/newsfirstlive-kannada/media/post_attachments/wp-content/uploads/2024/07/darshan.jpg)
ರೇಣುಕಾಸ್ವಾಮಿ ಹತ್ಯೆ ಕೇಸ್‌ನ ಜಾಲಾಡುತ್ತಿರೋ ಪೊಲೀಸರಿಗೆ ನಿತ್ಯವೂ ಮಹತ್ವದ ಅಂಶಗಳು ಪತ್ತೆಯಾಗುತ್ತಿವೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೊಲೆಯಲ್ಲಿ ಭಾಗಿಯಾದವರಿಗೆ ಪೊಲೀಸರು ಖಡಕ್ ಶಾಕ್ ಕೊಡುತ್ತಿದ್ದಾರೆ. ಇದೀಗ ಬಿಜೆಪಿ ಶಾಸಕರೊಬ್ಬರ ಕಾರು ಚಾಲಕನಿಗೂ ಮರ್ಡರ್ ಮಿಸ್ಟ್ರಿ ಸುತ್ತಿಕೊಂಡಿದೆ. ಜೊತೆಗೆ ದರ್ಶನ್ ಮನೆಯ ಕೆಲಸದವರಿಗೂ ಹತ್ಯೆ ಪ್ರಕರಣ ಸಂಕಷ್ಟವನ್ನ ತಂದಿಟ್ಟಿದೆ.
ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಚು ಕೊಂದಿದ್ದ ಡೆವಿಲ್ ಗ್ಯಾಂಗ್, ಆತನ ಡೆಡ್‌ಬಾಡಿಯನ್ನ ಕಾಮಾಕ್ಷಿಪಾಳ್ಯದ ರಾಜಕಾಲುವೆ ಬಳಿ ಎಸೆದು ಬಂದಿತ್ತು. ಹೀಗೆ ಮೃತದೇಹ ಎಸೆದು ಬಂದ್ಮೇಲೆ ಕೊಲೆ ಆರೋಪಿಗಳಿಗೆ ಬಿಜೆಪಿಯ ಶಾಸಕರೊಬ್ಬರ ಕಾರು ಚಾಲಕ ಸಹಾಯ ಮಾಡಿದ್ನಂತೆ. ಇದೀಗ ಈತನಿಗೂ ದರ್ಶನ್ ಗ್ಯಾಂಗ್‌ನಿಂದ ಕಂಟಕ ಎದುರಾಗಿದೆ. ಬಂಧನದ ಭೀತಿಯೂ ಆವರಿಸಿದೆ.
ಮೃತದೇಹ ಎಸೆದು ಬಂದ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಕೇಳಿಬಂದಿದ್ದು, ಬಿಜೆಪಿ ಶಾಸಕರೊಬ್ಬರ ಕಾರು ಚಾಲಕನಿಗೂ ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಶವ ಸಾಗಿಸಿದ ಮೇಲೆ ಆರೋಪಿಗಳನ್ನ ಕಾರ್ತಿಕ್ ಪುರೋಹಿತ್ ಪಿಕ್ ಮಾಡಿದ್ದ ಎಂಬ ಆರೋಪವಿದೆ. ಹೀಗಾಗಿ ವಿಚಾರಣೆಗೆ ಬರುವಂತೆ ಕಾರ್ತಿಕ್‌ಗೆ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಆದ್ರೆ, ಬಂಧನ ಭೀತಿಯಿಂದ ಕಾರ್ತಿಕ್ ತಲೆಮರೆಸಿಕೊಂಡಿದ್ದಾರೆ. ಆದ್ರೆ, ಹರಿದ್ವಾರದಲ್ಲಿ ಕಾರ್ತಿಕ್ ಇರುವ ಮಾಹಿತಿ ಆಧರಿಸಿ ಪೊಲೀಸರು ಈತನ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
ದರ್ಶನ್ ಮನೆಯ ಕೆಲಸದವರಿಗೂ ಹತ್ಯೆ ಕೇಸ್ ಕಂಟಕ
ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಕೈ ಜೋಡಿಸಿ ಬಡವರ ಮನೆ ಮಕ್ಕಳೂ ಜೈಲು ಪಾಲಾಗಿದ್ದಾರೆ. ಅವರ ಕುಟುಂಬಸ್ಥರು ಹೊಟ್ಟೆಬಟ್ಟೆಗೆ ಕಾಸಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈ ಮಧ್ಯೆ ದರ್ಶನ್ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರಿಗೂ ಸಂಕಷ್ಟ ಎದುರಾಗಿದೆ. ದರ್ಶನ್ ಮನೆಯ ಕೆಲಸದವರಿಗೂ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಮನೆ ಕೆಲಸದವರಿಗೆ ನೋಟಿಸ್?
ಸುಶೀಲಮ್ಮ, ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಹಾಕಿದ್ದಂತಹ ಬಟ್ಟೆಯನ್ನ ತೊಳೆದಿದ್ದವರಿಗೂ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ. ಬಾಬುಲ್ ಖಾನ್, ಈತ ಕೂಡ ಕೊಲೆಯಾದ ದಿನ ದರ್ಶನ್ ಮನೆಯಲ್ಲಿದ್ದ ಎಂದು ತಿಳಿದು ಬಂದಿದೆ. ಅಮೀರ್ ಖಾನ್, ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್ ಮನೆಯಲ್ಲಿದ್ದ ಈತನಿಗೂ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಕೊಲೆ ನಡೆದ ದಿನ ಸ್ಟೋನಿ ಬ್ರೂಕ್ ರೇಸ್ಟೋ ಬಾರ್‌ನಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ಯಶಸ್ ಸೂರ್ಯಗೂ ನೋಟಿಸ್ ನೀಡಲು ಪೊಲೀಸರು ತಯಾರಿ ನಡೆಸಿದ್ದಾರೆ. ಡೆವಿಲ್ ಗ್ಯಾಂಗನ್ ಕೃತ್ಯದ ಬಗ್ಗೆ ಏನಾದ್ರೂ ತಿಳಿದಿರಬಹುದೆಂಬ ಶಂಕೆಯ ಹಿನ್ನಲೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಳೆ ಎಳೆಯನ್ನೂ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಹಲವು ಮಾಹಿತಿಗಳನ್ನ ಸಂಗ್ರಹಿಸಿ ದರ್ಶನ್ ಅಂಡ್ ಗ್ಯಾಂಗ್‌ಗೆ ತಕ್ಕಶಾಸ್ತಿ ಮಾಡಲು ಸಜ್ಜಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ