newsfirstkannada.com

25 ವರ್ಷಗಳ ನಂತರ ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ದಿಗ್ವಿಜಯ; 2 ಕುಟುಂಬದ ಜಿದ್ದಾಜಿದ್ದಿ ಹೇಗಿತ್ತು? 

Share :

Published June 4, 2024 at 3:49pm

Update June 4, 2024 at 3:50pm

    ಈ ಬಾರಿ ಕರ್ನಾಟಕ ಲೋಕಸಭಾ ಅಖಾಡಕ್ಕೆ ಧುಮುಕಿದ್ದ 8 ನಾರಿಯರು

    ದಾವಣಗೆರೆಯಲ್ಲಿ ಕುತೂಹಲ ಮೂಡಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಫೈಟ್

    ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಸೋತ ಸಂಸದ ಸಿದ್ದೇಶ್ವರ್ ಪತ್ನಿ ಗಾಯಿತ್ರಿ

ದಾವಣಗೆರೆ: ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಕಾವು ಜೋರಾಗಿದೆ. ಈಗಾಗಲೇ ಕೆಲವೊಂದು ಕ್ಷೇತ್ರದ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಸಖತ್​ ಕಲರ್​ಫುಲ್​ ಆಗಿತ್ತು. ಕರ್ನಾಟಕದಲ್ಲಿ ಈ ಬಾರಿ ನಾರಿಯರಿಗೆ ರಾಜಕೀಯ ಪಕ್ಷಗಳು ಮಣೆ ಹಾಕಿದ್ದು, ಕಾಂಗ್ರೆಸ್​​ನಿಂದ 6 ಮಹಿಳೆಯರು ಟಿಕೆಟ್ ಗಿಟ್ಟಿಸಿದ್ರೆ, ಬಿಜೆಪಿ ಸಹ ಇಬ್ಬರನ್ನ ಅಖಾಡಕ್ಕೆ ಇಳಿಸಿತ್ತು. ಈ ಮೂಲಕ ಕದನ ಕಣದಲ್ಲಿ ಶಕ್ತಿಯ ಅವತಾರ ಪಣಕ್ಕೆ ಇಡಲಾಗಿತ್ತು.

ಇದನ್ನೂ ಓದಿ: ಆರಂಭದಿಂದಲೂ ಭರ್ಜರಿ ಲೀಡ್.. ಡಾ.C.N ಮಂಜುನಾಥ್ ಗೆಲುವಿನ ವೇಗಕ್ಕೆ ಕಂಗಾಲಾದ ಡಿ.ಕೆ ಸುರೇಶ್

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಸಚಿವ ಮಲ್ಲಿಕಾರ್ಜುನ್​​ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 25 ವರ್ಷಗಳ ನಂತರ ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನು, ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಬಿಜೆಪಿ ಸಹ ಸಂಸದ ಜಿ.ಎಂ ಸಿದ್ದೇಶ್ವರ್​ ಪತ್ನಿ ಗಾಯಿತ್ರಿ ಸಿದ್ದೇಶ್ವರ್​​ರನ್ನು ಕಣಕ್ಕೆ ಇಳಿಸಿದ್ದರು. ಈಗ ಗಾಯಿತ್ರಿ ಸಿದ್ದೇಶ್ವರ್ ಅವರು 3,84,391 ಮತಗಳನ್ನು ಪಡೆದುಕೊಂಡು ಸೋಲುಂಡಿದ್ದಾರೆ.

ಪ್ರಭಾ ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಅಷ್ಟೇ ಬಾಕಿ ಉಳಿದಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್ 4,27,926 ಮತಗಳನ್ನು ಪಡೆದಿದ್ದಾರೆ. ಗಾಯತ್ರಿ ಸಿದ್ದೇಶ್ವರ 3,84,391 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಜಿ.ಬಿ ವಿನಯ್ ಕುಮಾರ್ 27,672 ಮತಗಳನ್ನು ಪಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿಯಾಗಿದ್ದರು. ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಜಿ. ಎಂ. ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಹೋರಾಟಕ್ಕೆ ಬ್ರೇಕ್​ ಬಿದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

25 ವರ್ಷಗಳ ನಂತರ ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ದಿಗ್ವಿಜಯ; 2 ಕುಟುಂಬದ ಜಿದ್ದಾಜಿದ್ದಿ ಹೇಗಿತ್ತು? 

https://newsfirstlive.com/wp-content/uploads/2024/06/prabha.jpg

Load More