/newsfirstlive-kannada/media/post_attachments/wp-content/uploads/2025/07/PSI-DEATH.jpg)
ತುಮಕೂರು: ದಾವಣಗೆರೆ ಪಿಎಸ್ಐ ತುಮಕೂರಿನ ದ್ವಾರಕಾ ಹೋಟೆಲ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಾಗರಾಜಪ್ಪ (45) ಅನುಮಾನಾಸ್ಪದ ರೀತಿಯಲ್ಲಿ ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ: ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ; ಶಿವಮೊಗ್ಗದಲ್ಲಿ ಟೈಟ್ ಸೆಕ್ಯೂರಿಟಿ
ಕಳೆದ 1ನೇ ತಾರೀಖು ಪಿಎಸ್ಐ ನಾಗರಾಜಪ್ಪ ತುಮಕೂರು ನಗರಕ್ಕೆ ಬಂದಿದ್ದರು. ದ್ವಾರಕಾ ಹೋಟೆಲ್ನ ಲಾಡ್ಜ್ನ 4ನೇ ಮಹಡಿಯಲ್ಲಿ ಬಾಡಿಗೆ ಪಡೆದಿದುಕೊಂಡಿದ್ದರು. ಅದೇ 4ನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.
ಅವರ ರೂಂನಲ್ಲಿ ಡೇತ್ ನೋಟ್ ಪತ್ತೆಯಾಗಿದೆ. ನನ್ನ ಈ ನಿರ್ಧಾರಕ್ಕೆ ನಾನೇ ಕಾರಣ ಎಂದು ಬರೆದುಕೊಂಡಿರೋದು ಗೊತ್ತಾಗಿದೆ. ಲಾಡ್ಜ್ನಲ್ಲಿ ದುರ್ವಾಸನೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ