಷ್ಯವಾಗಿ ಡಿಕೆಶಿ ಭೇಟಿ:ನಿರ್ದೇಶಕ ಪ್ರೇಮ್
ಆದ್ರೆ ಇವತ್ತು ನಟ ದರ್ಶನ್​ ಪತ್ನಿ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿದ್ದಾರೆ. ದರ್ಶನ್​ ಸಹೋದರ ದಿನಕರ್​ ತೂಗುದೀಪ್ ಮತ್ತು ನಿರ್ದೇಶಕ ಪ್ರೇಮ್​​ ಜೊತೆ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ವಿಜಯಲಕ್ಷ್ಮಿ ಆಗಮಿಸಿದ್ದರು. ಬಳಿಕ ಡಿಸಿಎಂ ಅವರನ್ನು ಭೇಟಿಯಾಗಿ ಪತಿಯ ಪ್ರಕರಣದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇನ್ನು ಡಿಸಿಎಂ ಡಿಕೆಶಿ ಭೇಟಿ ಬಳಿಕ ನಟ ಕಮ್​ ನಿರ್ದೇಶಕ ಜೋಗಿ ಪ್ರೇಮ್​ ಮಾಧ್ಯಮಗಳ ಜೊತೆ ಮಾತನಾಡಿದ್ರು. ದರ್ಶನ್​ ನನ್ನ ಸ್ನೇಹಿತ, ನನ್ನ ಫ್ಯಾಮಿಲಿ, ಕಷ್ಟ-ಸುಖ ಮಾತಾಡ್ತೀವಿ. ಇವತ್ತು ಡಿಸಿಎಂ ಜೊತೆ ದರ್ಶನ್ ಮಗ ವಿನಿಶ್​ ಸ್ಕೂಲ್ ವಿಚಾರ ಮಾತಾಡಿದ್ವಿ. ನಮ್ಮ ಭೇಟಿಯಲ್ಲಿ ದರ್ಶನ್ ಕೇಸ್​ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕೊನೆಗೂ ವಿಕ್ಕಿ ಕೌಶಲ್ ಮನಗೆದ್ದ ಸೀರೆ ನಾರಿ.. ಲೇಡಿ ‘ತೌಬಾ ತೌಬಾ’ ಡ್ಯಾನ್ಸ್‌ಗೆ ಫಿದಾ; ಏನಂದ್ರು ಗೊತ್ತಾ?
‘ಯಾವ ಬಾಸ್ ನಂಗೆ ಗೊತ್ತಿಲ್ಲ.. ಇಂಟರ್ ಪಿಯರ್ ಆಗಲ್ಲ’:ಡಿಸಿಎಂ
ಕಳೆದ ರಾತ್ರಿ ಡಿಸಿಎಂ ಡಿಕೆಶಿ ರಾಮನಗರದ ಕರಗೋತ್ಸವದಲ್ಲಿ ಪಾಲ್ಗೊಂಡಿದ್ರು. ಈ ವೇಳೆ ದರ್ಶನ್​ ಅಭಿಮಾನಿಗಳು ಫೋಟೋ ಹಿಡಿದು ಡಿಕೆಶಿ ಮುಂದೆ ಘೋಷಣೆ ಕೂಗಿದ್ರು. ಇನ್ನು ಇವತ್ತು ನಟ ದರ್ಶನ್​ ಪತ್ನಿ ಭೇಟಿಯಾಗಿ ಎಲ್ಲ ಗೊಂದಲಗಳಿಗೂ ಡಿಸಿಎಂ ತೆರೆ ಎಳೆದಿದ್ದಾರೆ. ನನಗೆ ಯಾವ ಬಾಸ್​ ಗೊತ್ತಿಲ್ಲ. ಇದರಲ್ಲಿ ನಾನು ಇಂಟರ್​ ಪಿಯರ್​ ಕೂಡ ಆಗಲ್ಲ. ದರ್ಶನ್​ ಪತ್ನಿ ಮಗನನ್ನು ಮತ್ತೆ ನಿಮ್ಮ ಸ್ಕೂಲ್​ಗೆ ಸೇರಿಸಿಕೊಳ್ಳಿ ಎಂದು ಕೇಳಲು ಬಂದಿದ್ವು ಅಷ್ಟೆ. ಮಗುಗೆ ಸಹಾಯ ಮಾಡ್ತೀನಿ ಎಂದಿದ್ದಾರೆ.
ಅದೇನೆ ಇರಲಿ. ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ನನಗೆ ಜೈಲೂಟ ತಿನ್ನೋಕೆ ಆಗಲ್ಲ. ಮನೆಯೂಟ ಬೇಕೆಂದು ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಸಂಬಂಧ ನಾಳೆ ಕೋರ್ಟ್​ ತೀರ್ಪು ಬರಲಿದ್ದು, ಇಂಥ ಸಂದರ್ಭದಲ್ಲೇ ದರ್ಶನ್​ ಪತ್ನಿ ಡಿಸಿಎಂರನ್ನು ಭೇಟಿಯಾಗಿ ಸಹಜವಾಗಿ ಹಲವು ಪ್ರಶ್ನೆಗಳಿಗೆ ದಾರಿ ಆಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ