newsfirstkannada.com

ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ.. ಸ್ಮಾರ್ಟ್​ಫೋನ್​ನಲ್ಲಿ​ ಸೆರೆಯಾಯ್ತು ದಾವಣಗೆರೆಯ ಭಯಾನಕ ದೃಶ್ಯ

Share :

Published April 18, 2024 at 9:08am

    ಬಾಲಕನಿಗೆ ಸ್ಮೋಕ್​​ ಬಿಸ್ಕೆಟ್​ ಕೊಡಿಸಲು ಮುಂದಾದ ತಾಯಿ

    ಸ್ಮೋಕ್​ ಬಿಸ್ಕೆಟ್​ ತಿಂದಂತೆಯೇ ನೋವಿನಿಂದ ಒದ್ದಾಡಿದ ಬಾಲಕ

    ತಾಯಿಯ ಸ್ಮಾರ್ಟ್​ಫೋನ್​ನಲ್ಲಿ ಮಗ ಅಸ್ವಸ್ಥಗೊಂಡ ದೃಶ್ಯ ಸೆರೆ

ದಾವಣಗೆರೆ: ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ. ಬರ್ಡ್ಸ್ ಎಕ್ಸ್ಯೂಬ್ಯುಶನ್​ನಲ್ಲಿ ಬಾಲಕ ಸ್ಮೋಕ್​ ಬಿಸ್ಕೆಟ್​ ತಿಂದಿದ್ದಾನೆ. ತಿನ್ನುತ್ತಿದ್ದಂತೆಯೇ ಬಾಲಕ ಪ್ರಜ್ಞೆ ತಪ್ಪಿದ್ದಾನೆ.

ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಳಿಕ ಸ್ಮೋಕ್ ಬಿಸ್ಕೆಟ್ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ದೂರಿನ ಬಳಿಕ ಅಧಿಕಾರಿಗಳು ಸ್ಮೋಕ್ ಬಿಸ್ಕೆಟ್ ಮಾರಾಟ ಬಂದ್ ಮಾಡಿ ಅವುಗಳನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಆನ್​​ಲೈನ್​ ಗೇಮ್​ ‘Free Fire’ನಿಂದಾಗಿ ಗಲಾಟೆ.. ಯೋಧನ ಕಾರಿಗೆ ಬೆಂಕಿ

ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ ಆಗಿದ್ದಕ್ಕೆ ಅದನ್ನ ತಿನ್ನದಂತೆ ತಂದೆ-ತಾಯಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಬಾಲಕ ಅಸ್ವಸ್ಥ ಆಗೋ ದೃಶ್ಯ ತಾಯಿಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ.. ಸ್ಮಾರ್ಟ್​ಫೋನ್​ನಲ್ಲಿ​ ಸೆರೆಯಾಯ್ತು ದಾವಣಗೆರೆಯ ಭಯಾನಕ ದೃಶ್ಯ

https://newsfirstlive.com/wp-content/uploads/2024/04/sMOKE.jpg

Load More