/newsfirstlive-kannada/media/post_attachments/wp-content/uploads/2025/01/DARSHAN_supreme_court.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್​ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿ ತಿಂಗಳಷ್ಟೇ ಕಳೆದಿದೆ. ಆಗಲೇ ಜಾಮೀನು ರದ್ದಾಗುವ ಆತಂಕ ಎಲ್ಲರಲ್ಲೂ ಮೂಡಿದೆ. ಕಾರಣ ಕೇಸ್‌ನಲ್ಲಿ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ.
ಪ್ರಕರಣದಲ್ಲಿ 17 ಮಂದಿ ಆರೋಪಿಗಳಿಗೂ ಜಾಮೀನು ದೊರೆತಿದೆ. ಕೃತ್ಯದಲ್ಲಿ ನೇರವಾಗಿ ಭಾಗಿಯಾದ 7 ಆರೋಪಿಗಳ ಜಾಮೀನು ರದ್ದು ಕೋರಿ 1,492 ಪುಟಗಳ ಕಡತವನ್ನ ಸುಪ್ರೀಂಗೆ ಸಲ್ಲಿಸಲಾಗಿದೆ. ವಕೀಲ ಅನಿಲ್ ನಿಶಾನಿ ಮುಖಾಂತರ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಒಟ್ಟು 15 ಅಂಶಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/09/DARSHAN_IT.jpg)
ಮೇಲ್ಮನವಿಯಲ್ಲಿನ 15 ಅಂಶಗಳು
- ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ಅದೇಶ
- ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾದ FIR, ದೂರಿನ ಪ್ರತಿ
- ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿ, ಗ್ರೌಂಡ್ಸ್ ಅಫ್ ಅರೆಸ್ಟ್ ಪ್ರತಿ
- ಪ್ರತ್ಯಕ್ಷದರ್ಶಿ ಸಾಕ್ಷಿ 76, ಸಾಕ್ಷಿ 91ರ ಹೇಳಿಕೆಯ ತರ್ಜುಮೆ ಮಾಡಿದ ಪ್ರತಿ
- ಪೋಸ್ಟ್ ಮಾರ್ಟಂ ಸಂಬಂಧ ವೈದ್ಯರಿಂದ ಪಡೆದ ಅಭಿಪ್ರಾಯ ವರದಿ
- FSL ವರದಿಗಳ ಮೂಲ ಪ್ರತಿ, ಸಿಡಿಆರ್ ವರದಿಯ ಮೂಲ ಪ್ರತಿಗಳು
- ಪಂಚನಾಮೆ ವರದಿಗಳು. ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ
- ಜಾಮೀನು ಅರ್ಜಿ ವಜಾಗೊಳಿಸಿದ್ದ ಸೆಷನ್ಸ್ ಕೋರ್ಟ್​ ಆದೇಶ ಪ್ರತಿ
- ದರ್ಶನ್ ಮಧ್ಯಂತರ ಜಾಮೀನು ಆದೇಶ ಪ್ರತಿ,
- ಜೈಲಿಂದ ಸಲ್ಲಿಕೆಯಾದ ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆ ವೈದ್ಯರ ವರದಿ
/newsfirstlive-kannada/media/post_attachments/wp-content/uploads/2024/09/DARSHAN_PAVITRA-4.jpg)
ಇದನ್ನೂ ಓದಿ: BELನಲ್ಲಿ 300ಕ್ಕೂ ಹೆಚ್ಚು ಉದ್ಯೋಗಗಳು ಖಾಲಿ ಖಾಲಿ.. ತಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಬಹುದು
ಸದ್ಯ ಕೇಸ್​ನಲ್ಲಿ ಜಾಮೀನು ಪಡೆದು ರಿಲೀಫ್ ಆಗಿದ್ದ ದರ್ಶನ್ ಅವರು ಕೆಲ ಕಾಲ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆದಿದ್ದರು. ಇನ್ನೇನು ಎಲ್ಲ ಸರಿಹೋಯಿತು ಎಂದು ಹಾಯಾಗಿದ್ದ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿನ ವಿಚಾರಣೆ ಆತಂಕ ತರಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ ಪರಿದಿವಾಲಾ ಹಾಗೂ ಆರ್.ಮಹದೇವನ್ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದ್ದು, ದರ್ಶನ್ ಬೇಲ್​ಗೆ ಕೊಕ್ಕೆ ಬೀಳುತ್ತಾ ಅಥವಾ ರಿಲೀಫ್ ಸಿಗುತ್ತಾ ಎಂದು ಟೆನ್ಷನ್​ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us