newsfirstkannada.com

ಸೊಸೆ ಮಾಡಿದ ಮೋಸ, ಬೀದಿಗೆ ಬಂದ ಅತ್ತೆ! ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ 

Share :

Published August 20, 2024 at 8:15am

    ಸೊಸೆಯಿಂದಾಗಿ ಬೀದಿಗೆ ಬಂದ ಅತ್ತೆಯ ಬದುಕು

    ದಯಾಮರಣಕ್ಕೆ ಅವಕಾಶ ಕೊಡಿ ಎಂದು ರಾಷ್ಟ್ರಪತಿಗೆ ಮನವಿ

    ಮಗನ ಹೆಂಡತಿಯಿಂದ 11 ಲಕ್ಷ ರೂಪಾಯಿ ಸಾಲ.. ಅತ್ತೆ ಮನೆಯಿಂದ ಹೊರಕ್ಕೆ

ಸೊಸೆ ಮಾಡಿದ ಮೋಸಕ್ಕೆ ಬದುಕು ಬೀದಿಗೆ ಬಂದಿದೆ ಹೀಗಾಗಿ ಆಗಿರುವ ಅನ್ಯಾಯಕ್ಕೆ ಸಮಾಜದ ಯಾವುದೇ ವ್ಯಕ್ತಿ, ಅಧಿಕಾರಿಗಳಿಂದ ನ್ಯಾಯ ಸಿಕ್ಕಿಲ್ಲ. ಆದಕಾರಣ, ದಯಾಮರಣಕ್ಕೆ ಅವಕಾಶ ನೀಡಬೇಕು ಅಂತ ರಾಷ್ಟ್ರಪತಿಗೆ ಮನವಿ ಸಲ್ಲಿಸಿರುವ ಘಟನೆ ಗದಗನಲ್ಲಿ ನಡೆದಿದೆ.

ಆದಿತ್ಯ ನಗರದ ನಿವಾಸಿ ಅನುಸೂಯ ಬಸವಂತಪ್ಪ ಕರಕಿಕಟ್ಟಿ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದವರು. ಎಂಟು ವರ್ಷಗಳ ಹಿಂದೆ ಮಗನಿಗೆ ಪಾರ್ವತೆವ್ವ ಹುನಗುಂದ ಎಂಬ ಹುಡುಗಿ ನೋಡಿ ವಿವಾಹ ಮಾಡಲಾಗಿತ್ತು. ಮದುವೆಯಾದ ಮೂರು ತಿಂಗಳ ಕಾಲ ಇಬ್ಬರೂ ಚೆನ್ನಾಗಿಯೇ ಸಂಸಾರ ನಡೆಸಿಕೊಂಡಿದ್ದರು. ಸೊಸೆ ಪಾರ್ವತಿ ಸಾರಿಗೆ ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ಮನೆಕಟ್ಟಿಸಲು ಮನೆಯ ಕಾಗದಪತ್ರಗಳನ್ನು ಕೊಡುವಂತೆ ನನ್ನಲ್ಲಿ ಕೇಳಿಕೊಂಡಿದ್ದಳು. ನಾನು ಕೊಡಲು ಒಪ್ಪದಿದ್ದಾಗ ನನಗೆ ಗೊತ್ತಾಗದಂತೆ ಮನೆಯ ಕಾಗದಪತ್ರಗಳನ್ನು ತೆಗೆದುಕೊಂಡು ಹೋಗಿ ಹುಬ್ಬಳ್ಳಿಯಲ್ಲಿರುವ ಖಾಸಗಿ ಬ್ಯಾಂಕ್‌ನಿಂದ 11 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾಳೆ ಎಂದು ದೂರಿದ್ದಾರೆ.

ಇದನ್ನೂ ಓದಿ: VIDEO: ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ.. ಮಗುವಿದ್ದ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ

ಪಾರ್ವತಿ ಉದ್ಯೋಗದಲ್ಲಿದ್ದು ಆಕೆಯ ವೇತನದ ಆಧಾರದ ಮೇಲೆ ಸಾಲ ಪಡೆದುಕೊಂಡಿದ್ದಾಳೆ. ಅದಕ್ಕೆ ಆಧಾರವಾಗಿ ನಮ್ಮ ಮನೆಯ ಕಾಗದ ಪತ್ರಗಳನ್ನು ಬ್ಯಾಂಕ್‌ಗೆ ನೀಡಿದ್ದಾಳೆ. ಸಾಲ ಪಡೆದ ಬಳಿಕ ತನ್ನ ವೇತನ ಜಮೆ ಆಗುವ ಬ್ಯಾಂಕ್ ಖಾತೆಯನ್ನು ಬದಲಾಯಿಸಿದ್ದಾಳೆ. ಅಲ್ಲದೇ ಸಾಲ ಪಡೆದ ದಿನದಿಂದ ಈವರೆಗೆ ಒಂದು ರೂಪಾಯಿ ಸಾಲ ಮರುಪಾವತಿಸಿಲ್ಲ.

ಇದನ್ನೂ ಓದಿ: ಐಫೋನ್​ಗಾಗಿ 3 ದಿನ ಮಗ ಉಪವಾಸ.. ಮಿಡಿದ ಮಾತೃ ಹೃದಯ, ಯುವಕನ ಹಠಕ್ಕೆ ಭಾರೀ ಆಕ್ರೋಶ

ಇಷ್ಟು ವರ್ಷಗಳ ಕಾಲ ಸಾಲ ಪಡೆದ ಪಾರ್ವತಿ ವಿರುದ್ಧ ಕ್ರಮವಹಿಸದ ಬ್ಯಾಂಕ್ ಅಧಿಕಾರಿಗಳು ಏಕಾಏಕಿ ಪೊಲೀಸರ ಜತೆಗೆ ಬಂದು ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಸಾಲ ತುಂಬಿದರೆ ಮಾತ್ರ ಮನೆ ವಾಪಸ್ ನೀಡುವುದಾಗಿ ಹೇಳಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಮುದ್ದಾದ ಬೇಬಿ ಬಂಪ್​​ ಲುಕ್​ನಲ್ಲಿ ನಟಿ ಮಿಲನಾ ನಾಗರಾಜ್; ‘ಇಷ್ಟಾರ್ಥ ಪ್ರಾಪ್ತಿರಸ್ತು’ ಎಂದು ಹಾರೈಸಿದ ಫ್ಯಾನ್​​

ಬ್ಯಾಂಕ್ ಅಧಿಕಾರಿಗಳು ಬಂದಾಗಲೇ ನಮ್ಮ ಮನೆಯ ಕಾಗದಪತ್ರಗಳನ್ನು ಆಧಾರವಾಗಿಟ್ಟು ಬ್ಯಾಂಕ್‌ನಲ್ಲಿ ಸಾಲಪಡೆದಿರುವ ವಿಚಾರ ಗೊತ್ತಾಗಿದೆ. ನಮಗೆ ನ್ಯಾಯ ಕೊಡಿಸುವಂತೆ ಶಾಸಕರು, ಸಚಿವರು, ಸಂಸದರು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳನ್ನು ಕೋರಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ನಮಗೆ ನ್ಯಾಯ ಸಿಗುವ ಭರವಸೆಯೇ ಹೊರಟು ಹೋಗಿದೆ. ಸ್ವಂತ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಸಾಕಷ್ಟು ನೊಂದು, ಬದುಕಿನಲ್ಲಿ ಭರವಸೆ ಕಳೆದುಕೊಂಡಿರುವುದರಿಂದ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೊಸೆ ಮಾಡಿದ ಮೋಸ, ಬೀದಿಗೆ ಬಂದ ಅತ್ತೆ! ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ 

https://newsfirstlive.com/wp-content/uploads/2024/08/Gadag-1.jpg

Load More