Advertisment

ಸ್ಮಾರ್ಟ್​ಫೋನ್​ ರಿಪೇರಿ ಮಾಡಿಸಲು ನಿರಾಕರಿಸಿದ ಪೋಷಕರು.. ಆತ್ಮಹತ್ಯೆ ಮಾಡಿಕೊಂಡ ಮಗಳು

author-image
AS Harshith
Updated On
ಸ್ಮಾರ್ಟ್​ಫೋನ್​ ರಿಪೇರಿ ಮಾಡಿಸಲು ನಿರಾಕರಿಸಿದ ಪೋಷಕರು.. ಆತ್ಮಹತ್ಯೆ ಮಾಡಿಕೊಂಡ ಮಗಳು
Advertisment
  • ಸ್ಮಾರ್ಟ್​ಫೋನ್​ ವಿಚಾರಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡ ಮಗಳು
  • ಮಗಳ ಸ್ಮಾರ್ಟ್​ಫೋನ್​ ರಿಪೇರಿ ಮಾಡಿಸಲು ನಿರಾಕರಿಸಿದ ಪೋಷಕರು
  • ಪೋಷಕರು ನಿರಾಕರಿಸಿದ್ದಕ್ಕೆ ಬೇಸರಗೊಂಡು ಮಗಳು ಅತ್ಮಹತ್ಯೆ

ಪೋಷಕರು ಸ್ಮಾರ್ಟ್​ಫೋನ್​ ರಿಪೇರಿ ಮಾಡಲು ನಿರಾಕರಿಸಿದ್ದಕ್ಕೆ ಮಗಳು ಅತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಮಂಚೇರಿಯಲ್​ ಜಿಲ್ಲೆಯ ಜೈಪುರ ಮಂಡಲದ ವೆಲಾಲ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

Advertisment

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು 19 ವರ್ಷದ ಸೈಶುಮಾ ಎಂದು ಗುರುತಿಸಲಾಗಿದೆ. ಈಕೆ ಪ್ರಥಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಫೋನ್​ ಹಾಳಾಗಿದ್ದು, ಅದನ್ನು ರಿಪೇರಿ ಮಾಡಿಸಲು ಪೋಷಕರ ಬಳಿ ಒತ್ತಾಯಿಸಿದ್ದಾಳೆ. ಆದರೆ ಪೋಷಕರು ಅದನ್ನು ನಿರಾಕರಿಸಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ಸೈಶುಮಾ ಪೋಷಕರು ಗದ್ದೆ ಕೆಲಸ ಮಾಡುವವರಾಗಿದ್ದು, ಮನೆಯಿಂದ ಹೊರ ಹೋಗಿದ್ದ ವೇಳೆ ಯುವತಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾಳೆ. ಮೃತ ಶೈಶುಮಾ ಓವ್ ಸಹೋದರನನ್ನು ಅಗಲಿದ್ದಾಳೆ.

ಇದನ್ನೂ ಓದಿ: ಸಾಕಲು ಕಷ್ಟವಾಗುತ್ತಿದೆ ಎಂದು ಹೆಂಡತಿ ಮತ್ತು 7 ಮಕ್ಕಳನ್ನು ಕೊಚ್ಚಿ ಕೊಂದ ಪಾಪಿ ಪತಿ

Advertisment

ಸದ್ಯ ಪೊಲೀಸರು ಈ ಘಟನೆ ಕುರಿತಾಗಿ ತನಿಖೆ ಮುಂದುವರೆಸಿದ್ದಾರೆ. ಯುವತಿ ಫೋನ್​ ರಿಪೇರಿ ಮಾಡಲಿಲ್ಲವೆಂದು ಸಾವನ್ನಪ್ಪಿದಳೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment