/newsfirstlive-kannada/media/post_attachments/wp-content/uploads/2025/06/DVG_SNAKE.jpg)
ದಾವಣಗೆರೆ: ದೇವಾಲಯದ ಹುತ್ತದಲ್ಲಿದ್ದ ಕೆರೆ ಹಾವೊಂದನ್ನು ಉರಗ ತಜ್ಞ ರಕ್ಷಣೆ ಮಾಡಿರುವ ಘಟನೆ ದಾವಣಗೆರೆಯ ಅಣ್ಣ ನಗರದ ಸಿದ್ದರಾಮೇಶ್ವರ ದೇವಾಲಯದಲ್ಲಿ ನಡೆದಿದೆ.
ಅಣ್ಣ ನಗರದ ಸಿದ್ದರಾಮೇಶ್ವರ ದೇವಾಲಯದಲ್ಲಿ ಇರುವ ಹುತ್ತದಲ್ಲಿ ಕೆರೆ ಹಾವೊಂದು ಬಂದು ಸೇರಿಕೊಂಡಿದೆ. ಎಂದಿನಂತೆ ದೇವಾಯದ ಪೂಜಾರಿ ದೇವರಿಗೆ ಪೂಜೆ ಮಾಡಲೆಂದು ಮುಂದಾಗಿದ್ದಾರೆ. ಈ ವೇಳೆ ಹಾವು ಕಾಣಿಸಿಕೊಂಡಿದ್ದರಿಂದ ಪೂಜಾರಿ ಭಯಭೀತರಾಗಿ ಹೊರ ಬಂದಿದ್ದಾರೆ. ತಕ್ಷಣ ಸ್ಥಳೀಯರು, ಉರಗ ತಜ್ಞ ಬಸವರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ, ದೇವಾಲಯದ ಹುತ್ತದಲ್ಲಿದ್ದ ಹಾವನ್ನು ಹೊರ ತೆಗೆಯಲು ಕೆಲ ಸಮಯ ತೆಗೆದುಕೊಂಡರು. ಏಕೆಂದರೆ ಕೆರೆ ಹಾವು 7 ಅಡಿ ಇದ್ದಿದ್ದರಿಂದ ಬೇಗನೇ ಸೆರೆ ಹಿಡಿಯಲು ಆಗಲಿಲ್ಲ. ಕೊನೆಗೆ ಹೇಗೋ ಮಾಡಿ ಹಾವನ್ನು ಹಿಡಿದು ಹೊರ ತೆಗೆದಿದ್ದಾರೆ. ಇನ್ನು ರೈತರ ಬೀದಿಯಲ್ಲಿರುವ ಟ್ರ್ಯಾಕ್ಟರ್ ಗ್ಯಾರೇಜ್​ನ ಅಡಿ ಕುಳಿತಿದ್ದ ಇನ್ನೊಂದು ಕೆರೆ ಹಾವನ್ನು ಇದೇ ಉರಗ ತಜ್ಞರು ರಕ್ಷಣೆ ಮಾಡಿದರು. ಸದ್ಯ 2 ಕೆರೆ ಹಾವುಗಳನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ