ದರ್ಶನ್​​ಗೆ ತಪ್ಪದ ಕಾನೂನು ಸಂಕಷ್ಟ.. ಇವತ್ತು ಸುಪ್ರೀಂ ಕೋರ್ಟ್​ನಲ್ಲಿ ಮಹತ್ವದ ವಿಚಾರಣೆ..!

author-image
Ganesh
Updated On
ದರ್ಶನ್​​ಗೆ ತಪ್ಪದ ಕಾನೂನು ಸಂಕಷ್ಟ.. ಇವತ್ತು ಸುಪ್ರೀಂ ಕೋರ್ಟ್​ನಲ್ಲಿ ಮಹತ್ವದ ವಿಚಾರಣೆ..!
Advertisment
  • ನಟ ದರ್ಶನ್ ಜಾಮೀನು ರದ್ದು ಕೋರಿ ಸರ್ಕಾರದ ಅರ್ಜಿ
  • ನ್ಯಾ.ಪರ್ದೀವಾಲ, ನ್ಯಾ.ವಿಶ್ವನಾಥ್ ಪೀಠದಲ್ಲಿ ಭವಿಷ್ಯ ನಿರ್ಧಾರ
  • ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​ಗೆ ಸಂಕಷ್ಟ

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​​ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಇವತ್ತು ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್​ ಬೇಲ್ ಅರ್ಜಿ ವಿಚಾರಣೆ ನಡೆಯಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ತೂಗುದೀಪ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್‌ 2024 ಡಿಸೆಂಬರ್ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಕೋರ್ಟ್​​ ಮೊರೆ ಹೋಗಿದೆ. ಅಂತೆಯೇ ಇಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪರ್ದೀವಾಲ, ನ್ಯಾಯಮೂರ್ತಿ ಮಹದೇವನ್ ಪೀಠ ಅರ್ಜಿ ವಿಚಾರಣೆಯನ್ನು ಕೈಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ: ಉಸಿರಾಡುವ ಗಾಳಿ ಬಿಟ್ಟು ಎಲ್ಲದಕ್ಕೂ ಟ್ಯಾಕ್ಸ್‌.. ಸಿದ್ದು ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆಗೆ ಕರೆ..!

publive-image

ದರ್ಶನ್ ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದ್ದು, ಎ1 ಪವಿತ್ರಾಗೌಡ, ಎ2 ದರ್ಶನ್, ಎ6 ಜಗದೀಶ್‌, ಎ7 ಅನುಕುಮಾರ್‌, ಎ11 ನಾಗರಾಜ್, ಎ12 ಎಂ.ಲಕ್ಷ್ಮಣ್‌ ಹಾಗೋ ಎ 14 ಪ್ರದೂಶ್​ಗೆ ಮತ್ತೆ ಸಂಕಷ್ಟ ಎದುರಾಗಿದೆ.

ಪ್ರಾಸಿಕ್ಯೂಷನ್ ಮನವಿ ಏನು?

ಹೈಕೋರ್ಟ್‌ ನೀಡಿರುವ ಜಾಮೀನು​ ಅವಸರದಿಂದ ಕೂಡಿದಂತಿದೆ. ಯಾಕಂದ್ರೆ ಖ್ಯಾತ ನಟ ದರ್ಶನ್ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸೆಷನ್ಸ್ ಕೋರ್ಟ್​ನಲ್ಲಿ ಕೇಸ್ ಚಾರ್ಜ್ ಫ್ರೇಮ್ ಇನ್ನೂ ಹಂತಕ್ಕೆ ಬಂದಿಲ್ಲ. ನಟ ದರ್ಶನ್​ಗೆ 6 ವಾರಗಳು ಮಧ್ಯಂತರ ಬೇಲ್ ನೀಡಿದ್ದಾಗಲೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ. ನಟ ದರ್ಶನ್​ ಮತ್ತು ಗ್ಯಾಂಗ್ ಹೈಕೋರ್ಟ್​ ಜಾಮೀನಿಗೆ ಅರ್ಹರಾಗಿಲ್ಲ. ಕೇಸ್​​ನಲ್ಲಿ ಪ್ರಬಲ ಸಾಕ್ಷಿಗಳಿದ್ದರೂ ಪರಿಗಣಿಸಲು ಕೋರ್ಟ್​​​​ ವಿಫಲವಾಗಿದೆ. ಹೀಗಾಗಿ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡುವಂತೆ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಿದ್ದಾರೆ.

ಕೇಸ್​ನಲ್ಲಿ ಟೆಕ್ನಿಕಲ್ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಲು ಹೈಕೋರ್ಟ್​ ವಿಫಲವಾಗಿದೆ. ಹೀಗಾಗಿ ಮಧ್ಯಂತರ ಪರಿಹಾರವಾಗಿ ಏಕಪಕ್ಷೀಯ ಆದೇಶ ನೀಡಬೇಕು ಅಂತ ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಅರ್ಜಿಯಲ್ಲಿ ಕೋರಲಾಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ್ರೆ ಮತ್ತೆ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ಲವರ್​ ಜೊತೆ ಪತ್ನಿಯ ವಿವಾಹ ಕೇಸ್​ಗೆ ಟ್ವಿಸ್ಟ್, ನಾಲ್ಕೇ ದಿನಕ್ಕೆ ಮತ್ತೆ ಮೊದಲ ಗಂಡನ ಮನೆ ಸೇರಿದ ಪತ್ನಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment