newsfirstkannada.com

×

ದರ್ಶನ್ 14 ದಿನಗಳ ನ್ಯಾಯಾಂಗ ಬಂಧನ ಅಂತ್ಯ.. ಅಂದುಕೊಂಡಿದ್ದ ಬೇಡಿಕೆಗಳಿಂದು ಈಡೇರುತ್ತಾ?

Share :

Published July 18, 2024 at 7:12am

    ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರಿಗೆ 90 ದಿನ ಕಾಲಾವಕಾಶ

    ಚಾರ್ಜ್ ಶೀಟ್ ಸಲ್ಲಿಕೆಗಾಗಿ ಕಾಯುತ್ತಿರೋ ದರ್ಶನ್ ವಕೀಲ

    14 ದಿನಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿರುವ ನಟ ದರ್ಶನ್​, ಜೈಲಿನ ವಾತಾವರಣದಲ್ಲಿ ಕೆಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವತ್ತು ಅವರ ನ್ಯಾಯಾಂಗ ಬಂಧನ ಮುಗಿಯಲಿದ್ದು, ಮತ್ತೆ ಜೈಲು ವಾಸ ಮುಂದುವರೆಯುವ ಸಾಧ್ಯತೆ ಇದೆ.

ಇಂದು ವಿಡಿಯೋ ಕಾನ್ಫರೆನ್ಸ್​ನಲ್ಲಿ ಜಡ್ಜ್​ ಮುಂದೆ ದರ್ಶನ್​ ಹಾಜರು

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿದೆ. ಸದ್ಯ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ. ದರ್ಶನ್ & ಗ್ಯಾಂಗ್ ಜೈಲು ಸೇರಿ ತಿಂಗಳ ಮೇಲಾಗಿದೆ. ಸದ್ಯ ಎಲ್ಲರೂ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆದರೆ ಇಂದು ದರ್ಶನ್ ಹಾಗೂ ಅವರ ಗ್ಯಾಂಗ್​ನ 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಅವರನ್ನು ಪೊಲೀಸರು ಮತ್ತೆ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: ಮಳೆಯ ರಣಾರ್ಭಟ.. ಇಂದು ಈ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ನಟ ದರ್ಶನ್​ ಹಾಗೂ ಇತರ ಆರೋಪಿಗಳಿಗೆ ಏಕೆ ಜಾಮೀನು ನೀಡಬಾರದು ಎಂಬುದಕ್ಕೆ ದೊಡ್ಡ ಪಟ್ಟಿಯನ್ನ ಸಿದ್ಧಪಡಿಸಿರೋ ಪೊಲೀಸರು, ಇವತ್ತು ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿ ಸಲ್ಲಿಸಲಿದ್ದಾರೆ. ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್​ರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ರೇಣುಕಾಸ್ವಾಮಿ ಕೊಲೆ ಮಾಡಿರೋ ಟೀಂಗೆ ಮತ್ತೆ ನ್ಯಾಯಾಂಗ ಬಂಧನ ಮುಂದುವರೆಯೋದು ಫಿಕ್ಸ್​ ಎನ್ನಲಾಗ್ತಿದೆ.

ಚಾರ್ಜ್ ಶೀಟ್​ ಸಲ್ಲಿಕೆಗೂ ಮುನ್ನ ಕೊಲೆ ಕೇಸ್​ನಲ್ಲಿ ಬೇಲ್ ಇಲ್ಲ

ಇದುವರೆಗೂ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ. ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿ ಅಂತಾ ದರ್ಶನ್ ಪರ ವಕೀಲರು ಕಾಯ್ತಿದ್ದಾರೆ. ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರಿಗೆ 90 ದಿನಗಳ ಕಾಲಾವಕಾಶ ಇರುತ್ತೆ. ಒಂದು ವೇಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ, ಚಾರ್ಜ್ ಶೀಟ್​ ಸಲ್ಲಿಕೆಗೂ ಮುನ್ನ ಕೊಲೆ ಕೇಸ್​ನಲ್ಲಿ ಬೇಲ್ ಸಿಗೋದಿಲ್ಲ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ದರ್ಶನ್ & ಗ್ಯಾಂಗ್​ಗೆ ನ್ಯಾಯಾಂಗ ಬಂಧನವೇ ಗಟ್ಟಿ.

ಇದನ್ನೂ ಓದಿ: ರೈತನಿಗೆ ಅವಮಾನ ಮಾಡಿದ್ದಕ್ಕೆ ಆಕ್ರೋಶ; ಮಾಲ್​ಗೆ ನುಗ್ಗಿ ಕುರ್ಚಿ, ಟೇಬಲ್​​ ಎಲ್ಲಾ ಪುಡಿಪುಡಿ

ಜೈಲು ಊಟಕ್ಕೆ ಬೇಸತ್ತ ನಟ ದರ್ಶನ್​, ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ರಿಟ್ ಅರ್ಜಿ ಸಲ್ಲಿಕೆ ಮಾಡಿ ಹೈಕೋರ್ಟ್ ಮೆಟ್ಟಿಲೇರಿದ್ರು. ಜೈಲಾಧಿಕಾರಿಗೆ ರಿಪೋರ್ಟ್ ನೀಡುವಂತೆ ಹೈಕೋರ್ಟ್ ನೋಟಿಸ್ ನೀಡಿತ್ತು. ಆ ಅರ್ಜಿ ಸಹ ಇಂದು ವಿಚಾರಣೆ ನಡೆಯಲಿದೆ. ಇತ್ತ ದರ್ಶನ್​ಗೆ ಮನೆಯೂಟ ನೀಡುವ ಬಗ್ಗೆ ಜೈಲು ಅಧಿಕಾರಿಗಳಿಂದ ಅಕ್ಷೇಪಣೆ ಸಲ್ಲಿಸಿದ್ದಾರೆ. ದರ್ಶನ್​ಗೆ ಮನೆಯೂಟ ಕೊಟ್ರೆ ಇತರೆ ಆರೋಪಿಗಳು ಕೂಡ ಮನೆಯೂಟ ಕೇಳ್ತಾರೆ. ಎಲ್ಲರಿಗೂ ಕೂಡ ಮನೆಯೂಟ ನೀಡೋದಕ್ಕೆ ಸಾಧ್ಯನಾ? ಹಾಗಾಗಿ ಯಾವುದೇ ಕಾರಣಕ್ಕೂ ಮನೆಯೂಟ ನೀಡಂತೆ ಅಕ್ಷೇಪಣೆ ಸಲ್ಲಿಸಲು ಜೈಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಬಿ. ನಾಗೇಂದ್ರ ಅರೆಸ್ಟ್​​ ಬೆನ್ನಲ್ಲೇ ಪತ್ನಿಗೂ ಸಂಕಷ್ಟ.. ಸತತ 7 ಗಂಟೆ ವಿಚಾರಣೆ!

ಒಟ್ಟಾರೆ, ಅತ್ತ ಪೊಲೀಸರು ಚಾರ್ಜ್​ ಶೀಟ್​ ಸಲ್ಲಿಸಿಲ್ಲ. ಇತ್ತ ಜೈಲು ಅಧಿಕಾರಿಗಳು ಮನೆಯೂಟನೂ ಕೊಡ್ತಿಲ್ಲ. ಇವತ್ತಿನ ವಿಚಾರಣೆ ಬಳಿಕ ನಟ ದರ್ಶನ್​ಗೆ ಮತ್ತೆ ಜೈಲು, ಜೈಲೂಟ ಮುಂದುವರೆಯುವುದು ಕನ್ಫರ್ಮ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ 14 ದಿನಗಳ ನ್ಯಾಯಾಂಗ ಬಂಧನ ಅಂತ್ಯ.. ಅಂದುಕೊಂಡಿದ್ದ ಬೇಡಿಕೆಗಳಿಂದು ಈಡೇರುತ್ತಾ?

https://newsfirstlive.com/wp-content/uploads/2024/06/DARSHAN-JAIL-2.jpg

Load More