ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್‌.. ಮಾವನ ಮೇಲೆ ದಾಳಿಗೆ ಮಚ್ಚು, ದೊಣ್ಣೆ ತಂದ ಸೊಸೆ; ಕಾರಣವೇನು?

author-image
admin
Updated On
ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್‌.. ಮಾವನ ಮೇಲೆ ದಾಳಿಗೆ ಮಚ್ಚು, ದೊಣ್ಣೆ ತಂದ ಸೊಸೆ; ಕಾರಣವೇನು?
Advertisment
  • ಸ್ವಂತ ಮಾವನ ಮೇಲೆಯೇ ಸೊಸೆಗೆ ಕತ್ತಿ ಬೀಸೋ ಕೋಪ!
  • ಸಿನಿಮಿಯ ಸ್ಟೈಲ್‌ನಲ್ಲಿ ಡೆಡ್ಲಿ ಅಟ್ಯಾಕ್ ಮಾಡಿಸಿದ ಸೊಸೆ
  • ಲಾಂಗ್‌, ಮಚ್ಚು ದೊಣ್ಣೆಯಿಂದ ಅಟ್ಯಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಸ್ವಂತ ಮಾವನ ಮೇಲೆಯೇ ಸೊಸೆ ಆಸ್ತಿಗಾಗಿ ಸಿನಿಮಿಯ ಸ್ಟೈಲ್‌ನಲ್ಲಿ ಡೆಡ್ಲಿ ಅಟ್ಯಾಕ್ ಮಾಡಿಸಿರೋ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಒಂದೊಂದು ದೃಶ್ಯಗಳು ಭಯಾನಕವಾಗಿದೆ.

ಒಂದೊಂದು ಸೀನ್‌ಗಳು ಥೇಟ್‌ ಸಿನಿಮಾ ಥರಾನೇ ಇದೆ. ಇವರೇನ್ ಮನುಷ್ಯರೋ ಅಥವಾ ಮನುಷ್ಯ ರೂಪದಲ್ಲಿರೋ ರಾಕ್ಷಸರೋ ಗೊತ್ತಿಲ್ಲ. ಲಾಂಗ್‌, ಮಚ್ಚು ದೊಣ್ಣೆಯಿಂದ ಹೀಗೆ ಅಟ್ಯಾಕ್ ಮಾಡ್ಸಿದ್ದು ಇಲ್ಲಿ ಕಾಣ್ತಿರೋ ಶೃತಿ.

publive-image

ಮಹದೇವಪುರ ಬಿಬಿಎಂಪಿ ಆಫೀಸ್‌ನಲ್ಲಿ ಕಂಪ್ಯೂಟರ್ ಆಪರೇಟರ್‌ ಅಂತೆ ಇವರು. ಸ್ವಂತ ಮಾವನ ಮೇಲೆಯೇ ಆಸ್ತಿ ವಿಚಾರಕ್ಕೆ ಇದೇ ಶೃತಿ ಸಿನಿಮೀಯ ಶೈಲಿಯಲ್ಲಿ 5 ಗೂಂಡಾಗಳೊಂದಿಗೆ ಬಂದು ಡೆಡ್ಲಿ ಅಟ್ಯಾಕ್ ಮಾಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸೇನೆಗೆ ಫ್ರೀ ಹ್ಯಾಂಡ್​.. ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಕಠಿಣ ನಿರ್ಧಾರಗಳು; ಏನದು? 

ಆಸ್ತಿಗಾಗಿ ಡೆಡ್ಲಿ ಅಟ್ಯಾಕ್!
ಕೊಡಿಗೆಹಳ್ಳಿಯಲ್ಲಿರುವ ಸರ್ವೆ 20/1 3 ಎಕರೆ 38 ಗುಂಟೆ ಜಾಗ ಇದೆ. ಆ ಜಾಗ ಅಟ್ಯಾಕ್ ಆದ ಪಾಪಯ್ಯ ಪ್ರಭು ಅವರ ಅಜ್ಜನ ಆಸ್ತಿಯಾಗಿದೆ. ಇದೇ ವಿಚಾರಕ್ಕೆ ಪ್ರಭು ಹಾಗೂ ಶೃತಿ ತಾಯಿ ವಜ್ರಮ್ಮ ನಡುವೆ ಜಗಳವಾಗಿತ್ತು. ಈ ವಿಚಾರ ಕೋರ್ಟ್‌ನಲ್ಲಿದೆ, ಕೇಸ್ ಇತ್ಯರ್ಥವಾಗಲಿ ನಂತರ ದುಡ್ಡು ಕೊಡ್ತೀನಿ ಅಂತ ಪ್ರಭು ಹೇಳಿದ್ರಂತೆ. ಆದರೆ ಶೃುತಿ ದುಡ್ಡು ಕೊಟ್ಟಿಲ್ಲ ಅಂದ್ರೆ ಬಿಡಲ್ಲ ಅಂತಾ ಹೀಗೆ ಗ್ಯಾಂಗ್ ಕಟ್ಕೊಂಡು ಬಂದು ಅಟ್ಯಾಕ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

publive-image

ಕುಟುಂಬಸ್ಥರು ಮನೆಯೊಳಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಹೊರಗಡೆ ಇದ್ದ ಬಾಲಕಿ ಮೇಲೆ ಶೃತಿ ಕುರ್ಚಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಕಳೆದ ಸೋಮವಾರ ಮಧ್ಯರಾತ್ರಿ ನಡೆದ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

publive-image

ಪ್ರಭು ಕುಟುಂಬಸ್ಥರು ಪೊಲೀಸ್ರಿಗೆ ಮಾಹಿತಿ ನೀಡ್ತಿದ್ದಂತೆ ಪೊಲೀಸರು ಬರೋದನ್ನ ಕಂಡು ಶೃತಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ಸಂಬಂಧ ಶೃತಿ ಹಾಗೂ ಐವರುವಿರುದ್ಧ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment