IPL 2025 Auction; RCB ವಿರುದ್ಧ ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದಿದ್ದ ವಾರ್ನರ್ ಅನ್​ಸೋಲ್ಡ್​

author-image
Bheemappa
Updated On
IPL 2025 Auction; RCB ವಿರುದ್ಧ ಚೊಚ್ಚಲ ಐಪಿಎಲ್​  ಟ್ರೋಫಿ ಗೆದ್ದಿದ್ದ ವಾರ್ನರ್ ಅನ್​ಸೋಲ್ಡ್​
Advertisment
  • ಸಕ್ಸಸ್​ಫುಲ್ ಓಪನರ್ ಬ್ಯಾಟ್ಸ್​ಮನ್ ಆಕ್ಷನ್​ನಲ್ಲಿ ಯಾರು ಕೇಳಲಿಲ್ಲ
  • IPL​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ 4ನೇ ಆಟಗಾರ ಡೇವಿಡ್ ವಾರ್ನರ್
  • ಚೊಚ್ಚಲ IPL​ ಟ್ರೋಫಿಗೆ ಮುತ್ತಿಕ್ಕಿದ್ದರು ಆಸ್ಟ್ರೇಲಿಯಾದ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್​ನ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಲಕ್ನೋ ಫ್ರಾಂಚೈಸಿ 27 ಕೋಟಿ ರೂಪಾಯಿ ನೀಡಿ ರಿಷಬ್ ಪಂತ್ ಅವರನ್ನು ಕೊಂಡುಕೊಂಡಿದೆ. ಇದರ ಜೊತೆಗೆ ಪಂಜಾಬ್ ಕಿಂಗ್ಸ್​ ಕೂಡ ಶ್ರೇಯಸ್ ಅಯ್ಯರ್​ಗೆ ಒಟ್ಟು 26.75 ಕೋಟಿ ರೂಪಾಯಿ ನೀಡಿದೆ. ಸದ್ಯ ಈ ಆಕ್ಷನ್​ನಲ್ಲಿ ಹರಾಜು ಆಗದೇ ಇರುವ ಸಕ್ಸಸ್​ಫುಲ್ ಓಪನರ್ ಬ್ಯಾಟ್ಸ್​ಮನ್ ಕೂಡ ಇದ್ದಾರೆ.

ಡೇವಿಡ್ ವಾರ್ನರ್​ ಓಪನರ್ ಆಗಿ ಕ್ರೀಸ್​ಗೆ ಬಂದರೆ 30 ರಿಂದ 50 ರನ್​ ಬಾರಿಸದೇ ಪೆವಿಲಿಯನ್​ಗೆ ಮರಳುತ್ತಿರಲಿಲ್ಲ. ಸದ್ಯ ಮೆಗಾ ಆಕ್ಷನ್​ನಲ್ಲಿ ಡೇವಿಡ್ ವಾರ್ನರ್ ಮಾರಾಟ ಆಗಿಲ್ಲ. ಐಪಿಎಲ್ ಇತಿಹಾಸದಲ್ಲಿ ಡೇವಿಡ್ ವಾರ್ನರ್ ಅವರು ಮೂರು ಬಾರಿ ಆರೆಂಜ್ ಕ್ಯಾಪ್ ಪಡೆದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದರು.

ಡೇವಿಡ್ ವಾರ್ನರ್​ ಅವರು 2016ರಲ್ಲಿ ಹೈದ್ರಾಬಾದ್ ಟೀಮ್ ಪರ ಆಡುವಾಗ ನಾಯಕನಾಗಿದ್ದರು. ಈ ವೇಳೆ ತಂಡವನ್ನು ಫೈನಲ್​ವರೆಗೆ ಕರೆದು ತಂದಿದ್ದರು. ಫೈನಲ್ ಮ್ಯಾಚ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದರು. ಹೈದ್ರಾಬಾದ್ ಮೊದಲ ಟ್ರೋಫಿಯನ್ನು ಡೇವಿಡ್ ವಾರ್ನರ್​ ನಾಯಕತ್ವದಲ್ಲಿ ಗೆದ್ದಿದೆ ಎನ್ನುವುದು ಈಗ ಇತಿಹಾಸ.

ಇದನ್ನೂ ಓದಿ:Mega Auction; ವೆಸ್ಟ್​ ಇಂಡೀಸ್​ನ ಬಲಿಷ್ಠ ಆಲ್​ರೌಂಡರ್ RCBಗೆ ಎಂಟ್ರಿ.. ಒಂದೂವರೆ ಕೋಟಿ ಅಷ್ಟೇ!

publive-image

ಪ್ರಸ್ತುತ ನಡೆಯುತ್ತಿರುವ ಮೆಗಾ ಹರಾಜಿನಲ್ಲಿ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಾರ್ನರ್‌ ಮಾರಾಟ ಆಗಿಲ್ಲ. ಅವರನ್ನು ಹರಾಜಿಗೆ ಕರೆದಾಗ ಯಾವ ಫ್ರಾಂಚೈಸಿಯು ಖರೀದಿ ಮಾಡಲು ಮುಂದೆ ಬರಲಿಲ್ಲ. ಹೀಗಾಗಿಯೇ ಅವರನ್ನು ಅನ್​ಸೋಲ್ಡ್​ ಎಂದು ಪ್ರಕಟ ಮಾಡಲಾಗಿದೆ. ಕಳೆದ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್, 8 ಪಂದ್ಯಗಳಲ್ಲಿ ಕೇವಲ 168 ರನ್ ಮಾತ್ರ ಗಳಿಸಿದ್ದರು. ಇದು ಅವರಿಗೆ ಈಗ ಸಂಕಷ್ಟ ತಂದಿರೋದು.

ಡೇವಿಡ್ ವಾರ್ನರ್ ಇದುವರೆಗೆ 184 ಐಪಿಎಲ್ ಪಂದ್ಯಗಳ್ನ ಆಡಿದ್ದು ಒಟ್ಟು 6,565 ರನ್ ಗಳಿಸಿದ್ದಾರೆ. 40.52 ಸರಾಸರಿ ಇದ್ದು 4 ಅಮೋಘವಾದ ಶತಕ ಹಾಗೂ 62 ಹಾಫ್​​ಸೆಂಚುರಿಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ಡೇವಿಡ್ ವಾರ್ನರ್‌ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ 4ನೇ ಬ್ಯಾಟ್ಸ್‌ಮನ್ ಎಂದು ಖ್ಯಾತಿಗೆ ಪಾತ್ರರಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment