/newsfirstlive-kannada/media/post_attachments/wp-content/uploads/2024/07/davanagere.jpg)
ದಾವಣಗೆರೆ: ಇಲ್ಲಿನ ಹೊಸ ಕುಂದುವಾಡದಲ್ಲಿ ಒಂದೇ ದಿನ 7 ಜನ ಸಾವನ್ನಪ್ಪಿದ್ದು, ದುರಾದೃಷ್ಟವೆಂದರೆ ಮೃತರ ಅಂತ್ಯಕ್ರಿಯೆ ಮಾಡಲು ಸ್ಮಶಾನ ಜಾಗವೇ ಇಲ್ಲದೆ ಕುಟುಂಬಸ್ಥರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೊಸ ಕುಂದುವಾಡ 3,000 ಜನಸಂಖ್ಯೆ ಹೊಂದಿರುವ ಪ್ರದೇಶವಾಗಿದ್ದು, ಆದರೆ ಈ ಊರಿಗೆ ಸ್ಮಶಾನವಿಲ್ಲ. ಇದರಿಂದ ಬೇಸತ್ತ ಊರಿನವರು ಸ್ಮಶಾನ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ! ವಾಲ್ಮೀಕಿ ನಿಗಮ ಹಗರಣಕ್ಕೂ ಇವರಿಗೂ ಏನು ಸಂಬಂಧ?
ಇನ್ನು ಈವರೆಗೆ ಸ್ಮಶಾನಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಆದರಿಂದು ಒಂದು ಮಗು ಸೇರಿ ಎಂಟು ಜನ ಸಾವನ್ನಪ್ಪಿದ್ದು ಅಂತ್ಯ ಸಂಸ್ಕಾರ ಮಾಡುವುದಕ್ಕೆ ಜಾಗವಿಲ್ಲದ ಪರಿಸ್ಥಿತಿ ಇದೆ. ಇಲಾಖೆಗಳು, ಅಧಿಕಾರಿಗಳು, ರಾಜಕಾರಣಿಗಳು ಎಚ್ಚೆತ್ತುಕೊಂಡು ಊರಿಗೊಂದು ಸ್ಮಶಾನ ನಿರ್ಮಾಣ ಮಾಡುವ ಅಗತ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ