newsfirstkannada.com

News First ವರದಿಗೆ ಎಚ್ಚೆತ್ತುಕೊಂಡ ಸರ್ಕಾರ.. 20 ನಿಮಿಷದಲ್ಲೇ ಸರ್ಕಾರಿ ಶಾಲಾ ಸಮಸ್ಯೆಗೆ ಮುಕ್ತಿ

Share :

11-06-2023

    ಇದು ಶಾಲೆನೋ.. ಪಾಲು ಬಿದ್ದ ಬಂಗಲೆನೋ

    ಶಾಲೆಯ ಸಮಸ್ಯೆಗೆ ನ್ಯೂಸ್​ ಫಸ್ಟ್​ ಕೊಡ್ತು ಮುಕ್ತಿ

    ನ್ಯೂಸ್​ ಫಸ್ಟ್​ ವರದಿಗೆ ಎಚ್ಚೆತ್ತ ಶಾಸಕ ದೇವೆಂದ್ರಪ್ಪ

ಸರ್ಕಾರಿ ಶಾಲೆ ಅಂದರೆ ಎಲ್ಲ ಸರ್ಕಾರಕ್ಕೂ ಅದೇನ್ ತಾತ್ಸಾರಾನೋ. ಸರ್ಕಾರಿ ಶಾಲೆಗಳಿಗೆ ಯಾವುದೇ ಮೂಲ ಸೌಲಭ್ಯ ಕೊಡಲ್ಲ ಅನ್ನುತ್ವೆ ಸರ್ಕಾರಗಳು. ಕೇವಲ ಬಾಯಿ ಮಾತಲ್ಲಿ ಸರ್ಕಾರಿ ಶಾಲೆ ಉಳಿಸಿ. ಸರ್ಕಾರಿ ಶಾಲೆ ಬೆಳಿಸಿ ಅಂತ ಹೇಳ್ತಾರೆ. ದಾವಣಗೆರೆ ಸರ್ಕಾರಿ ಶಾಲೆ ಅವಸ್ಥೆ ಬಗ್ಗೆ ನ್ಯೂಸ್ ಫಸ್ಟ್ ಸರ್ಕಾರದ ಗಮನಕ್ಕೆ ತರುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಇಪ್ಪತ್ತೇ ಇಪ್ಪತ್ತು ನಮಿಷದಲ್ಲಿ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

ಶಾಲೆ ಸಮಸ್ಯೆಯನ್ನ ಸರ್ಕಾರ ಗಮನಕ್ಕೆ ತಂದ ನ್ಯೂಸ್ ಫಸ್ಟ್

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಅನ್ನೋ ಸರ್ಕಾರಿ ಶಾಲೆಯ ದುಸ್ಥಿತಿ ನೋಡಿದ್ರೆ ಇದು ಶಾಲೆ ಅಲ್ಲ ಪಾಳು ಬಿದ್ದ ಬಂಗಲೆ ಅನಿಸುತ್ತೆ. ಹಿಂದಿನ ಸರ್ಕಾರನೇ ಆಗಿರ ಬಹುದು. ಈಗಿನ ಸರ್ಕಾರನೇ ಆಗ್ಲಿ.. ದಾವಣಗೆರೆಯ ಜಿಲ್ಲೆಯ ಈ ಶಾಲೆಯಲ್ಲಿ ಮೂಲ ಸೌಲಭ್ಯ ಕೊಡದೇ ಇದ್ದಿದ್ದರಿಂದ ಮಕ್ಕಳು ಸರ್ಕಾರಿ ಶಾಲೆಯನ್ನ ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ನ್ಯೂಸ್ ಫಸ್ಟ್ ವಿಸ್ತೃತ ವರದಿ ಬಿತ್ತರಿಸಿ ಶಾಲೆಯ ಸಮಸ್ಯೆಯನ್ನ ಸರ್ಕಾರದ ಗಮನಕ್ಕೆ ತಂದಿತ್ತು. ನ್ಯೂಸ್ ಫಸ್ಟ್ ವರದಿ ಮಾಡಿದ ಕೇವಲ 20 ನಿಮಿಷದಲ್ಲೇ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಅಧಿಕಾರಿಗಳು ಸಭೆ ಕರೆದಾಗ ನ್ಯೂಸ್ ಫಸ್ಟ್ ಚಾನಲ್ ನೋಡಿ ಸಮಸ್ಯೆಯ ಆಳ ಅರಿತ್ರು.

137 ವರ್ಷದ ಇತಿಹಾಸ

ಹೌದು.. ಈ ಶಾಲೆಯನ್ನ ಒಂದು ಸಾರಿ ನೋಡಿ. ಬಿರುಕು ಬಿಟ್ಟಿರುವ ಗೋಡೆಗಳು. ಒಡೆದಿರುವ ಹಂಚುಗಳು. ಅದ್ರಲ್ಲೇ ಪಾಠ ಕೇಳುತ್ತಿರುವ ಮಕ್ಕಳು.. ಈ ದೃಶ್ಯಗಳೆಲ್ಲ ಕಂಡು ಬಂದಿದ್ದು, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಾಲೇಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಇದು ಸುಮಾರು 137 ವರ್ಷದ ಇತಿಹಾಸ ಹೊಂದಿರುವ ಶಾಲೆ.. ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದಿ ತಮ್ಮ ಭವಿಷ್ಯ ನಿರ್ಮಿಸಿಕೊಂಡಿದ್ದಾರೆ. ಅಂತಹ ಇತಿಹಾಸ ಹೊಂದಿರುವ ಶಾಲೆ ಇದೀಗ ಅಳವಿನಂಚಿಗೆ ಬಂದಿದೆ.

137 ವರ್ಷಗಳ ಹಳೇ ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಈ ಶಾಲಾ ಕೊಠಡಿಯಲ್ಲಿ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುತ್ತೀವೆ. ಈ ಹಾಲೇಕಲ್ಲು ಶಾಲೆಯ ಅವ್ಯವಸ್ಥೆ ಬಗ್ಗೆ ನ್ಯೂಸ್ ಫಸ್ಟ್ ನಿಮ್ಮ ಪರವಾಗಿ ಅನ್ನೋ ಕಾರ್ಯಕ್ರಮದಲ್ಲಿ ವಿಸ್ತೃತ ವರದಿ ಬಿತ್ತರಿಸಿತ್ತು. ನ್ಯೂಸ್ ವರದಿ ಬಿತ್ತರಿಸಿದ್ದಲ್ಲದೆ ಈ ಶಾಲೆಯ ಸಮಸ್ಯೆಯನ್ನ ಸ್ಥಳೀಯ ಶಾಸಕ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ ಗಮನಕ್ಕೆ ತರಲಾಗಿತ್ತು. ಶಾಸಕ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ ಕ್ಷೇತ್ರದ ಶಾಲೆಯ ಅವ್ಯವಸ್ಥೆ ಕಂಡು ಸುದ್ದಿ ಬಿತ್ತರಿಸಿದ 20 ನಿಮಿಷದಲ್ಲಿ ಸ್ಥಳೀಯ ಶಾಸಕರು ಸ್ಥಳಕ್ಕೆ ಓಡೋಡಿ ಬಂದ್ರು. ಅಲ್ಲದೆ ಮೊನ್ನೆ ಖುದ್ದು ಸ್ಥಳಕ್ಕೆ ಭೇಟಿ ಕೊಟ್ಟು, ಶಾಲೆಯ ದುಸ್ಥಿತಿ ಕಂಡು ಡಿಡಿಪಿಐಗೆ ಕರೆ ಮಾಡಿ ನಾಳೆಯೇ ಪಾಲಕರ ಸಭೆ ಕರೆಯಿರಿ. ನೀವು ಬನ್ನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದ್ರು‌‌.

‘ಕೆಲಸ ಆಗಬೇಕು’

ಅದರಂತೆ ನಿನ್ನೆ ಡಿಡಿಪಿಐ ತಿಪ್ಪೇಶಪ್ಪ, ತಹಶಿಲ್ದಾರ ಸಂತೋಷ, ಜೊತೆ ಆಗಮಿಸಿದ ಶಾಸಕ ಚಿಕ್ಕಮ್ಮನಹಟ್ಟಿ ದೇವೆಂದ್ರಪ್ಪ 2 ರಿಂದ 3 ತಿಂಗಳಲ್ಲೇ 6 ಹೊಸ ಕಟ್ಟಡ ನಿರ್ಮಿಸಿ ಕೊಡುವ ಭರವಸೆ ನೀಡಿದ್ರು. ಶಾಸಕರ ಮಾತನ್ನ ಕೇಳಿದ ಗ್ರಾಮಸ್ಥರು ಮತ್ತು ಮಕ್ಕಳು ಚಪ್ಪಾಳೆ ತಟ್ಟಿ ಖುಷಿ ಪಟ್ಟರು. ಕಳೆದ 25 ವರ್ಷಗಳಿಂದ ಹೊಸ ಕಟ್ಟಡಕ್ಕೆ ಗ್ರಾಮಸ್ಥರೆಲ್ಲ ಶಾಸಕರ ಹತ್ತಿರ, ಅಧಿಕಾರಿಗಳ ಬಳಿ ಮನವಿ ಮೇಲ ಮನವಿ ಪತ್ರ ಹಿಡಿದು ಓಡಾಡಿದ್ರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ.

ಎಷ್ಟೇ ಮನವಿ ಕೊಟ್ಟರು ಶಾಸಕರ ಹಿಂದೆ ಸುತ್ತಾಡಿದರು ಆಗದ ಕೆಲಸ ನ್ಯೂಸ್ ಫಸ್ಟ್ ವರದಿಯಿಂದ ಆಗಿದ್ದಕ್ಕೆ ಗ್ರಾಮಸ್ಥರೆಲ್ಲ ಖುಷಿ ಪಟ್ಟರು. ಅಲ್ಲದೇ ಶಾಸಕರು ನೀಡಿದ ಭರವಸೆ ಭರವಸೆಯಾಗಿಯೇ ಉಳಿಬಾರದು. ಆದಷ್ಟು ಬೇಗ ಸಮಸ್ಯೆಯನ್ನ ಬಗೆಹರಿಸುವ ಮಾತು ಕೊಟ್ಟಿರುವ ಶಾಸಕರು, ಮಾತಿನಂತೆ ನಡೆದುಕೊಳ್ಳಬೇಕಿದೆ.

News First ವರದಿಗೆ ಎಚ್ಚೆತ್ತುಕೊಂಡ ಸರ್ಕಾರ.. 20 ನಿಮಿಷದಲ್ಲೇ ಸರ್ಕಾರಿ ಶಾಲಾ ಸಮಸ್ಯೆಗೆ ಮುಕ್ತಿ

https://newsfirstlive.com/wp-content/uploads/2023/06/Devendrappa.jpg

Load More