newsfirstkannada.com

ಜಿಲ್ಲೆಯಲ್ಲಿ ಭೀಕರ ಬರ.. ಮಳೆಗಾಗಿ ಅದ್ಧೂರಿಯಾಗಿ ಕತ್ತೆಗಳ ಮದುವೆ

Share :

Published May 15, 2024 at 3:08pm

Update May 15, 2024 at 6:09pm

    ಹನಿ ನೀರು ಕೂಡ ಇಲ್ಲದೇ ಸುತ್ತಲಿನ ತೋಟಗಳು ಒಣಗುತ್ತಿವೆ

    ಸಂಭ್ರಮದಿಂದ ಕತ್ತೆಗಳ ಮದುವೆ ಮಾಡಿ ವರುಣನಲ್ಲಿ ಪ್ರಾರ್ಥನೆ

    ಮಳೆಯಿಲ್ಲದೆ ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಹಾಹಾಕಾರ

ದಾವಣಗೆರೆ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ರೂ ದಾವಣಗೆರೆಯಲ್ಲಿ ಮಾತ್ರ ಬರ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲ್ಲ ಸೇರಿಕೊಂಡು ಕತ್ತೆಗಳಿಗೆ ಮದುವೆ ಮಾಡಿ ವರುಣರಾಯನಿಗಾಗಿ ಪ್ರಾರ್ಥಿಸಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಮಳೆಯಿಲ್ಲದೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಅಲ್ಲದೇ ತೋಟಗಳು ಕೂಡ ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಸ್ತ್ರೋಕ್ತವಾಗಿ ಹೆಣ್ಣು ಹಾಗೂ ಗಂಡು ಕತ್ತೆಗಳ ಮದುವೆ ಮಾಡಿ, ವರುಣ ದೇವನಲ್ಲಿ ಕೃಪೆ ತೋರುವಂತೆ ಪ್ರಾರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: DKShivakumar: ಡಿಸಿಎಂ ಡಿ.ಕೆ ಶಿವಕುಮಾರ್‌ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ; ಟ್ರೆಂಡಿಂಗ್‌!

ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಅಲ್ಲದೇ ಕೆಲವೊಂದು ಕಡೆ ಕಪ್ಪೆಗಳ ಮದುವೆ ಕೂಡ ಮಾಡುತ್ತಾರೆ. ಕತ್ತೆ, ಕಪ್ಪೆ ಮದುವೆ ಮಾಡಿದ್ರೆ ಮಳೆಯಾಗುತ್ತೆ ಅನ್ನೋದು ಜನರ ನಂಬಿಕೆಯಾಗಿದೆ. ಸದ್ಯ ಇದೀಗ ಪೂರ್ವ ಮುಂಗಾರು ಕೂಡ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದ ಗ್ರಾಮಸ್ಥರು ಕತ್ತೆಗಳ ಮದುವೆಯನ್ನು ಸಂಭ್ರಮದಿಂದ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಲ್ಲೆಯಲ್ಲಿ ಭೀಕರ ಬರ.. ಮಳೆಗಾಗಿ ಅದ್ಧೂರಿಯಾಗಿ ಕತ್ತೆಗಳ ಮದುವೆ

https://newsfirstlive.com/wp-content/uploads/2024/05/DVG_DONKEYS.jpg

Load More