/newsfirstlive-kannada/media/post_attachments/wp-content/uploads/2025/07/TMK-COURT-1.jpg)
ತುಮಕೂರು: ತಾಯಿ ವಿರುದ್ಧ ನ್ಯಾಯಾಲಯದಲ್ಲಿ ಮಗಳೇ ಸಾಕ್ಷಿ ಹೇಳಿದ ಅಪರೂಪದ ಘಟನೆಗೆ ತಾಲೂಕಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಸಾಕ್ಷಿ ಆಯಿತು. ಮಗಳು ಸಾಕ್ಷಿ ಹೇಳಿದ ಬಳಿಕ ಆರೋಪಿ ತಾಯಿಗೆ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಅಪರಾಧಿ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಯಶೋಧ ಹಾಗೂ ಆಕೆಯ ಪ್ರಿಯಕರ ಮಂಜುನಾಥ್ ಜೀವಾವಧಿ ಶಿಕ್ಷೆಗೆ ಒಳಗಾದವರು. ಮಂಜುನಾಥ್ ಹಾಗೂ ಯಶೋಧ ಮಧ್ಯೆ ಅಕ್ರಮ ಸಂಬಂಧ ಇತ್ತು. ಅದಕ್ಕೆ ಆಕೆಯ ಗಂಡ ಅಂಜಿನಪ್ಪ ವಿರೋಧ ವ್ಯಕ್ತಪಡಿಸ್ತಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಮುಗಿಸಲು ಯಶೋಧ ಪ್ಲಾನ್ ಮಾಡಿದ್ದಳು.
ಇದನ್ನೂ ಓದಿ: ಹಾಸನದಲ್ಲಿ ಮತ್ತೊಂದು ಹೃದಯಘಾತ.. ಮದುವೆ ಆಗಿ ಮೂರು ತಿಂಗಳೂ ಕಳೆದಿರಲಿಲ್ಲ..
[caption id="attachment_129706" align="aligncenter" width="800"] ಪತಿ ಅಂಜಿನಪ್ಪ ಮತ್ತು ಯಶೋಧಾ[/caption]
ಅಂತೆಯೇ 2018ರ ಮೇ 12ರಂದು ಮಧ್ಯರಾತ್ರಿ 1 ಗಂಟೆಯಲ್ಲಿ ಮಧುಗಿರಿ ತಾಲೂಕಿನ ಭಟ್ಟಗೆರೆಯಲ್ಲಿ ಅಂಜಿನಪ್ಪನನ್ನು ಮುಗಿಸಿದ್ದರು. ಮನೆ ಮುಂದೆ ಮಲಗಿದ್ದ ವೇಳೆ ರಾಡ್ ಮತ್ತು ಪಿಕಾಸಿಯಿಂದ ಹೊಡೆದು ಜೀವ ತೆಗೆದಿದ್ದರು. ಮಗಳು ಮಲಗಿದ್ದಾಳೆಂದು ಭಾವಿಸಿ ಇಬ್ಬರು ಸೇರಿ ಅಂಜನಪ್ಪನ ಮೇಲೆ ಅಟ್ಯಾಕ್ ಮಾಡಿದ್ದರು.
ತಂದೆಯ ಚೀರಾಟ ಕೇಳಿ ಎಚ್ಚರಗೊಂಡ ಮಗಳು, ಭೀಕರ ಕೃತ್ಯವನ್ನು ಕಣ್ಣಾರೆ ನೋಡಿದ್ದಳು. ಹಲ್ಲೆಯಿಂದ ರಕ್ತದ ಮಡುವಿನಲ್ಲಿ ಅಂಜನಪ್ಪ ಒದ್ದಾಡ್ತಿದ್ದರು. ಜೀವ ಇರೋದನ್ನ ಗಮನಿಸಿದ್ದ ಯಶೋಧ ಕೊನೆಗೆ ಪಿಕಾಸಿನಿಂದ ಕೊನೆಯ ಏಟು ಹೊಡೆದಿದ್ದಳು. ಇದರಿಂದ ಅಂಜಿನಪ್ಪ ಜೀವ ಕಳೆದುಕೊಂಡಿದ್ದರು.
ಪ್ರಕರಣವು ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಠಾಣೆಯಲ್ಲಿ ದಾಖಲಾಗಿತ್ತು. ಒಂದಷ್ಟು ದಿನ ಜೈಲಿನಲ್ಲಿದ್ದು ಬಳಿಕ ಬೇಲ್ ಮೇಲೆ ಇಬ್ಬರು ಆರೋಪಿಗಳು ಹೊರಬಂದಿದ್ದರು. ಇದೀಗ ನ್ಯಾಯಾಧೀಶರಾದ ನಾಗೀರೆಡ್ಡಿ ಅವರಿಂದ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಇದನ್ನೂ ಓದಿ: ಕ್ರಿಸ್ ಗೇಲ್ ಜೊತೆ ವಿಜಯ್ ಮಲ್ಯ, ಲಲಿತ್ ಮೋದಿ ಭರ್ಜರಿ ಪಾರ್ಟಿ..