/newsfirstlive-kannada/media/post_attachments/wp-content/uploads/2024/10/Darshan-bellary-Jail-14.jpg)
ಒಂದಲ್ಲ.. ಎರಡಲ್ಲ ಬರೋಬ್ಬರಿ ನಾಲ್ಕು ತಿಂಗಳಾಯ್ತು ದರ್ಶನ್ ಜೈಲು ಹಕ್ಕಿಯಾಗಿ. ಪಂಜರದಿಂದ ಹೊರಗೆ ಬರೋಕೆ ಎದುರು ನೋಡ್ತಿರೋ ದರ್ಶನ್ ಪಾಲಿಗೆ ಇವತ್ತು ಮಹತ್ವದ ದಿನ. ಬೆನ್ನು ನೋವಿನ ಚಿಕಿತ್ಸೆಗಾಗಿ ದರ್ಶನ್ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದು, ಇವತ್ತು ಹೈಕೋರ್ಟ್ನಲ್ಲಿ ತೀರ್ಪು ಹೊರಬೀಳಲಿದೆ.
ರಿಗ್ಯುಲರ್ ಬೇಲ್ ಸಿಗದ ಚಿಂತೆಯಲ್ಲಿರುವ ದಾಸನಿಗೆ ಬೆನ್ನು ನೋವು ಬಿಟ್ಟು ಬಿಡದೇ ಭಾದಿಸುತ್ತಿದೆ. ಫಿಜಿಯೋಥೆರಪಿ ಚಿಕಿತ್ಸೆ ಪಡೆದ್ರೂ, ನೋವು ಕಡಿಮೆ ಆಗ್ತಿಲ್ಲ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಹೀಗಾಗಿ ದರ್ಶನ್ಗೆ ಆಪರೇಷನ್ ಆಗತ್ಯವಿದ್ದು, ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇದರ ವಾದ-ಪ್ರತಿವಾದ ಮುಕ್ತಾಯವಾಗಿದೆ. ಹಾಗಾದ್ರೆ ಕೋರ್ಟ್ ಸಲ್ಲಿಸಿದ ದರ್ಶನ್ ವೈದ್ಯಕೀಯ ವರದಿಯಲ್ಲಿ ಏನಿದೆ?
ದರ್ಶನ್ಗೆ ಈ ಅಪಾಯವಿದೆಯಾ?
ವಿಮ್ಸ್ನ ಚಿಕಿತ್ಸಕ ವಿಭಾಗದ ಪ್ರೊಫೆಸರ್ ಮತ್ತು ಎಚ್‌ಒಡಿ ಎಸ್.ವಿಶ್ವನಾಥ್ ಸಹಿಯ 26 ದಾಖಲೆಗಳನ್ನು ಕೋರ್ಟ್ಗೆ ನೀಡಲಾಗಿದೆ. ಇದರಲ್ಲಿ ಫಿಜಿಯೊಥೆರಪಿ, ನೋವು ನಿವಾರಕ, ನರದ ಉಪಚಾರಕ್ಕೆ ಔಷಧ ತೆಗೆದುಕೊಳ್ಳುವುದು. ಲಂಬಾರ್ ಬ್ರೇಸ್ (ಸೊಂಟಕ್ಕೆ ಕಟ್ಟುವ ಪಟ್ಟಿ) ಉಪಯೋಗಿಸುವುದು. ಈ ದಿಸೆಯಲ್ಲಿ ರೋಗಿಗೆ ಉಪಚಾರದ ಬಳಿಕ ಸ್ವಲ್ಪ ನೋವು ನಿವಾರಣೆಯಾಗಿದೆ.
ಇದನ್ನೂ ಓದಿ: 1 ಕೆಜಿಗೆ 3 ಲಕ್ಷ ರೂಪಾಯಿ.. ಪರಿಶುದ್ಧ ಕೇಸರಿ ಹೇಗೆ ತಯಾರಿಸುತ್ತಾರೆ? ಚರ್ಮದ ಸಮಸ್ಯೆಗೆ ಇದೇ ರಾಮಬಾಣ!
ಇನ್ನು ರೋಗಿಯ ತಪಾಸಣೆ, ಸ್ಕ್ಯಾನ್ ವಿವರ ಪರಿಶೀಲಿಸಿದಾಗ ನರದ ತೊಂದರೆಯಿಂದಾಗಿ, ಕಾಲಿನ ಪಾದಗಳಲ್ಲಿ ಅಲ್ಪಪ್ರಮಾಣದಲ್ಲಿ ಸ್ಪರ್ಶ, ಶಕ್ತಿ ಕಡಿಮೆ ಆಗಿದೆ. ಇದರ ಆಧಾರದ ಮೇಲೆ ಹೇಳುವುದಾದ್ರೆ, ಕೆಲವೊಮ್ಮೆ ಮುಂದೆ ಎರಡೂ ಪಾದಗಳ ಬಲಹೀನತೆ ಆಗುವ ಸಾಧ್ಯತೆ ಇದೆ. ಮೂತ್ರ ವಿಸರ್ಜನೆ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಇರುತ್ತದೆ. ಇದರಿಂದ ರೋಗಿಯನ್ನು ಪಾರು ಮಾಡಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಸರ್ಕಾರದ ಎಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾಡಬಹುದು. ವಿಮ್ಸ್ನಲ್ಲಿ ನ್ಯೂರೊ ನ್ಯಾವಿಗೇಷನ್ ಉಪಕರಣ ಲಭ್ಯವಿರುವುದಿಲ್ಲ ಎಂದು ವರದಿ ನೀಡಲಾಗಿದೆ.
ಬೆಳಗ್ಗೆ 10:30ಕ್ಕೆ ಹೊರಬೀಳಲಿದೆ ಮಧ್ಯಂತರ ಜಾಮೀನು ಅರ್ಜಿ ತೀರ್ಪು
ದಾಸನ ಆರೋಗ್ಯ ಸ್ಥಿತಿ ಬಗ್ಗೆ, ಚಿಕಿತ್ಸೆಯ ಅಗತ್ಯತೆ ಬಗ್ಗೆ ಹಿರಿಯ ವಕೀಲ ಸಿವಿ ನಾಗೇಶ್, ಸರ್ಜಿಕಲ್ ಟ್ರೀಟ್ ಮೆಂಟ್ ಅವಶ್ಯಕತೆ ಇದೆ. ಮೂರು ತಿಂಗಳು ಮಧ್ಯಂತರ ಜಾಮೀನು ಕೊಡಿ ಎಂದು ವಾದ ಮಂಡಿಸಿದ್ದಾರೆ. ಆದರೆ, ಇದಕ್ಕೆ ಎಸ್ಪಿಪಿ ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಜಡ್ಜ್ ವಿಶ್ವಜಿತ್ ಶೆಟ್ಟಿ ಆದೇಶ ಇಂದಿಗೆ ತೀರ್ಪು ಕಾಯ್ದಿರಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮನ ಭಕ್ತರ ಮೆಚ್ಚುಗೆಗೆ ಪಾತ್ರರಾದ ನಟ ಅಕ್ಷಯ್ ಕುಮಾರ್; ಮಾಡಿದ್ದೇನು?
ಒಟ್ಟಾರೆ. ದರ್ಶನ್ ಬೇಲ್ ಭವಿಷ್ಯದ ಬಗ್ಗೆ ಕುತೂಹಲ ಮೂಡಿದ್ದು, ಬೆಳಗ್ಗೆ 10.30ಕ್ಕೆ ನ್ಯಾ. ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಆದೇಶ ಹೊರ ಬಿಳಲಿದೆ. ದರ್ಶನ್ ಗೆ ಮಧ್ಯಂತರ ಜಾಮೀನು ಸಿಗಬಹುದಾ? ಅಥವಾ ಮೆಡಿಕಲ್ ಬೋರ್ಡ್ನಿಂದ ಒಪಿನಿಯನ್ ರಿಪೋರ್ಟ್ಗೂ ಆದೇಶ ಕೊಡಬಹುದಾ ಎಂಬ ಚರ್ಚೆಗಳು ನಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ