/newsfirstlive-kannada/media/post_attachments/wp-content/uploads/2024/09/DARSHAN_IT_BALLARY.jpg)
Renukaswamy Case: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅಲ್ಲಿ ಸಾಕಷ್ಟು ಜರ್ಜರಿತರಾಗಿದ್ದಾರೆ. ಕಠಿಣ ನಿಯಮಗಳಿಂದ ಕಂಗಾಲಾಗಿದ್ದಾರೆ. ಸದ್ಯ ಅವರಿಗೆ ಕೊಂಚ ರಿಲೀಫ್ ನೀಡಿದ್ದು ಅಂದ್ರೆ ನಿನ್ನೆಯ ಪ್ರಬಲ ವಾದ. ಇಂದು ಕೂಡ ದಾಸನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಮಹತ್ವ ಪಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ದರ್ಶನ್ ಈಗಾಗಲೇ ಶತದಿನೋತ್ಸವ ಆಚರಿಸಿದ್ದಾರೆ. ಜೈಲುವಾಸ ಸಹಿಸಲಾಗದೆ ಒದ್ದಾಡುತ್ತಿದ್ದ ದಾಸ ಕೊನೆಗೂ ಕೊಂಚ ಸಮಾಧಾನಪಡುವಂತಾಗಿದೆ. 3 ಬಾರಿ ಮೂಂದೂಡಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆ ನಿನ್ನೆ ನಡೆದಿದೆ.
ಇದನ್ನೂ ಓದಿ: BBK11: ‘ಸುದೀಪ್ ಸರ್ ಇವರನ್ನೇ ಒದ್ದು ಹೊರಗಡೆ ಹಾಕ್ತಾರೆ‘; ಬಿಗ್ಬಾಸ್ ಮನೆಯಲ್ಲಿ ಏನಾಗ್ತಿದೆ?
ಹಿರಿಯ ವಕೀಲ ಸಿ.ವಿ. ನಾಗೇಶ್ ದರ್ಶನ್ ಪರ ಪ್ರಬಲ ವಾದ ಮಂಡಿಸಿದ್ದು ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಮಾಹಿತಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ಮನೆಯಿಂದ ಪೊಲೀಸರು ವಶಕ್ಕೆ ಪಡೆದ ಬಟ್ಟೆ, ಶೂಗಳ ಬಗ್ಗೆ ಪ್ರಸ್ತಾಪಿಸಿ, ಪಂಚನಾಮೆಯಲ್ಲಿ ದರ್ಶನ್ ಚಪ್ಪಲಿ ಧರಿಸಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ರಿಕವರಿ ಮಾಡಿರುವ ಆ ಶೂಗಳಲ್ಲಿ ರಕ್ತದ ಕಲೆ ಇದೆ ಎಂದು ಹೇಳಲಾಗಿದೆ. ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಒಗೆದು ಒಣಗಿಸಿದ್ದಾರೆ ಎಂದು ಹೇಳಿಕೆ ನೀಡಿದ ಬಳಿಕ, ಬಟ್ಟೆ ರಿಕವರಿ ಮಾಡಲಾಗಿದೆ. ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಾದಗಳು ಮಹತ್ವ ಪಡೆದಿದ್ದು ದರ್ಶನ್‌ಗೆ ಜಾಮೀನು ಸಿಗುವ ಕನಸಿಗೆ ರೆಕ್ಕೆಪುಕ್ಕ ಬಂದಿದೆ.
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ
ನಿನ್ನೆ ದರ್ಶನ್ ಪರ ವಕೀಲ ನಾಗೇಶ್ ಸುದೀರ್ಘ ವಾದ ಆಲಿಸಿದ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಇಂದು ಮಧ್ಯಾಹ್ನ 12:30ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ದಾಸನ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.
ಬೆನ್ನು ನೋವಿದ್ರೂ ಸ್ಕ್ಯಾನಿಂಗ್, ಸರ್ಜರಿ ನಿರಾಕರಣೆ
ಕೋರ್ಟ್‌ನಲ್ಲಿ ನಡೆದ ವಾದದಿಂದ ದರ್ಶನ್‌ಗೆ ಕೊಂಚ ಸಮಾಧಾನವಾಗಿದ್ರೂ ಅದನ್ನ ಬೆನ್ನುನೋವಿನ ಸಮಸ್ಯೆ ನುಂಗಿ ಹಾಕಿದೆ. ಆದ್ರೆ ಇಲ್ಲೊಂದು ವಿಚಾರ ತಲೆನೋವಿಗೆ ಕಾರಣವಾಗಿದೆ.
ದರ್ಶನ್‌ಗೆ ಬೆನ್ನು ನೋವು!
ಬೆನ್ನು ನೋವಿಗೆ ಸಂಬಂಧಿಸಿದ ಸ್ಕ್ಯಾನಿಂಗ್, ಸರ್ಜರಿಯನ್ನ ದಾಸ ನಿರಾಕರಿಸಿದ್ದಾರೆ. ನಿರಾಕರಿಸಿದ ದರ್ಶನ್ ಹೇಳಿಕೆಯನ್ನು ಅಧಿಕಾರಿಗಳು ರೆಕಾರ್ಡ್ ಮಾಡಿಸಿದ್ದಾರೆ. ನಾಳೆ ಹೆಚ್ಚು ಕಮ್ಮಿ ಆದರೂ ಅಧಿಕಾರಿಗಳ ಮೇಲೆ ಬರಬಾರದು ಅನ್ನೊ ನಿಟ್ಟಿನಲ್ಲಿ ದರ್ಶನ್ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿದೆ. ಒಂದ್ವೇಳೆ ದರ್ಶನ್ ಒಪ್ಪಿದ್ರೆ ಇಂದು ವಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಿ ಸ್ಕ್ಯಾನಿಂಗ್ ಮಾಡಿಸಲು ಸಿದ್ದತೆ ನಡೆಸಲಾಗಿದೆ. ಆದ್ರೆ ಕೇವಲ ಪೇನ್‌ಕಿಲ್ಲರ್ ಮಾತ್ರೆ ಕೊಡಿ ಸಾಕು. ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದಾಗಿ ಹಠ ಹಿಡಿದಿದ್ದಾರಂತೆ. ಮನವರಿಕೆ ಮಾಡಿದ್ರೂ ಮೊಂಡುತನ ಮಾಡ್ತಿದ್ದು ಇಂದು ಅರ್ಥಪೆಡಿಕ್ ವೈದ್ಯರು ಪರಿಶೀಲನೆ ನಡೆಸಲಿದ್ದಾರೆ.
ದರ್ಶನ್‌ಗೆ ಇಂದಾದ್ರೂ ಸಿಗುತ್ತಾ ಮೆಡಿಕಲ್ ಬೆಡ್ & ದಿಂಬು?
ಇನ್ನು ಇಷ್ಟು ದಿನ ದರ್ಶನ್ ಬೇಡಿಕೆ ಇಟ್ಟಿದ್ದ ಮೆಡಿಕಲ್ ಬೆಡ್ ಹಾಗೂ ದಿಂಬು ನೀಡುವಂತೆ ಅರ್ಥಪೆಡಿಕ್ ವೈದ್ಯರು ಸೂಚನೆ ನೀಡಿದ್ದಾರೆ. ಲೆಟರ್ ಮೂಲಕ ಬೆಡ್ & ದಿಂಬು ನೀಡುವ ಬಗ್ಗೆ ಮಾಹಿತಿ ಕೊಡಿ. ಮೇಲಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮೆಡಿಕಲ್ ಬೆಡ್ ಮತ್ತು ದಿಂಬು ನೀಡುವ ಸೂಚನೆ ನೀಡುತ್ತೇವೆ ಅಂತ ಅಧಿಕಾರಿಗಳು ಹೇಳಿದ್ದಾರಂತೆ.
ಇದನ್ನೂ ಓದಿ: BBK11: ಧನರಾಜ್ ಆಚಾರ್ಯ ಡೈಲಾಗ್ಗೆ ಬಿಗ್ಬಾಸ್ ಮನೆಮಂದಿ ಫುಲ್ ಖುಷ್.. ವಿಡಿಯೋ ಇಲ್ಲಿದೆ
ಒಟ್ಟಾರೆ ಬಳ್ಳಾರಿ ಜೈಲಿನಲ್ಲಿ ಹಿಂಡಿ ಹಿಪ್ಪೆಯಾಗಿರುವ ದಾಸ ಸೊರಗಿ ಹೋಗಿದ್ದಾರೆ. ಈ ನೂರಕ್ಕೂ ಹೆಚ್ಚಿನ ದಿನಗಳಲ್ಲಿ ನಿನ್ನೆಯ ವಾದದಿಂದಲೇ ದರ್ಶನ್‌ಗೆ ಕೊಂಚ ಸಮಾಧಾನವಾಗಿದ್ದಾರೆ. ಇಂದು ಕೂಡ ನಾಗೇಶ್ ಪ್ರಬಲವಾಗಿ ವಾದ ಮಂಡಿಸಲಿದ್ದು ಜಾಮೀನು ಸಿಗುತ್ತಾ ಅನ್ನೋದನ್ನ ಮಧ್ಯಾಹ್ನವರೆಗೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ