/newsfirstlive-kannada/media/post_attachments/wp-content/uploads/2024/07/DVG-ACCIDENT-2.jpg)
ದಾವಣಗೆರೆ: ಕಾರು ಚಾಲನೆ ಮಾಡ್ತಿದ್ದ ವೇಳೆ ಡ್ರೈವರ್ಗೆ ಹಾರ್ಟ್ ಅಟ್ಯಾಕ್ ಆಗಿ ಐವರಿಗೆ ಗುದ್ದಿ ಅನಾಹುತ ಸಂಭವಿಸಿದೆ. ದಾವಣಗೆರೆ ನಗರದ ಕೆ.ಬಿ.ಬಡಾವಣೆಯ ಸಿದ್ದಮ್ಮ ಪಾರ್ಕ್ ಬಳಿ ದುರ್ಘಟನೆ ನಡೆದಿದೆ.
ಅಪಘಾತದ ರಭಸಕ್ಕೆ ಪುಟ್ಟ ಮಗು ಸೇರಿ ಇಬ್ಬರ ಕಾಲು ಕಟ್ ಆಗಿದೆ. ಆದರೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನಿಗೆ ಹೃದಯಾಘಾತ ಸಂಭವಿಸುತ್ತಿದ್ದಂತೆಯೇ ಕಾರು ನಿಯಂತ್ರಣ ಕಳೆದುಕೊಂಡಿದೆ. ಆಗ ಕಾರು ಆಟೋ ಹಾಗೂ ಬೈಕ್ಗೆ ಗುದ್ದಿದೆ.
ಇದನ್ನೂ ಓದಿ:ಮತ್ತೆ ಸುದ್ದಿಯಾದ ಪಾಂಡ್ಯ ಮತ್ತು ನಟಾಶಾ.. ಆ ಬಿಸಿಬಿಸಿ ಸುದ್ದಿ ಏನು..?
ನಂತರ ಐವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ಪರಿಣಾಮ ಇಬ್ಬರ ಕಾಲು ಕಟ್ ಆಗಿದೆ. ವನಜಾಕ್ಷಿ ಹಾಗೂ ಪುಟ್ಟ ಬಾಲಕಿ ಲಾವಣ್ಯರ ಕಾಲು ಕಟ್ ಆಗಿದೆ. ಓರ್ವ ಪೊಲೀಸ್ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಇನ್ನು ಹೃದಯಾಘಾತಕ್ಕೆ ಒಳಗಾಗಿರುವ ಡ್ರೈವರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಕಾರಿನಲ್ಲಿದ್ದ ಕೆಂಚವೀರಪ್ಪ ದಂಪತಿ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಒಂದು ಕೋಟಿ ರೂ ಮೌಲ್ಯದ ಮನೆ, Audi car.. ಅಬ್ಬಬ್ಬಾ! ಶ್ರೀಮಂತ ಕಳ್ಳನ ಬಂಧಿಸಿ ಬೆಚ್ಚಿಬಿದ್ದ ಪೊಲೀಸರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ