/newsfirstlive-kannada/media/post_attachments/wp-content/uploads/2023/11/BGK_KSRTC_1.jpg)
ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ದಸರಾ ಹಬ್ಬ ಆಚರಣೆ ಮಾಡಲಾಗ್ತಿದೆ. ಮೈಸೂರು ಮಾತ್ರವಲ್ಲ, ಶ್ರೀರಂಗಪಟ್ಟಣ, ಮಂಗಳೂರು, ರಾಯಚೂರು, ಚಿಕ್ಕಮಗಳೂರು ಹೀಗೆ ಹಲವು ಕಡೆಗಳಲ್ಲಿ ನಾಡಹಬ್ಬವನ್ನ ಆಚರಣೆ ಮಾಡಲಾಗ್ತಿದೆ.
ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್
ನಾಡಹಬ್ಬ ದಸರಾ ಮಕ್ಕಳಿಗೆ ಶಾಲಾ ಕಾಲೇಜು ರಜಾ. ಊರುಗಳಿಗೆ ತೆರಳಿ ಫುಲ್ ಮಜಾ ಅಂತಾ ದಸರಾ ರಜೆ ಬಗ್ಗೆ ಪ್ಲಾನ್ ಮಾಡ್ಕೊಂಡಿರೋ ಜನ. ತಮ್ಮ ತವರು ಮೈಸೂರು ಅಂತಾ ಹಲವೆಡೆ ತೆರಳೋದಕ್ಕೆ ಸಕಲ ಸಿದ್ಧತೆ ಮಾಡ್ಕೊಂಡಿದ್ದಾರೆ. ಹಾಗೆಯೇ ಹೊರಡೋದಕ್ಕೆ ಸಿದ್ಧವಾಗಿರೋ ಜನಕ್ಕಾಗಿ ಕರ್ನಾಟಕ ಸಾರಿಗೆ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 9 ರಿಂದ ಅಕ್ಟೋಬರ್ 12 ರವರೆಗೆ 2000ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ದರ್ಶನ್ಗೆ ಜಾಮೀನು ಸಿಗುವ ಕನಸಿಗೆ ಬಂತು ರೆಕ್ಕೆಪುಕ್ಕ.. ಇಂದು ನಿರ್ಧಾರವಾಗಲಿದೆ ಭವಿಷ್ಯ?
ನವರಾತ್ರಿ ಪ್ರಯುಕ್ತ ಬೊಂಬೆಗಳನ್ನ ಕೂರಿಸಿ ಆಚರಣೆ
ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ ಪ್ರಾರಂಭವಾಗಿ, ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಬಾಲಕೃಷ್ಣರವರು ನವರಾತ್ರಿ ಪ್ರಯುಕ್ತ ಬೊಂಬೆಗಳನ್ನ ಕೂರಿಸಿದ್ದು, ಕಳಸ ಪಟ್ಟಣದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಳೆದ 16 ವರ್ಷಗಳಿಂದ ದಸರಾ ಸಂದರ್ಭದಲ್ಲಿ ಬೊಂಬೆಗಳನ್ನ ಕೂರಿಸುತ್ತಿದ್ದ ಇವರ ಬೊಂಬೆಗಳನ್ನ ನೋಡಲು ಕಳಸ ಸುತ್ತಲಿನ ವಿವಿಧ ಗ್ರಾಮಗಳಿಂದ ಜನರು ಆಗಮಿಸುತ್ತಾರೆ.
ನವರಾತ್ರಿಯ ಅಂಗವಾಗಿ ಸಾರ್ವಜನಿಕ ದುರ್ಗಿ ಪ್ರತಿಷ್ಠಾಪನೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ನವರಾತ್ರಿಯ ಅಂಗವಾಗಿ ಸಾರ್ವಜನಿಕ ದುರ್ಗಿಯನ್ನು ಪ್ರತಿಷ್ಠಾಪಿಸಲಾಗಿದೆ. ನವರಾತ್ರಿ ಪ್ರಯುಕ್ತ ಪೂಜೆ ಧಾರ್ಮಿಕ ಕಾರ್ಯಗಳನ್ನ ಆಯೋಜನೆ ಮಾಡಲಾಗಿದೆ. ಪ್ರತಿ ದಿನ ಅಷ್ಟೋತ್ತರ ಕುಂಕುಮಾರ್ಚನೆ, ಪಂಚಕಜ್ಜಾಯ, ಸಹಸ್ರನಾಮರ್ಚನೆ, ದುರ್ಗಾ ಪಾರಾಯಣ ಪೂಜೆ, ರಂಗ ಪೂಜೆ ನಡೆಯಲಿದ್ದು ಎರಡನೇ ದಿನವು ನೂರಾರು ಭಕ್ತರು ದುರ್ಗಿಯ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಚಿನ್ನ ಖರೀದಿ ಎಷ್ಟು ಸೇಫ್? ನೀವು ಓದಲೇಬೇಕಾದ ಸ್ಟೋರಿ!
ಸಿಂಧನೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಿಎಂ
ರಾಯಚೂರು ಜಿಲ್ಲೆಯ ಸಿಂಧನೂರು ದಸರಾ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಗಾಂಧಿ ವೃತ್ತದಲ್ಲಿ ದಸರಾ ಮೆರವಣಿಗೆಗೆ ಚಾಲನೆ ಸಿಕ್ಕಿದ್ದು, ಸರಕಾರಿ ಪದವಿ ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹೋತ್ಸವಕ್ಕೆ ಶುಭ ಸೂಚನೆ ಎಂಬಂತೆ ಸಮಾವೇಶ ಆರಂಭಕ್ಕೂ ಮುನ್ನ ಮಳೆ ಬಂದು ಭೂಮಿಗೆ ತಂಪೆರೆದಿತ್ತು..
ಬನಶಂಕರಿ ದೇವಸ್ಥಾನದಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀದೇವಿ ಮೂರ್ತಿ ಹಾಗೂ ದಾಸಿಮಯ್ಯರ ಮೆರವಣಿಗೆ ನಡೆಸಲಾಯಿತು. ಮಹಾಲಿಂಗಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿ ಅಂತಿಮವಾಗಿ ಬನಶಂಕರಿ ದೇವಸ್ಥಾನಕ್ಕೆ ಬಂದು ಸಮಾಪ್ತಿಗೊಂಡಿತು.
ಒಟ್ಟಾರೆ, ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲಾಗ್ತಿದೆ. ಎಲ್ಲ ಜಾತಿ, ಜನಾಂಗ, ಭಾಷೆಯ ಜನರು ವಿವಿಧ ಜಿಲ್ಲೆಗಳಲ್ಲಿ ಕೂಡ ದಸರಾ ಹಬ್ಬವನ್ನು ಆಚರಣೆ ಮಾಡ್ತಿರೋದು ಸಂತೋಷದ ವಿಷಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ