Advertisment

ಪೊಲೀಸರ ವಶದಲ್ಲಿದ್ದ ಆರೋಪಿ ಸಾವು; ASP ಕಾರಿನ ಮೇಲೆ ಕಲ್ಲು ತೂರಾಟ; ಉದ್ರಿಕ್ತರ ಮೇಲೆ ಲಾಠಿ ಚಾರ್ಜ್​

author-image
AS Harshith
Updated On
ಪೊಲೀಸರ ವಶದಲ್ಲಿದ್ದ ಆರೋಪಿ ಸಾವು; ASP ಕಾರಿನ ಮೇಲೆ ಕಲ್ಲು ತೂರಾಟ; ಉದ್ರಿಕ್ತರ ಮೇಲೆ ಲಾಠಿ ಚಾರ್ಜ್​
Advertisment
  • ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ ಆರೋಪಿ
  • ಪೊಲೀಸರ ಮೇಲು ಕಲ್ಲು ತೂರಿದ ಕಿಡಗೇಡಿಗಳು
  • ಠಾಣೆಗೆ ಮುತ್ತಿಗೆ ಹಾಕಿದ ಸಾವಿರಾರು ಜನರು, ಟಿಪ್ಪು ನಗರ ಬಿಗಿ ಬಂದೋ ಬಸ್ತ್

ದಾವಣಗೆರೆ: ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ ಘಟನೆ ಚನ್ನಗಿರಿಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರ ವಿರುದ್ಧ ಮೃತನ ಸಂಬಂಧಿಕರು ಲಾಕಪ್​ ಡೆತ್ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ, ಸ್ಟೇಷನ್​ ಮುಂದೆ ಪ್ರತಿಭಟನೆ ಮಾಡಿದ್ದಾರೆ.

Advertisment

publive-image

ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದೀಲ್ (33) ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆತ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದಾನೆ. ಈ ವಿಚಾರ ತಿಳಿದು ಚನ್ನಗಿರಿ ಪೊಲೀಸ್​ ಸ್ಟೇಷನ್​ಗೆ​ ನೂರಾರು ಮಂದಿ ಜಮಾಯಿಸಿದ್ದಾರೆ. ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿಗೆ ಜನರು ಮುತ್ತಿಗೆ ಹಾಕಿದ್ದಾರೆ.

publive-image

ಇದನ್ನೂ ಓದಿ: ಐದು ಹೆಣ್ಣು ಮಕ್ಕಳು.. ಮುಂದಿನ ಮಗು ಗಂಡೋ ಹೆಣ್ಣೋ ತಿಳಿಯಲು ಮುಂದಾಗಿದ್ದ ಗಂಡನಿಗೆ ಶಾಕ್​; ಆಗಿದ್ದೇನು..?

ಪೊಲೀಸರು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿ ಆದೀಲ್​ ಸಂಬಂಧಿಕರು ಸೇರಿ ಚನ್ನಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ಠಾಣೆ ಮುಂದೆ ಮೃತದೇಹ ಇಟ್ಟುಕೊಂಡು ಸಾವಿರಾಋಉ ಮಂದಿ ಪ್ರತಿಭಟಿಸುತ್ತಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment