/newsfirstlive-kannada/media/post_attachments/wp-content/uploads/2024/11/DVG-INSURANCE-CASE.jpg)
ಹಣ ಅಂದ್ರೆ ಹೆಣಾನೂ ಬಾಯಿ ಬಿಡುತ್ತೆ. ತಾಮ್ರದ ದುಡ್ಡು ತಾಯಿ ಮಗನನ್ನು ಕೆಡಸಿತು ಅಂತ ಗಾದೆಯೇ ಇದೆ. ಸಂಬಂಧಗಳನ್ನ ದೂರ ಮಾಡುವ ದೈತ್ಯ ಶಕ್ತಿ ಹಣಕ್ಕಿದೆ. ತನ್ನವರು ಅನ್ನೋದನ್ನ ಒಮ್ಮೊಮ್ಮೆ ಅದು ಮರೆಸಿ ಹಾಕಿಬಿಡುತ್ತದೆ. ಒಡ ಹುಟ್ಟಿದವರೇ ಆಗಿರಲಿ. ರಕ್ತ ಹಂಚಿಕೊಂವರೇ ಆಗಿರಲಿ, ಹಣದ ಮುಂದೆ ಎಲ್ಲವೂ ನಗಣ್ಯವಾಗಿಬಿಡುತ್ತೆ. ಇಲ್ಲೂ ಒಬ್ಬ ಹಣದಾಸೆಗಾಗಿ ಎತ್ತಾಡಿಸಿದ ಮಾವನಿಗೆ ಸ್ಕೆಚ್ ಹಾಕಿದ್ದಾನೆ. ಸಿನಿಮಾ ಸ್ಟೈಲ್​​ನಲ್ಲಿ ಮಾವನ ಕೊಂದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಾಗಾದ್ರೆ ಮಾವನನ್ನೆ ಅಳಿಯ ಕೊಂದಿದ್ಯಾಕೆ? ಮನಿಗಾಗಿ ನಡೆದ ಮರ್ಡರ್​ ಹಿಂದಿನ ಸತ್ಯವೇನು?
ತಮಿಳಿನ ತೆಗಿಡಿ ಸಿನಿಮಾ ನೀವು ನೋಡಿದ್ದರೆ ಅರ್ಥವಾಗುತ್ತೆ. ಇನ್ಯೂರೆನ್ಸ್ ಹಣಕ್ಕಾಗಿ ನಡಿಯುವ ಕೊಲೆ ಸುತ್ತ ಕಥೆ ಸಾಗುತ್ತದೆ ಈ ಕಥೆ. ಥೇಟ್ ಇದೇ ತರಹ ಇಲ್ಲೊಬ್ಬ ಖತರ್ನಾಕ್ ಕಿರಾತಕ ತನ್ನನ್ನು ಎತ್ತಿ ಆಡಿಸಿದ ಮಾವನನ್ನೆ ಕೊಂದು ಬಿಟ್ಟಿದ್ದಾನೆ. ಈ ಕೊಲೆಗಾಗಿ ಐನಾತಿ ಮಾಡಿದ ಪ್ಲಾನ್ ಬಗ್ಗೆ ಗೊತ್ತಾದ್ರೆ ನೀವು ಪಕ್ಕಾ ಶಾಕ್. ದುಗ್ಗೇಶ್ ಎಂಬ ವ್ಯಕ್ತಿ ದಾವಣಗೆರೆಯ ಇಮಾಮ್ ನಗರದ ನಿವಾಸಿ ಈತ. ಹೊಟ್ಟೆಪಾಡಿಗಾಗಿ ಅಂತ ಬಸ್ ನಿಲ್ದಾಣದ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಆದ್ರೆ ಕುಡಿತದ ಚಟ ಇವನನ್ನ ಅಕ್ಷರಶಃ ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಹಾಗಾಗಿ ಕುಡಿದು ಕುಡಿದು ದುಗ್ಗೇಶ್ ಆರೋಗ್ಯ ಹಾಳು ಮಾಡಿಕೊಂಡಿದ್ದ. ಹೀಗಿರುವಾಗ ಮಂಗಳವಾರ ದುಗ್ಗೇಶ್ ಏಕಾಏಕಿ ಹೆಣವಾಗಿ ಸಿಕ್ಕಿದ್ದಾನೆ. ಲಿಂಗೇಶ್ವರ್ ದೇವಸ್ಥಾನದ ಬಳಿ ದುಗ್ಗೇಶ್ ಹೆಣ ಸಿಕ್ಕಿದೆ ಅಂತ ದುಗ್ಗೇಶ್ ಅಳಿಯ ಮೃತದೇಹ ತೆಗೆದುಕೊಂಡು ಬಂದಿದ್ದ. ಏನಾಯ್ತು ಅಂತ ಕೇಳಿದಾಗ ದೇವಸ್ಥಾನದ ಬಳಿ ಬಿದ್ದಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಬದುಕಿಲ್ಲ ಎಂದಿದ್ದಾರೆ ಅಂತ ಮನೆಯವರಿಗೆಲ್ಲೆ ಹೇಳಿದರು. ಕೊನೆಗೆ ದುಗ್ಗೇಶ್​​ನ ಅಂತ್ಯ ಸಂಸ್ಕಾರ ಕೂಡ ನಡೆದು ಹೋಗಿತ್ತು. ಆದ್ರೆ ದುಗ್ಗೇಶನದ್ದು ಸಹಜ ಸಾವಾ? ಕೊಲೆಯ ಅನ್ನೋ ಸುಳಿವು ಮಾತ್ರ ಗೊತ್ತಾಗಿರಲಿಲ್ಲ.
ಇದನ್ನೂ ಓದಿ: Justice For Sandhya: ಸಂಧ್ಯಾ ಸಾವಿಗೆ ಕನಿಕರ ತೋರಲಿಲ್ಲವೇ ಪೊಲೀಸರು? ಕೋರ್ಟ್ ಮೆಟ್ಟಿಲೇರಿದ ಪತಿ ಶಿವಕುಮಾರ್!
ದುಗ್ಗೇಶ ಸಾವು ಮನೆಯವರಿಗೆ ಇನ್ನಿಲ್ಲದ ಸಂಕಟ ನೀಡಿತ್ತು. ಎಲ್ಲರಿಗೂ ಇದು ಕೊಲೆ ಅನ್ನೋ ಅನುಮಾನವಿತ್ತು. ಹೀಗಾಗಿ ಒಂದು ಕಂಪ್ಲೇಟ್ ಕೊಡುವಂತೆ ದುಗ್ಗೇಶನ ಅಳಿಯ ಗಣೇಶ್​​ನಿಗೆ ಹೇಳಿದ್ದಾರೆ. ಆದರೆ ಅದ್ಯಾಕೋ ಗಣೇಶ್​ ದೂರು ಕೊಟ್ಟಿರಲಿಲ್ಲ. ಕೊನೆಗೆ ದುಗ್ಗೇಶ್​ನ ಇನ್ನೊಬ್ಬ ಸಂಬಂಧಿ ಪೊಲೀಸರಿಗೆ ಕೊಲೆ ಅಂತ ಎಫ್​ಐಆರ್ ದಾಖಲಿಸಿದ್ದ. ಪೊಲೀಸರು ತನಿಖೆ ಶುರು ಮಾಡಿದರು. ಆಗಲೇ ನೋಡಿ ದುಗ್ಗೇಶನ್​ದ್ದು ಸಹಜ ಸಾವಲ್ಲ ಕೊಲೆ ಅನ್ನೋ ಸತ್ಯ ಗೊತ್ತಾಗಿದ್ದು. ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿದ್ರು ಅನ್ನೋ ಬೆಚ್ಚಿ ಬೀಳಿಸುವ ಅಂಶ ಬಯಲಾಗಿದ್ದು.
ಕೊಲೆ ಅನ್ನೋದೇನೋ ಗೊತ್ತಾಗಿತ್ತು, ಆದ್ರೆ ಕೊಂದವಱರು? ಕಾರಣ ಏನು ಅನ್ನೋದು ಪೊಲೀಸರಿಗೆ ಕಾಡುತ್ತಿತ್ತು. ಯಾವಾಗ ಪೊಲೀಸರು ಕೇಸ್​​ಗೆ ಸಂಬಂಧಪಟ್ಟವರನ್ನೆಲ್ಲ ವಿಚಾರಣೆ ಮಾಡೋದಕ್ಕೆ ಶುರು ಮಾಡಿದ್ರೋ ಅಲ್ಲಿಂದ ಈ ಕೇಸ್​​ನ ಒಂದೊಂದೆ ಸತ್ಯಗಳು ಬಟ ಬಯಲಾಗ್ತ ಹೋಯ್ತು. ಕೊನೆಗೆ ಅಳಿಯ ಗಣೇಶ್​​ನೆ ಮಾವನನ್ನ ಕೊಂದಿದ್ದು ಅನ್ನೋ ಕಹಿ ಸತ್ಯ ರಿವೀಲ್ ಆಗಿತ್ತು.
/newsfirstlive-kannada/media/post_attachments/wp-content/uploads/2024/11/DVG-INSURANCE-CASE-2.jpg)
ಇನ್ಶೂರೆನ್ಸ್ ಹಣಕ್ಕಾಗಿ ಮಾವನಿಗೆ ಮುಹೂರ್ತ ಇಟ್ಟ ಅಳಿಯ!
ಸ್ವಂತ ಮಾವನನ್ನೆ ಗಣೇಶ್​ ಕೊಂದು ಹಾಕಿದ್ದ. ಸ್ವಂತ ಮಾವನ ಕಥೆಯನ್ನೆ ಅಳಿಯ ಮುಗಿಸಿಬಿಟ್ಟಿದ್ದ. ಅಷ್ಟಕ್ಕೂ ಸ್ವಂತ ಮಾವನನ್ನೆ ಈ ಪಾಪಿ ಕೊಂದಿದ್ದು ಅವರನ ಇನ್ಶೂರೆನ್ಸ್ ಹಣಕ್ಕಾಗಿ. ಅದೇ ಹಣಕ್ಕಾಗಿ ಇಲ್ಲಿ ಹೆಣವೇ ಉರುಳಿ ಹೋಗಿತ್ತು. ಗಣೇಶ್ ಮತ್ತು ದುಗ್ಗೇಶ್​ ಮಾವ ಅಳಿಯ. ದುಗ್ಗೇಶ್​​ ಕುಡಿದು ಕುಡಿದು ಆರೋಗ್ಯ ಹಾಳು ಮಾಡ್ಕೊಂಡಿದ್ದ. ಇವತ್ತಲ್ಲ ನಾಳೆ ಸತ್ತುಹೋಗುತ್ತಾನೆ ಅನ್ನೋದು ಗಣೇಶ್​​ನ ಊಹೆ ಆಗಿತ್ತು. ಇದ್ರ ಮಧ್ಯೆ ಗಣೇಶ್​​ನಿಗೆ ಹಣದ ಅವಶ್ಯಕತೆ ಕೂಡ ಇತ್ತು. ಹಣಕ್ಕೆ ಏನ್ ಮಾಡಬೇಕು ಎಂದುಕೊಂಡಾಗಲೇ ಗಣೇಶ್​ ಕಣ್ಣಿಗೆ ಅದೊಂದು ಸಿನಿಮಾ ಕಂಡಿತ್ತು. ಆ ಸಿನಿಮಾ ಹೆಸರು ತೆಗಿಡಿ.
ಇದನ್ನೂ ಓದಿ: BMTC ಡ್ರೈವರ್‌ಗೆ ಹೃದಯಾಘಾತ.. ಪ್ರಯಾಣಿಕರ ಜೀವ ಉಳಿಸಿದ ಕಂಡಕ್ಟರ್; ಕೊನೇ ಕ್ಷಣದ ವಿಡಿಯೋ ಇಲ್ಲಿದೆ!
ಹತ್ತು ವರ್ಷಗಳ ಹಿಂದೆ ತೆಗಡಿ ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಇನ್ಶೂರೆನ್ಸ್ ಹಣಕ್ಕಾಗಿ ನಡೆಯುವ ಕೊಲೆ ಸುತ್ತ ಕತೆಯನ್ನ ಹೆಣೆಯಲಾಗಿದೆ. ಮಾವನ ಹೆಸರಲ್ಲಿ ತಿಂದುಂಡು ತೇಗಬೇಕು ಅಂತ ಕಾಯ್ತಿದ್ದ ಗಣೇಶ್​​ ಕೂಡ ಇದೇ ಸಿನಿಮಾ ನೋಡಿ ಒಂದು ಪ್ಲಾನ್ ಮಾಡಿದ್ದ. ಅದೇನಂದ್ರೆ ದುಗ್ಗೇಶನ ಹೆಸರಲ್ಲಿ ವಿಮೆ ಮಾಡಿಸೋದು. ಯಾಕಂದ್ರೆ ಕುಡಿದು ಕುಡಿದು ಆರೋಗ್ಯ ಕೆಡಿಸಿಕೊಂಡಿದ್ದ ದುಗ್ಗೇಶ್​ ಇವತ್ತಲ್ಲ ನಾಳೆ ಸಾಯ್ತಾನೆ ಅಂತ ಅಂದುಕೊಂಡಿದ್ದ. ಇದೇ ಕಾರಣಕ್ಕೆ ದುಗ್ಗೇಶನ ಹೆಸರಲ್ಲಿ 40 ಲಕ್ಷದ ವಿಮೆ ಮಾಡಿಸಿ ಒಂದು ಕಂತು ಕೂಡ ಕಟ್ಟಿದ್ದ. ಆದ್ರೆ ಕಂತು ಕಟ್ಟಿದ್ದೆ ಬಂತು ದುಗ್ಗೇಶ್ ಮಾತ್ರ ಗಟ್ಟಿಮುಟ್ಟಾಗಿ ಹಾಗೇಯೇ ಉಳಿದಿದ್ದ.
ಇತ್ತ ಗಣೇಶ್​​ ತಲೆ ಕೆಟ್ಟು ಹೋಗಿತ್ತು. ಇವತ್ತು ಸಾಯುತ್ತಾನೆ. ನಾಳೆ ಸಾಯುತ್ತಾನೆ ಅಂತ ಕಾಯುತ್ತಿದ್ದ ಗಣೇಶ್​​ಗೆ ಸಾಕಾಗಿತ್ತು. ಇದರ ಮಧ್ಯೆ ಇನ್ನೆರಡು ತಿಂಗಳ ಕಳೆದಿದ್ರೆ ಮತ್ತೆ ಎರಡು ಲಕ್ಷ ಕಂತು ಕಟ್ಟಬೇಕಾಗಿತ್ತು. ಹೀಗಾಗಿ ಏನಾದ್ರು ಮಾಡಿ ದುಗ್ಗೇಶ್​ನನ್ನ ಮುಗಿಸಬೇಕು ಅಂತ ಪ್ಲಾನ್ ಮಾಡಿದ್ದ ಗಣೇಶ್​ ಕೊಲೆಗಾಗಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದ.
/newsfirstlive-kannada/media/post_attachments/wp-content/uploads/2024/11/DVG-INSURANCE-CASE-1.jpg)
ಮಾವನ ಹತ್ಯೆಗೆ ಗೆಳೆಯರ ಜೊತೆ ಪ್ಲಾನ್! ಕೊಲೆ ನಡೆದಿದ್ದೇಗೆ?
ಹಣ ಸಿಗುತ್ತೆ ಅನ್ನೋ ಆಸೆಯಲ್ಲಿ ವಿಮೆ ಮಾಡಿಸಿದ್ದ ಗಣೇಶ್​ಗೆ ಕಂತಿನ ಹಣ ಕೂಡ ವಾಪಸ್ ಬರುವ ಲಕ್ಷಣಗಳು ಕಾಣಲಿಲ್ಲ. ಹೀಗಾಗಿ ದುಗ್ಗೇಶ್​ನನ್ನ ಮುಗಿಸೋಕೆ ಐಡಿಯಾ ಮಾಡಿದ್ದ ಗಣೇಶ್​ ತನ್ನ ಸ್ನೇಹಿತರ ಜೊತೆ ಕೊಲೆಗೆ ಸ್ಕೆಚ್ ರೂಪಿಸಿದ್ದ. ಅದ್ರಂತೆ ಕಳೆದ ಸೋಮವಾರ ಗಣೇಶನ ಸ್ನೇಹಿತರಾದ ಅನೀಲ್​ ಶಿವಕುಮಾರ್ ಮಾರುತಿ, ಮೂರು ಜನ ಮನೆಯಲ್ಲಿದ್ದ ದುಗ್ಗೇಶ್​ನನ್ನ ಕರೆದುಕೊಂಡು ಬಂದಿದ್ದಾರೆ. ದಾವಣಗೆರೆಯ ಹೊರ ವಲಯಲದಲ್ಲಿ ದುಗ್ಗೇಶ್​ನ ಬಾಯಿಗೆ ಬಟ್ಟೆ ತುರುಕಿ ಮನಸೋ ಇಚ್ಚಿ ಹಲ್ಲೆ ಮಾಡಿದ್ದಾರೆ. ಕೊನೆಗೆ ಉಸಿರುಗಟ್ಟಿಸಿ ದುಗ್ಗೇಶನ ಜೀವ ತೆಗೆದಿದ್ದಾರೆ.
ಮನೆಗೆ ಮಾವನ ಮೃತದೇಹ ತಂದು ಡ್ರಾಮಾ ಮಾಡಿದ್ದ ಅಳಿಯ!
ಮಾವ ದುಗ್ಗೇಶ್​ನ ಜೀವ ತೆಗೆದಿದ್ದ ಗಣೇಶ್​​ ಬಾಡಿಯನ್ನ ಲಿಂಗೇಶ್ವರ ದೇವಸ್ಥಾನದ ಬಳಿ ಬೀಸಾಕಿ ಬಂದಿದ್ದಾನೆ. ಮರು ದಿನ ಅಂದ್ರೆ ಮಂಗಳವಾರ ತಾನೇ ಹೋಗಿ ಮಾವನ ಹೆಣ ತಂದು ಮನೆಯವರಿಗೆಲ್ಲ ಕತೆ ಕಟ್ಟಿದ್ದಾನೆ. ದೇವಸ್ಥಾನದ ಬಳಿ ಬಿದ್ದಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸತ್ತಿದ್ದಾನೆ ಎಂದಿದ್ದಾರೆ ಅಂತ ಬ್ರಹನ್ನಾಟಕ ಮಾಡಿದ್ದಾನೆ. ಮನೆಯವರೆಲ್ಲ ಗಣೇಶ್ ಹೇಳಿದ್ದೆ ಸತ್ಯ ಅಂತ ನಂಬಿದ್ರು. ಆದ್ರೆ ಯಾವಾಗ ದುಗ್ಗೇಶ್​ ಮೈಮೇಲಿದ್ದ ಗಾಯ ನೋಡಿ ಸಂಬಂಧಿ ದೂರು ಕೊಟ್ರೊ ಆಗ ಕೊಲೆಯ ಸತ್ಯ ಗೊತ್ತಾಗಿದೆ. ತನಿಖೆ ಶುರು ಮಾಡಿದ್ದ ಪೊಲೀಸರು ಈ ಗಣೇಶ್​ನನ್ನ ಕರ್ಕೊಂಡು ಬಂದು ಸರಿಯಾದ ಟ್ರೀಟ್​ಮೆಂಟ್ ಕೊಟ್ಟಾಗ ಗಣೇಶ್​​ ಸತ್ಯವನ್ನ ಕಕ್ಕಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us