ಯಾರು ಇಲ್ಲದಿದ್ದಾಗ ಸ್ನೇಹಿತನೊಂದಿಗೆ ಮಲಗಿದ್ದ ಮಗಳು; ಪ್ರಶ್ನಿಸಿದ್ದಕ್ಕೆ ತಾಯಿ ಜೀವವನ್ನೇ ತೆಗೆದುಬಿಟ್ಳು!

author-image
Ganesh Nachikethu
Updated On
ಯಾರು ಇಲ್ಲದಿದ್ದಾಗ ಸ್ನೇಹಿತನೊಂದಿಗೆ ಮಲಗಿದ್ದ ಮಗಳು; ಪ್ರಶ್ನಿಸಿದ್ದಕ್ಕೆ ತಾಯಿ ಜೀವವನ್ನೇ ತೆಗೆದುಬಿಟ್ಳು!
Advertisment
  • ಹೆತ್ತ ತಾಯಿಯ ಜೀವವನ್ನೇ ನಿಲ್ಲಿಸಿದ ಮಗಳು
  • ಮಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಇಡೀ ಬೆಂಗಳೂರು
  • ಸ್ನೇಹಿತನೊಂದಿಗೆ ಸೇರಿ ಈ ಕೃತ್ಯ ಎಸಗಿದಳು!

ಬೆಂಗಳೂರು: ಹೆತ್ತ ತಾಯಿಯನ್ನೇ ಮಗಳು ಹತ್ಯೆಗೈದ ಘಟನೆ ಬೆಂಗಳೂರಲ್ಲಿ ನಡೆದಿದೆ. 46 ವರ್ಷದ ಜಯಲಕ್ಷ್ಮೀ ಮೃತ ತಾಯಿ. ಬೊಮ್ಮನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.

ಕಳೆದ ಎರಡು ದಿನಗಳ ಈ ಹಿಂದೆಯೇ ಈ ದುರ್ಘಟನೆ ಸಂಭವಿಸಿದೆ. ಪವಿತ್ರಾ ಎಂಬಾಕೆ ತನ್ನ ಸ್ನೇಹಿತ ನವನೀಶ್​​ ಎಂಬುವನ ಜೊತೆ ಸೇರಿ ತಾಯಿಯ ಜೀವವನ್ನೇ ತೆಗೆದು ಹಾಕಿದ್ದಾಳೆ.

ಯಾರು ಈ ಜಯಲಕ್ಷ್ಮೀ?

ಜಯಲಕ್ಷ್ಮೀ ಅವರು ದಿನಸಿ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇವರ ಮಗಳು ಪವಿತ್ರಾ ನವನೀಶ್​ ಎಂಬುವನ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಆತನನ್ನು ಮನೆ ಕರೆಸಿಕೊಂಡು ಮಲಗಿದ್ದಳು. ಈ ಬಗ್ಗೆ ತಾಯಿ ಪ್ರಶ್ನೆ ಮಾಡಿದ್ದಕ್ಕೆ ತಾಯಿಯನ್ನ ಕತ್ತು ಹಿಸುಕಿ ಜೀವ ತೆಗೆದಿದ್ದಾರೆ.

ಇದನ್ನೂ ಓದಿ:ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು.. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ 3 ಬಾರಿ ಫೈರಿಂಗ್; ಬರ್ಬರ ಹ*ತ್ಯೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment