Advertisment

19 ಕೋಟಿ ಹಣ ಗೆದ್ದರೂ ಕೊಟ್ಟಿಲ್ಲ.. ಆನ್‌ಲೈನ್ ಬೆಟ್ಟಿಂಗ್‌ಗೆ ಯುವಕ ಬಲಿ

author-image
Bheemappa
Updated On
19 ಕೋಟಿ ಹಣ ಗೆದ್ದರೂ ಕೊಟ್ಟಿಲ್ಲ.. ಆನ್‌ಲೈನ್ ಬೆಟ್ಟಿಂಗ್‌ಗೆ ಯುವಕ ಬಲಿ
Advertisment
  • ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಇಲ್ಲ
  • ಆನ್​​ಲೈನ್​ ಗೇಮಿಂಗ್​ನಲ್ಲಿ ನಾನೂ ಕೂಡ ಹಣ ಕಳೆದುಕೊಂಡೆ
  • ಇಲ್ಲಿ ಲಂಚ ತಿನ್ನುವ ಅಧಿಕಾರಿಗಳೇ ಪಂಚಾಯತಿ ಮಾಡುತ್ತಾರೆ

ದಾವಣಗೆರೆ: ಆನ್​ಲೈನ್​ ಬೆಟ್ಟಿಂಗ್​ನಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisment

ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ. ಈತ ತಾನು ಜೀವ ಕಳೆದುಕೊಳ್ಳುವುದಕ್ಕೂ ಮೊದಲು ಸುದೀರ್ಘ 6 ಪುಟ ನೋಟ್​ ಬರೆದಿಟ್ಟಿದ್ದಾರೆ. ಇಷ್ಟೇ ಅಲ್ಲದೇ ಸೆಲ್ಫಿ ವಿಡಿಯೋ ಕೂಡ ಮಾಡಿದ್ದಾನೆ. ಆನ್‌ಲೈನ್ ಗೇಮಿಂಗ್‌ನಲ್ಲಿ ಯುವಕ 18 ಲಕ್ಷ ಹಣ ಕಳೆದುಕೊಂಡಿದ್ದನು. ಇದರಲ್ಲಿ 19 ಕೋಟಿಗೂ ಅಧಿಕ ದುಡ್ಡು ಗೆದ್ದಿದ್ದರೂ ಕೊಟ್ಟಿಲ್ಲ.

ಇದನ್ನೂ ಓದಿ: ಗೆಳೆಯನ ಕಾನ್​​ಸ್ಟೆಬಲ್​ ಸಮವಸ್ತ್ರ​ ಕದ್ದ.. 4 ರಾಜ್ಯದ 20ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಕಿರಾತಕ

publive-image

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆನ್​​ಲೈನ್​ ಗೇಮಿಂಗ್ ವೈಬ್​​ಸೈಟ್​ ವಿರುದ್ಧ ಪ್ರಕರಣ ನೀಡಿದರೂ ಸರಿಯಾಗಿ ಸ್ಪಂದಿಸದ ಪೊಲೀಸರ ವಿರುದ್ಧ ಯುವಕ ಆರೋಪ ಮಾಡಿದ್ದಾನೆ. ಆನ್‌ಲೈನ್ ಗೇಮಿಂಗ್ ಹಿಂದಿರುವ ಕಾಣದ ಕೈಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಂದಿನ ಪೀಳಿಗೆಗೆ ಸಮಸ್ಯೆ ಆಗದಿರಲಿ ಎಂದು ಬರೆದಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment