Advertisment

Darshan: ಮನೆಯೂಟನಾ? ಜೈಲೂಟವೇ ಗತಿನಾ? ಇಂದು ದರ್ಶನ್​ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ

author-image
AS Harshith
Updated On
ಕಂಬಿ ಹಿಂದಿರೋ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ಗೆ ಇನ್ನೆಷ್ಟು ದಿನ ಜೈಲೂಟ? ಹೈಕೋರ್ಟ್‌ ಹೇಳಿದ್ದೇನು?
Advertisment
  • ಮನೆಯೂಟಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದರ್ಶನ್
  • ಅದೊಂದು ವಿಚಾರದಿಂದ ಯಡವಟ್ಟು ಮಾಡಿಕೊಂಡ ದಾಸ
  • ಇಂದು ನಿರ್ಧಾರವಾಗಲಿದೆ ದರ್ಶನ್​ಗೆ ಮನೆಯೂಟನಾ? ಜೈಲೂಟನಾ?

ರೇಣುಕಾಸ್ವಾಮಿ ಮರ್ಡರ್​ ಮಿಸ್ಟ್ರಿ ಬಗೆದಷ್ಟು ಕುತೂಹಲ ಹೆಚ್ಚಿಸುತ್ತಿದೆ. ಪೊಲೀಸರ ತನಿಖೆಯಲ್ಲಿ ಹೊಸ ಹೊಸ ರಹಸ್ಯಗಳು ಬಯಲಾಗ್ತಿವೆ. ಈ ಮಧ್ಯೆ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ನರಕಯಾತನೆ ಅನುಭವಿಸ್ತಿದ್ದಾರೆ. ಜೈಲೂಟ ಸೇರದೆ ದಿನದಿನವೂ ಸೊರಗಿ ಹೋಗ್ತಿದ್ದಾರೆ. ಜೊತೆಗೆ ಮನೆಯೂಟಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇವತ್ತು ರಿಟ್ ಅರ್ಜಿ ವಿಚಾರಣೆಗೆ ಬರಲಿದ್ದು, ದಾಸನಿಗೆ ಮನೆಯ ಭೋಜನ ಸಿಗುತ್ತಾ? ಇಲ್ವಾ? ಎಂಬ ಟೆನ್ಶನ್ ಶುರುವಾಗಿದೆ.

Advertisment

ದರ್ಶನ್​ ಪರಪ್ಪನ ಅಗ್ರಹಾರ ಪಾಲಾಗಿ ಬರೋಬ್ಬರಿ 30 ದಿನಗಳು ಕಳೆದಿವೆ. ಒಂದ್ಕಡೆ ಕಣ್ಣಿಗೆ ನಿದ್ದೆಯಿಲ್ಲ. ಜಾಮೀನು ಸಿಗುವ ಯಾವ ಲಕ್ಷಣವೂ ಕಾಣಿಸ್ತಿಲ್ಲ. ಮತ್ತೊಂದ್ಕಡೆ ಊಟ ಸೇರ್ತಿಲ್ಲ. ಮನೆ ಊಟವೂ ಸಿಗ್ತಿಲ್ಲ. ಈ ನಡುವೆ ಸೆರೆಮನೆ ವಾಸವೂ ಮುಂದುವರೆಯುತ್ತಲೇ ಇದೆ.

publive-image

ಇವತ್ತು ‘ಕಾಟೇರ’ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ

ಮನೆ ಊಟ, ಪುಸ್ತಕ, ಹಾಸಿಗೆಗಾಗಿ ಮನವಿ ಮಾಡಿ ದರ್ಶನ್​ ಸಲ್ಲಿಸಿದ್ದ ರಿಟ್​ ಅರ್ಜಿ ವಿಚಾರಣೆ ಕಳೆದ ಶನಿವಾರ ನಡೆದಿತ್ತು. ಅಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಹೈಕೋರ್ಟ್​ ನಿರ್ದೇಶನದಂತೆ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ನಟ ದರ್ಶನ್​ ಪರ ವಕೀಲರು ಅರ್ಜಿ ಸಲ್ಲಿಸಿದ್ದು. ಇದೀಗ ಇವತ್ತು ದರ್ಶನ್ ಸಲ್ಲಿಕೆ ಮಾಡಿದ್ದ ಮನೆಯೂಟದ ರಿಟ್‌ ಅರ್ಜಿ ವಿಚಾರಣೆಗೆ ಬರಲಿದೆ. ಪರಪ್ಪನ ಅಗ್ರಹಾರದಲ್ಲಿರೋ ದಾಸನಿಗೆ ಮನೆಯೂಟ ಸಿಗುತ್ತಾ? ಇಲ್ವಾ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಬಚ್ಚಿಟ್ಟ ಪ್ರೀತಿಯನ್ನ ಇಂದು ಬಿಚ್ಚಿಡಲಿದ್ದಾರೆ ತರುಣ್​ ಸುಧೀರ್​.. ನಿರ್ದೇಶಕನ ಬಾಳಲ್ಲಿ ಬೆಳಕಿನ ಕವಿತೆ ಓದಲಿದ್ದಾರೆ ಈ ನಟಿ!

Advertisment

ಮನೆಯೂಟಕ್ಕೆ ಅರ್ಜಿ ಸಲ್ಲಿಸಿ ಯಡವಟ್ಟು ಮಾಡಿದ್ರಾ ‘ದಾಸ’?

ಇನ್ನೂ ಮನೆಯೂಟಕ್ಕಾಗಿ ಹೈಕೋರ್ಟ್‌ಗೆ ಏಕಾಏಕಿ ಅರ್ಜಿ ಸಲ್ಲಿಸಿ ದರ್ಶನ್‌ ಪೇಚಿಗೆ ಸಿಲುಕಿದ್ರಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ 2021ರ ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಸರ್ವೀಸ್ ಮ್ಯಾನ್ಯುಲ್ ಇದರ ಪ್ರಕಾರ ಮನೆ ಊಟ ಪಡೆಯಲು ಅವಕಾಶ ಇದೆ. ಆದ್ರೆ, ಇದರ ಪ್ರಕಾರ ಮನೆ ಊಟ ಪಡೆಯಲು ಬಯಸುವ ಜೈಲು ಬಂಧಿ ಮೊದಲು ಕಾರಾಗೃಹಗಳ ಐಜಿಗೆ ಮನವಿ ಮಾಡಬೇಕು. ಅಥವಾ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಬೇಕು. ಇಲ್ಲಿ ಅವಕಾಶ ಸಿಗದೇ ಇದ್ದಾಗ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ, ದರ್ಶನ್ ಪರ ವಕೀಲರು ಏಕಾಏಕಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 2 ವಾರ ವಿಚಾರಣೆಯಲ್ಲಿದ್ದ ಅರ್ಜಿ ಮ್ಯಾಜಿಸ್ಟ್ರೇಟ್ ಕೋರ್ಟ್ ವರ್ಗಾವಣೆಯಾಗಿದೆ. ಹೀಗೆ ತಪ್ಪು ಕಾನೂನು ಕ್ರಮ ದರ್ಶನ್ ಮನೆಯೂಟಕ್ಕೆ ಕಂಟಕವಾಯ್ತಾ?ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

publive-image

ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಯುವಕ.. 3 ದಿನಗಳ ಬಳಿಕ ಶವ ಪತ್ತೆ 

ಒಟ್ಟಾರೆ, ಇವತ್ತು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದರ್ಶನ್ ಮನೆಯೂಟ ರಿಟ್‌ ಅರ್ಜಿ ವಿಚಾರಣೆಗೆ ಬರಲಿದೆ. ಆದ್ರೆ, ತಪ್ಪು ಕಾನೂನು ಕ್ರಮದಿಂದ ದಾಸನಿಗೆ ಮನೆಯೂಟ ಸಿಗುತ್ತಾ? ಇಲ್ಲಾ ಜೈಲೂಟವೇ ಗತಿನಾ ಅನ್ನೋದು ಇವತ್ತು ಗೊತ್ತಾಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment