Advertisment

ಸಾಲ ಕೊಡದ ಸಿಟ್ಟಿಗೆ 17 kg ಚಿನ್ನ ದೋಚಿದ ಕಳ್ಳರು.. ಇದು ಸಿನಿಮಾವನ್ನು ಮೀರಿಸಿದ ರೋಚಕ ಸ್ಟೋರಿ!

author-image
admin
Updated On
ಸಾಲ ಕೊಡದ ಸಿಟ್ಟಿಗೆ 17 kg ಚಿನ್ನ ದೋಚಿದ ಕಳ್ಳರು.. ಇದು ಸಿನಿಮಾವನ್ನು ಮೀರಿಸಿದ ರೋಚಕ ಸ್ಟೋರಿ!
Advertisment
  • ಸಾಲ ಕೊಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದಕ್ಕೆ ಗುಡಿಸಿ ಗುಂಡಾಂತರ!
  • ಬ್ಯಾಂಕಿನ ತುಂಬಾ ಖಾರದ ಪುಡಿ ಎರಚಿ ಸಾಕ್ಷಿಗಳನ್ನು ನಾಶಪಡಿಸಿದ್ದರು
  • ಗಡಿಚೌಡಮ್ಮಗೆ ಅಷ್ಟದಿಗ್ಬಂಧನ ಪೂಜೆ ಮಾಡಿಸಿದ್ದ ಕಳ್ಳರ ಗ್ಯಾಂಗ್‌!

ದಾವಣಗೆರೆ: 6 ತಿಂಗಳ ಬಳಿಕ ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್‌ಗೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. 2024 ಅಕ್ಟೋಬರ್ 26ರಂದು ನ್ಯಾಮತಿ ಪಟ್ಟಣದಲ್ಲಿರುವ SBI ಬ್ಯಾಂಕ್‌ನಲ್ಲಿ ಕಳುವು ಮಾಡಲಾಗಿತ್ತು. ಖದೀಮರ ಹಿಂದೆ ಬಿದ್ದ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಕಳ್ಳರ ಗ್ಯಾಂಗ್‌ ಅನ್ನು ಬಲೆಗೆ ಬೀಳಿಸುವಲ್ಲಿ ಸಕ್ಸಸ್ ಆಗಿದ್ದಾರೆ.

Advertisment

ಈ ಆರೋಪಿಗಳು ಬ್ಯಾಂಕ್‌ನಲ್ಲಿ ಬೇಕರಿ ಬ್ಯುಸಿನೆಸ್‌ ಮಾಡಲು ಸಾಲ ಕೇಳಿದ್ದರು. ಸಾಲ ಕೊಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದು, ಬ್ಯಾಂಕ್‌ ಅನ್ನೇ ಗುಡಿಸಿ ಗುಂಡಾಂತರ ಮಾಡಿದ್ದಾರೆ. ಈ ಕಳ್ಳರು ಹಲವಾರು ಸಿನಿಮಾ, ಧಾರಾವಾಹಿ, ಯುಟ್ಯೂಬ್ ವಿಡಿಯೋ ನೋಡಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದಾರೆ.

publive-image

ದಾವಣಗೆರೆ ಪೊಲೀಸರು ಕಬ್ಬಿಣದ ಕಡಲೆಯಾಗಿದ್ದ ಈ ಪ್ರಕರಣವನ್ನು ಬೇಧಿಸಿದ್ದು, 13 ಕೋಟಿ ಮೌಲ್ಯದ 17 ಕೆಜಿ ಚಿ‌ನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ಚಿನ್ನದಿಂದ ದಾವಣಗೆರೆ ಎಸ್ಪಿ ಆಫೀಸ್ ಇಂದು ಅಕ್ಷರಶಃ ಜ್ಯೂವೆಲರಿ ಶಾಪ್ ಆಗಿತ್ತು. ಐಜಿ ರಜನೀಕಾಂತೆಗೌಡರು ಈ ಪ್ರಕರಣ ಭೇದಿಸಿದ ರೋಚಕ ಸ್ಟೋರಿಯನ್ನು ವಿವರಿಸಿದ್ದಾರೆ.

publive-image

ಈ ಕಳ್ಳತನದಲ್ಲಿ ಭಾಗಿಯಾಗಿದ್ದ 6 ಜನರಲ್ಲಿ ತಮಿಳುನಾಡಿನ ಮೂವರು, ನ್ಯಾಮತಿ ಮೂಲದ ಮೂವರು ಇದ್ದಾರೆ. ವಿಜಯಕುಮಾರ್ (30), ಅಜಯ್ ಕುಮಾರ್ (28,) ಅಭಿಷೇಕ (23) ಚಂದ್ರು (23)ಮಂಜುನಾಥ್ (32) ಪರಮಾನಂದ (30) ಬಂಧಿತ ಆರೋಪಿಗಳು.

Advertisment

publive-image

ಆರೋಪಿ ವಿಜಯ್‌ಕುಮಾರ್ ಬೇಕರಿ ಉದ್ಯಮ ಉನ್ನತ ಮಟ್ಟಕ್ಕೆ ಏರಿಸಲು ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದ. ಈತನ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಿದ್ದರಿಂದ ಸಾಲದ ಅರ್ಜಿ ವಜಾಗೊಂಡಿತ್ತು. ಇದರಿಂದ ಕಂಗಾಲಾಗಿದ್ದ ವಿಜಯ್ ಕುಮಾರ್ ಬ್ಯಾಂಕ್‌ ಕಳ್ಳತನಕ್ಕೆ ಸ್ಕೆಚ್ ಹಾಕಿ ಈ ಗ್ಯಾಂಗ್ ಸೃಷ್ಟಿ ಮಾಡಿದ್ದ.

ಇದನ್ನೂ ಓದಿ: ನಟಿ ರನ್ಯಾ ರಾವ್‌ ಗೋಲ್ಡ್‌ ಕೇಸ್‌ಗೆ ಮೇಜರ್ ಟ್ವಿಸ್ಟ್‌.. ಚಿನ್ನ ಮಾರಾಟ ಮಾಡಿದ ರಹಸ್ಯ ಬಯಲು! 

ಮೂಲತ: ತಮಿಳುನಾಡಿನವರಾದ ವಿಜಯ್ ಕುಮಾರ್, ಅಜಯ್ ಕುಮಾರ್ ಮತ್ತು ಪರಮಾನಂದ ನ್ಯಾಮತಿಯಲ್ಲಿಯೇ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ತಮಿಳುನಾಡು ಮೂಲದ ಸಹೋದರರು ಬೇಕರಿ ವ್ಯಾಪಾರ ಮಾಡುತ್ತಿದ್ದರು, ಆದರೆ ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ್ದಕ್ಕೆ ದರೋಡೆಗೆ ಇಳಿದರು ಎನ್ನಲಾಗಿದೆ.

Advertisment

publive-image

ನ್ಯಾಮತಿ SBI ಬ್ಯಾಂಕಿನ ಹಿಂದೆ ಕಾಡು ರೀತಿಯಲ್ಲಿ ಮರ ಗಿಡಗಳು ಬೆಳೆದಿರುವುದು ದರೋಡೆಗೆ ಅನುಕೂಲವಾಗಿದೆ. ದರೋಡೆಗಾಗಿ ಸುಮಾರು 4 ಕಿ.ಮೀ. ದೂರ ನಡೆದುಕೊಂಡೇ ಬಂದಿದ್ದ ಆರೋಪಿಗಳು ಬ್ಯಾಂಕಿನ ಮುಖ್ಯದ್ವಾರವನ್ನು ಒಡೆದು ಒಳನುಗ್ಗಿದ್ದರು. ಆಭರಣಗಳನ್ನು ಸಂಗ್ರಹಿಸಿ ಇಡಲಾಗಿದ್ದ ಬೀರುಗಳನ್ನು ಗ್ಯಾಸ್ ಕಟ್ಟರ್ ಬಳಸಿ ಕೋಟ್ಯಾಂತರ ರೂ. ಮೌಲ್ಯದ 22 ಕೆಜಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

publive-image

ಕಳ್ಳರ ಗ್ಯಾಂಗ್‌ ದರೋಡೆಯ ಸುಳಿವು ಸಿಗಬಾರದು ಎಂದು ಬ್ಯಾಂಕಿನ ತುಂಬಾ ಖಾರದ ಪುಡಿ ಎರಚಿ ಸಾಕ್ಷಿಗಳನ್ನು ನಾಶಪಡಿಸುವ ಯತ್ನ ಮಾಡಿದ್ದರು. ಇದೇ ಮೊದಲ ಬಾರಿಗೆ ಈ ದರೋಡೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

publive-image

ಬ್ಯಾಂಕ್‌ನಲ್ಲಿ ಕದ್ದಿದ್ದ ಚಿನ್ನಾಭರಣಗಳನ್ನು ಆರೋಪಿಗಳು ತಮಿಳುನಾಡಿನ ಮಧುರೈ ಪಕ್ಕದ ಹಳ್ಳಿ ತೆಗೆದುಕೊಂಡು ಹೋಗಿದ್ದರು. ಆ ತೋಟದ ಭಾವಿಯಲ್ಲಿ ಮುಚ್ಚಿಟ್ಟಿದ್ದರು. ಈ ಕಳ್ಳತನಕ್ಕೆ ಕಳ್ಳರ ಗ್ಯಾಂಗ್‌ ಗಡಿಚೌಡಮ್ಮಗೆ ಅಷ್ಟದಿಗ್ಬಂಧನ ಪೂಜೆ ಮಾಡಿಸಿದ್ದರಂತೆ. ಸಿನಿಮಾ, ಯೂಟ್ಯೂಬ್ ವಿಡಿಯೋ ನೋಡಿ ಮೊದಲ ಕಳ್ಳತನವನ್ನೇ ಬಹಳ ವ್ಯವಸ್ಥಿತವಾಗಿ ಇವರು ಮಾಡಿ ಮುಗಿಸಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment