/newsfirstlive-kannada/media/post_attachments/wp-content/uploads/2024/11/davanagere-1.jpg)
ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಹಿಂದೂಗಳಂತೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆ ಪೂರ್ತಿ ದೀಪ ಉರಿಸಿ, ಬೆಳಕು ಹರಿಸಿ, ದೇವರನ್ನು ಪೂಜಿಸಿ ಹಬ್ಬ ಆಚರಿಸುತ್ತಾರೆ. ಮಾತ್ರವಲ್ಲದೆ ಹೊಸ ಬಟ್ಟೆಯನ್ನು ಧರಿಸಿ, ಮನೆಯವರೆಲ್ಲರೂ ಕೂಡಿಕೊಂಡು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಾವಣಗೆರೆಯ ಗ್ರಾಮವೊಂದರಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವುದೇ ಇಲ್ಲವಂತೆ. ಆದ್ಯಾಕೆ? ಈ ಸ್ಟೋರಿ ಓದಿ.
ದೀಪದಿಂದ ದೀಪವ ಹಚ್ಚಬೇಕು ಮಾನವ ಹಾಡು ಕೇಳಿದ್ದೀರಾ? ದೀಪ ಬೆಳಗಿದಂತೆ ಜೀವನವು ಬೆಳಗಬೇಕು. ಕತ್ತಲೆಯಿಂದ ಬೆಳಕಿನೆಡೆ ಜೀವನ ಸಾಗಬೇಕು. ಪ್ರತಿಯೊಬ್ಬರು ಜೀವನದಲ್ಲಿ ಮುಂದೆ ಬರಬೇಕು ಎಂದು ದೀಪಾವಳಿ ಹಬ್ಬ ಸಾರುವ ವಿಶೇಷ ಸಂದೇಶ. ಹಾಗಾಗಿ ಭಾರತೀಯರಿಗೆ ಈ ಹಬ್ಬ ಭಾರೀ ವಿಶೇಷ. ಆದರೆ ದಾವಣಗೆರೆಯ ಲೋಕಿಕೆರೆ ಗ್ರಾಮದಲ್ಲಿ ಕರಾಳ ದೀಪಾವಳಿ ಆಚರಿಸಲಾಗುತ್ತೆ. ಪ್ರತಿ ವರ್ಷ ಈ ಗ್ರಾಮದಲ್ಲಿ ಅರ್ಧದಷ್ಟು ಮನೆಗಳು ಹಬ್ಬವನ್ನೇ ಆಚರಿಸುವುದಿಲ್ಲವಂತೆ.
ಇದನ್ನೂ ಓದಿ: ಸ್ವಾಲಂಬಿಯಾಗಿ ಬದುಕು ಕಟ್ಟಿಕೊಳ್ಳೋ ಹೆಣ್ಮಕ್ಕಳಿಗೆ ಸ್ಪೂರ್ತಿಯಾದ ಲಕ್ಷ್ಮೀ ನಿವಾಸದ ಚೆಲುವೆ; ಏನದು?
ದೀಪಾವಳಿಯಂದು ಈ ಗ್ರಾಮದ ಜನರು ಹೊಸಬಟ್ಟೆ ತರಲ್ಲ, ತಳಿರು ತೋರಣ ಕಟ್ಟಲ್ಲ, ಲಕ್ಷ್ಮೀ ಪೂಜೆ ಮಾಡೋದಿಲ್ಲ. ಹಾಗಂತ ಇವರು ದೀಪಾವಳಿ ಹಬ್ಬ ವಿರೋಧಿಗಳು ಅಲ್ಲೇ ಅಲ್ಲ. ಹಬ್ಬ ಆಚರಿಸದೇ ಇರೋದಕ್ಕೆ ಒಂದು ಕಾರಣವಿದೆ. ಅದೇನೆಂದರೆ ಕೆಡುಕಾಗುತ್ತೆ ಎಂಬ ನಂಬಿಕೆ.
ಇದನ್ನೂ ಓದಿ: ಜೀವನವನ್ನೇ ಕತ್ತಲಾಗಿಸಿದ ಪಟಾಕಿ.. ಪುಟ್ಟ ಮಕ್ಕಳು ಸೇರಿ 22 ಮಂದಿಗೆ ಗಾಯ
ಹೌದು. ನೂರಾರು ವರ್ಷಗಳ ಹಿಂದೆ ದೀಪಾವಳಿ ಹಬ್ಬ ಆಚರಣೆಗೆ ಕಾಶಿಕಡ್ಡಿ ತರಲು ಹೋಗಿದ್ದ ಲೋಕಿಕೆರೆ ಗ್ರಾಮಸ್ಥರು ವಾಪಸ್ ಬರಲಿಲ್ವಂತೆ, ಹೀಗಾಗಿ ದೀಪಾವಳಿ ಹಬ್ಬ ಆಚರಿಸುವುದಿಲ್ಲ. ಒಂದ್ವೇಳೆ ಹಬ್ಬ ಆಚರಿಸಿದ್ರೆ ಊರಿನಲ್ಲಿ ಕೆಡಕಾಗುತ್ತೆ ಎಂಬ ನಂಬಿಕೆ ಇದೆ ಅಂತಾರೆ ಗ್ರಾಮಸ್ಥರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ