Advertisment

ಹೇ.. ಬಾಯ್ಬಿಟ್ರೆ ಹುಷಾರ್‌; ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿ ತಗ್ಲಾಕೊಂಡ ದರ್ಶನ್ ಬಾಡಿಗಾರ್ಡ್‌!

author-image
admin
Updated On
ಜಾಮೀನು ಸಿಕ್ಕಿ ವಾರ ಕಳೆದರೂ ಬಿಡುಗಡೆ ಭಾಗ್ಯ ಇಲ್ಲ; ದರ್ಶನ್ ಗ್ಯಾಂಗ್​ಗೆ ಇದೆಂಥಾ ಪರಿಸ್ಥಿತಿ..!
Advertisment
  • ದರ್ಶನ್‌ ಗ್ಯಾಂಗ್ ಡಿಲೀಟ್ ಮಾಡಿದ್ದ ಫೋಟೋಗಳನ್ನು ರಿಟ್ರೀವ್!
  • ಅನ್ನಪೂರ್ಣೇಶ್ವರಿ ಠಾಣೆಯ 100 ಮೀಟರ್ ದೂರದಲ್ಲಿ ಸಾಕ್ಷಿಗೆ ಬೆದರಿಕೆ
  • ಬಾಯಿ ಬಿಟ್ಟರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದಿದ್ದ ದೂರು ದಾಖಲು

ರೇಣುಕಾಸ್ವಾಮಿ ಕೇಸ್‌ನಲ್ಲಿ ತನಿಖೆ ನಡೆಸಿದ ಪೊಲೀಸರು ಇಂಚಿಂಚು ಮಾಹಿತಿಯನ್ನು ಜರಡಿ ಹಿಡಿದಂತೆ ಜಾಲಾಡಿದ್ದಾರೆ. 2ನೇ ಚಾರ್ಜ್‌ಶೀಟ್‌ ಸಲ್ಲಿಸಲು ಸಿದ್ಧತೆ ನಡೆಸಿರುವ ಪೊಲೀಸರು ಇತ್ತೀಚೆಗೆ ದರ್ಶನ್‌ ಗ್ಯಾಂಗ್ ಡಿಲೀಟ್ ಮಾಡಿದ್ದ ಫೋಟೋಗಳನ್ನು ರಿಟ್ರೀವ್ ಮಾಡಿದ್ದರು. ಇದೀಗ ದರ್ಶನ್ ಗ್ಯಾಂಗ್‌ ಕೇಸ್‌ಗೆ ಮತ್ತೊಂದು ಸ್ಫೋಟಕ ಸಾಕ್ಷ್ಯ ಲಭ್ಯವಾಗಿದೆ.

Advertisment

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್​ಗೆ ಬಿಗ್​ ಟ್ವಿಸ್ಟ್​; ಶೆಡ್​ನಲ್ಲಿದ್ದ ದರ್ಶನ್​ ಎಕ್ಸ್​ಕ್ಲ್ಯೂಸಿವ್ ಫೋಟೋಸ್ ರಿವೀಲ್​ 

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಬಿಟ್ಟ ಮೇಲೆ ದರ್ಶನ್ ಗ್ಯಾಂಗ್‌ನಿಂದ ಸಾಕ್ಷಿ ನಾಶಕ್ಕೆ ಹುನ್ನಾರಗಳು ನಡೆದಿದೆ. ದರ್ಶನ್ ಬಾಡಿಗಾರ್ಡ್‌ನಿಂದಲೇ ಸಾಕ್ಷಿ ನಾಶಕ್ಕೆ ಹುನ್ನಾರ ನಡೆದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿತ್ತು ಎನ್ನಲಾಗಿದೆ.

publive-image

ದರ್ಶನ್ ಬಾಡಿಗಾರ್ಡ್ ನಾಗೇಶ್, ಸಾಕ್ಷಿ ನುಡಿಯದಂತೆ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದರಂತೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿ ಬಾಡಿಗಾರ್ಡ್ ನಾಗೇಶ್ ವಿರುದ್ಧ ದೂರು ನೀಡಿದ್ದಾರೆ. ಆ ವ್ಯಕ್ತಿ ದರ್ಶನ್ ಗ್ಯಾಂಗ್‌ನಿಂದ ನಾಶ ಮಾಡಲಾಗಿದ್ದ ಬಟ್ಟೆ ಸಂಬಂಧ ಸಾಕ್ಷಿ ನುಡಿಯಲು ಬಂದಿದ್ದರು. ಈ ವೇಳೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ 100 ಮೀಟರ್ ದೂರದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Advertisment

publive-image

ಕೃತ್ಯದ ವೇಳೆ ಬಿಸಾಡಿದ್ದ ಬಟ್ಟೆಗಳ ಕುರಿತು ಬಾಯಿ ಬಿಡದಂತೆ ಸಾಕ್ಷಿಗೆ ಬಾಡಿಗಾರ್ಡ್‌ ನಾಗೇಶ್ ಬೆದರಿಕೆ ಹಾಕಿದ್ದಾರೆ. ಬಟ್ಟೆ ಬಗ್ಗೆ ಬಾಯಿ ಬಿಟ್ಟರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದಿದ್ದು ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿತ್ತು. ನಾಗೇಶ್ ಕರೆಸಿ ವಿಚಾರಣೆ ಮಾಡಿದ್ದ ಪೊಲೀಸರು ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment