/newsfirstlive-kannada/media/post_attachments/wp-content/uploads/2025/06/AIR_INDIA.jpg)
ಅಹಮದಾಬಾದ್​ ಬಳಿ ಏರ್​ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್​ ಆಟಗಾರ ಡೇವಿಡ್​ ವಾರ್ನರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಇನ್ಮುಂದೆ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡೋದಿಲ್ಲ ಅಂತ ಕಡ್ಡಿಮುರಿದಂತೆ ಹೇಳಿದ್ದಾರೆ.
ಗುಜರಾತ್​ನ ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯ್ ಪಟೇಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್​ನ ಗ್ಯಾಟ್ವಿಕ್ ಏರ್​​ಪೋರ್ಟ್​ಗೆ ಏರ್​ ಇಂಡಿಯಾ ವಿಮಾನ ತೆರಳುತ್ತಿತ್ತು. ಆದರೆ ಅಹಮದಾಬಾದ್​ನಿಂದ ಟೇಕ್​ ಆಫ್​ ಆದ ಕೆಲವೇ ಕ್ಷಣಗಳಲ್ಲಿ ಏರ್​ ಇಂಡಿಯಾ ವಿಮಾನ ಪತಗೊಂಡು 242 ವಿಮಾನ ಪ್ರಯಾಣಿಕರು ಸೇರಿ ಒಟ್ಟು 274 ಜನರು ಕೊನೆಯುಸಿರೆಳೆದಿದ್ದರು.
/newsfirstlive-kannada/media/post_attachments/wp-content/uploads/2025/06/david_warner.jpg)
ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಕ್ರಿಕೆಟರ್​ ಡೇವಿಡ್ ವಾರ್ನರ್​ ಅವರು ಏರ್​ ಇಂಡಿಯಾ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಏರ್​ ಇಂಡಿಯಾ ಜೊತೆ ಇದೇ ನನ್ನ ಕೊನೆಯ ಸಂಭಾಷಣೆ. ಇನ್ಮುಂದೆ ಯಾವಾತ್ತೂ ಕೂಡ ಏರ್​ ಇಂಡಿಯಾ ವಿಮಾನದಲ್ಲಿ ನಾನು ಪ್ರಯಾಣ ಮಾಡೋದಿಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ.
ವಿಮಾನ ಅಪಘಾತದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ವಿಮಾನ ಪ್ರಯಾಣಿಕರು ಅಲ್ಲದೇ ವೈದ್ಯಕೀಯ ಕಾಲೇಜು ಹಾಸ್ಟೆಲ್​ನಲ್ಲಿ ಇದ್ದವರು ಹಾಗೂ ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಗುರುತು ಪತ್ತೆಗಾಗಿ ಈಗಲೂ ತನಿಖೆ ಮುಂದುವರಿದಿದೆ. ಇದುವರೆಗೂ ಒಂದೇ ಒಂದು ಬ್ಲ್ಯಾಕ್ ಬಾಕ್ಸ್ ಪತ್ತೆ ಆಗಿದ್ದು ಇನ್ನೊಂದು ಎಲ್ಲಿದೆ ಎಂದು ಹುಡುಕಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us