newsfirstkannada.com

ಐತಿಹಾಸಿಕ ಕರಗ ಉತ್ಸವಕ್ಕೆ ದಿನಾಂಕ ಫಿಕ್ಸ್​.. ಯಾವಾಗ ಪ್ರಾರಂಭ? ಈ ಬಾರಿ ಕರಗ ಹೊರೋದ್ಯಾರು?

Share :

Published February 19, 2024 at 11:49am

    ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ ಕರಗ ಉತ್ಸವ

    ಐತಿಹಾಸಿಕ ಬೆಂಗಳೂರು ಕರಗಕ್ಕೆ ಮಹೋತ್ಸವ ಯಾವಾಗ?

    ಕಳೆದ ವರ್ಷ ಕಿಡಿಗೇಡಿಗಳು ಕರಗ ಶಕ್ತ್ಯೋತ್ಸವಕ್ಕೆ ಅಡ್ಡಿಪಡಿಸಿದ್ದರು

ಐತಿಹಾಸಿಕ ಬೆಂಗಳೂರು ಕರಗಕ್ಕೆ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 15ರಿಂದ 23ರವರೆಗೆ ಕರಗ ಮಹೋತ್ಸವ ನಡೆಯಲಿದೆ. 

23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. 24ನೇ ತಾರೀಖಿನಿಂದು ಗಾವು ಶಾಂತಿ ನಡೆಯಲಿದ್ದು, 25ರಂದು ಧ್ವಜ ಅವರೋಹಣ ಆಗಲಿದೆ. ಅಂದಹಾಗೆಯೇ ಈ ಬಾರಿ ಎ. ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಇವರು ಸತತ 12 ಬಾರಿ ಕರಗ ಹೊತ್ತಿರುವ ಕರಗದ ಪೂಜಾರಿಯಾಗಿದ್ದು, ಈ ಬಾರಿಯೂ ಕರಗ ಹೊರಲು ಎ.ಜ್ಞಾನೇಂದ್ರ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಕೆಲವು ಕಿಡಿಗೇಡಿಗಳು ಕರಗ ಶಕ್ತ್ಯೋತ್ಸವಕ್ಕೆ ಅಡ್ಡಿಪಡಿಸಿದ್ದರು. ಕರಗ ಹೊತ್ತಿದ್ದ ಕರಗದ ಪೂಜಾರಿ ಎ.ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು. ಆದರೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊತ್ತು ಯಶಸ್ವಿಯಾಗಿದ್ದರು. ದ್ರೌಪದಿದೇವಿ ಕರಗದ ರಾಜಬೀದಿ ಉತ್ಸವ ಮುಗಿಸಿದ್ದರು. ಕರಗವನ್ನು ಧರ್ಮರಾಯ ಸ್ವಾಮಿ ದೇವಾಲಯ ತಲುಪಿಸಿದ್ದರು.

ಬೆಂಗಳೂರು ಕರಗ ಮಹೋತ್ಸವ

ಈ ಬಾರಿಯೂ ಕರಗ ಹೊರಲು ಕರಗದ ಪೂಜಾರಿ ಎ.ಜ್ಞಾನೇಂದ್ರ ಆಯ್ಕೆಯಾಗಿದ್ದಾರೆ. ಮುಜರಾಯಿ ಇಲಾಖೆ & ಧರ್ಮರಾಯ ಸ್ವಾಮಿ ದೇವಾಲಯ ಮಂಡಳಿ ನಿರ್ಧರಿಸಿದ್ದಾರೆ. ದೇವಾಲಯ ಆಡಳಿತ ಮಂಡಳಿ ಎ.ಜ್ಞಾನೇಂದ್ರ ಅವರನ್ನು ಆಯ್ಕೆ ಮಾಡಿ ಎಂದು ಆದೇಶ ನೀಡಿದೆ. ಅದರಂತೆಯೇ ಕರಗದ ಪೂಜಾರಿ ಎ.ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐತಿಹಾಸಿಕ ಕರಗ ಉತ್ಸವಕ್ಕೆ ದಿನಾಂಕ ಫಿಕ್ಸ್​.. ಯಾವಾಗ ಪ್ರಾರಂಭ? ಈ ಬಾರಿ ಕರಗ ಹೊರೋದ್ಯಾರು?

https://newsfirstlive.com/wp-content/uploads/2024/02/Karaga-Utsav.jpg

Load More