Advertisment

ಯಾವ ಬಾಸ್ ನಂಗೆ ಗೊತ್ತಿಲ್ಲ.. ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿ.ಕೆ ಶಿವಕುಮಾರ್ ಹೇಳಿದ್ದೇನು?

author-image
admin
Updated On
ಯಾವ ಬಾಸ್ ನಂಗೆ ಗೊತ್ತಿಲ್ಲ.. ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿ.ಕೆ ಶಿವಕುಮಾರ್ ಹೇಳಿದ್ದೇನು?
Advertisment
  • ದರ್ಶನ್ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ ಡಿ.ಕೆ ಶಿವಕುಮಾರ್
  • ನಿನ್ನೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿಗೆ ಬಂದಿದ್ದರು
  • ಹಿಂದೆ ದರ್ಶನ್ ಅವರ ಮಗನಿಗೆ ನನ್ನ ಸ್ಕೂಲ್‌ನಲ್ಲಿ ಸೀಟ್ ಕೊಟ್ಟಿದ್ದೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ವಿಚಾರಣೆ ಕೋರ್ಟ್‌ ಅಂಗಳದಲ್ಲಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

Advertisment

ಇದನ್ನೂ ಓದಿ: ಡಿಕೆಶಿ ಭೇಟಿ ಮಾಡಲು ದಿನಕರ್​ ಜೊತೆ ಬಂದ ದರ್ಶನ್​ ಪತ್ನಿ.. ಡಿಸಿಎಂ ಭೇಟಿಗೆ ಕಾದು ಕುಳಿತ ವಿಜಯಲಕ್ಷ್ಮೀ

ದರ್ಶನ್ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ ಬಳಿಕ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆಯೇ ನನ್ನ ಭೇಟಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬಂದಿದ್ದರು. ಆದರೆ ನಾನು ಭೇಟಿ ಮಾಡಲು ಒಪ್ಪಲಿಲ್ಲ. ಇಂದು ಬೆಳಗ್ಗೆ ಮನೆಯಲ್ಲಿ ಭೇಟಿಯಾಗುವಂತೆ ಹೇಳಿದ್ದೆ ಎಂದರು.

publive-image

ಈ ಹಿಂದೆ ದರ್ಶನ್ ಅವರ ಮಗನಿಗೆ ನನ್ನ ಸ್ಕೂಲ್‌ನಲ್ಲಿ ಸೀಟ್ ಕೊಟ್ಟಿದ್ದೆ. ಈಗ ಮತ್ತೆ ನಮ್ಮ ಸ್ಕೂಲ್‌ನಲ್ಲಿ ಸೇರಿಸಿಕೊಡಿ ಎಂದು ಮನವಿ ಮಾಡಲು ಬಂದಿದ್ದರು. ನಮ್ಮ ಪ್ರಿನ್ಸಿಪಾಲ್‌ಗೆ ಹೇಳ್ತೀನಿ ಎಂದು ಹೇಳಿದ್ದೇನೆ.

Advertisment

publive-image

ಮಗನ ಶಿಕ್ಷಣದ ಬಗ್ಗೆ ಅವರಿಗೆ ಕಾಳಜಿ ಇದೆ. ನಮ್ಮ ಸ್ಕೂಲ್‌ನಲ್ಲಿ ಮಕ್ಕಳ ವರ್ತನೆ ಬಗ್ಗೆ ಪೇರೆಂಟ್ಸ್ ಗಮನಕ್ಕೆ ತರುತ್ತೇವೆ. ಹಾಗೆ ಹಿಂದೆ ದರ್ಶನ್ ಅವರನ್ನು ಕರೆಸಿದ್ದಾರೆ. ಮನೆ ಎದುರಿನ ಶಾಲೆಗೆ ಹೋದ್ರೆ ಹೋಗ್ತಾ ಬರ್ತಾ ಇರಬಹುದು ಎಂದು ಕೇಳಿದ್ದಾರೆ. ಮಕ್ಕಳ ವಿಚಾರ ದೊಡ್ಡದು. ಮಗುಗೆ ಸಹಾಯ ಮಾಡ್ತೀನಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು PG ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗಾರ ಯಾರು? ಆಗಿದ್ದೇನು? 

ದರ್ಶನ್ ಕೇಸ್‌ ಬಗ್ಗೆ ಮಾತಾಡಿಲ್ಲ
ದರ್ಶನ್ ಕೇಸ್‌ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ನಿನ್ನೆ ನಮ್ಮ ಕ್ಷೇತ್ರದ ಹುಡುಗರು ಬಾಸ್, ಬಾಸ್‌ ಅಂತ ಗಲಾಟೆ ಮಾಡಿ ಕೂಗಿದ್ರು. ಯಾವ ಬಾಸ್ ನಂಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ‌ಏನು ಬರ್ತಿದೆ ಎಂದು ನೋಡಲು ನನಗೆ ಸಮಯವಿಲ್ಲ. ಒಂದೊಂದು ಟಿವಿಯಲ್ಲಿ ಒಂದೊಂದು ಬರ್ತಿದೆ. ನಾನು ಗೃಹ ಸಚಿವ‌ನೂ ಅಲ್ಲ. ಪೊಲೀಸ್ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ.

Advertisment

ದರ್ಶನ್ ಬಂಧನ ಕೇಸ್ ಬಗ್ಗೆ ವಿಜಯಲಕ್ಷ್ಮಿ ಅವರು ಮಾತಾಡಿಲ್ಲ. ಸಮಸ್ಯೆ, ತೊಂದರೆ ಆಗಿದ್ರೆ ಕಾನೂನು ಇದೆ. ಹೆಣ್ಣು ಮಕ್ಕಳು ಭೇಟಿಗೆ ಸಮಯ ಕೇಳಿದ್ರು ಸಮಯ ಕೊಟ್ಟಿದ್ದೆ ಅಷ್ಟೇ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment