/newsfirstlive-kannada/media/post_attachments/wp-content/uploads/2024/11/DVG-Online-Fraud.jpg)
ಸದ್ಯದ ಜಗತ್ತಿನಲ್ಲಿ ಸೈಬರ್ ಕ್ರೈಂಗಳು ಅನ್ನೋದು ಅತಿರೇಕಕ್ಕೆ ಮುಟ್ಟಿದೆ. ಏನೋ ಆಮಿಷ, ಇನ್ನೇನು ಆಸೆಗಳನ್ನು ತೋರಿಸಿ ವಂಚಿಸುತ್ತಾರೆ. ಇಷ್ಟು ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ ಎಂದು ನಂಬಿಸುತ್ತಾರೆ. ಇಲ್ಲವೇ, ಯಾರದ್ದೋ ಮಾತು ನಂಬಿ ಕೆಲವೊಮ್ಮೆ ನಮ್ಮ ಕೈಯಲ್ಲಿದ್ದ ಹಣವನ್ನು ಕಳೆದುಕೊಂಡ ಘಟನೆಗಳು ಕೂಡ ವರದಿಯಾಗುತ್ತಲೇ ಇರುತ್ತವೆ. ದಾವಣಗೆರೆಯಲ್ಲಿಯೂ ಕೂಡ ಈಗ ಇಂತಹುದೇ ಒಂದು ಘಟನೆ ನಡೆದಿದೆ. ದಾವಣಗೆರೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಉಮೇಶ್ ಅವರ ಮಾತು ನಂಬಿ ಮಹಿಳೆಯೊಬ್ಬರು 10 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಗಂಡನಿಗೆ ಊಟ ಬಡಿಸದೇ ಫೋನ್​ನಲ್ಲಿ ಬ್ಯುಸಿಯಾದ ಪತ್ನಿ; ಆಮೇಲೆ ನಡೆದಿದ್ದು ಮಾತ್ರ..
ದಾವಣಗೆರೆಯ ವಿಶ್ವಚೇತನ ಶಾಲೆಯ ನಿರ್ದೇಶಕಿಯಾಗಿರುವ ವಿಜಯಲಕ್ಷ್ಮೀ ಎಂಬುವವರಿಗೆ ಈ ರೀತಿಯಾದ ವಂಚನೆಯಾಗಿದೆ. ಗೋಲ್ಡ್​ಸ್ನಾಚ್ ಎಂಬ ಕಂಪನಿಯಿಂದ ಈ ವಂಚನೆ ಆಗಿರುವುದು ಕಂಡು ಬಂದಿದೆ. ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ರೆ ಒಳ್ಳೆ ಲಾಭ ಬರುತ್ತೆ ಎಂದು ವಿಜಯಲಕ್ಷ್ಮೀ ಅವರಿಗೆ ಉಮೇಶ್ ಅವರು ಹೇಳಿದ್ದರು. ಉಮೇಶ್ ಅವರ ಮಾತು ಕೇಳಿ ವಿಜಯಲಕ್ಷ್ಮೀ ಜೂನ್ ತಿಂಗಳಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ನಂತರ ಅವರ ಹೂಡಿಕೆ ಮಾಡಿದ ಹಣ 23 ಕೋಟಿ ತಲುಪಿದೆ ಎಂದು ತೋರಿಸಿದಾಗ ಹಣ ವಿತ್​ಡ್ರಾ ಮಾಡಲು ವಿಜಯಲಕ್ಷ್ಮೀ ಹೋಗುತ್ತಾರೆ. ಈ ವೇಳೆ ಹಣವನ್ನು ಡ್ರಾ ಮಾಡಲು ಬರುವುದಿಲ್ಲ, ನೀವು ಮತ್ತಷ್ಟು ಹೂಡಿಕೆ ಮಾಡಬೇಕು ಎಂದು ಕಂಪನಿಯವರು ಹೇಳಿದಾಗ ವಿಜಯಲಕ್ಷ್ಮೀ ಅವರಿಗೆ ತಾವು ಮೋಸ ಹೋಗಿರುವುದು ಸ್ಪಷ್ಟವಾಗುತ್ತೆ.
ಸದ್ಯ ವಿಜಯಲಕ್ಷ್ಮೀ ಅವರಿಗೆ ಹೂಡಿಕೆ ಬಗ್ಗೆ ವಿವರಿಸಿದ ಸಾಕ್ಷಿ ಹಾಗೂ ಅಮಾನ್ ಎಂಬುವವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ದಾವಣಗೆರೆ ಸೈಬರ್ ಠಾಣೆಯಲ್ಲಿ ವಿಜಯಲಕ್ಷ್ಮೀ ಅವರು ದೂರು ದಾಖಲಿಸಿದ್ದಾರೆ. 10 ಕೋಟಿ ರೂಪಾಯಿ ಹಣ ವಂಚನೆಯಾಗಿದ್ದರಿಂದ ಪ್ರಕರಣವನ್ನು ಸಿಐಡಿಗೆ ವರ್ಗ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us