ಶೋಯೆಬ್ ಅಖ್ತರ್​​ಗೆ ಬಿಗ್ ಶಾಕ್ ಕೊಟ್ಟ ಭಾರತ ಸರ್ಕಾರ; ಪಾಕ್​ಗೆ ಮತ್ತೊಂದು ಮಾಸ್ಟರ್​ ಸ್ಟ್ರೋಕ್..!

author-image
Ganesh
Updated On
ಶೋಯೆಬ್ ಅಖ್ತರ್​​ಗೆ ಬಿಗ್ ಶಾಕ್ ಕೊಟ್ಟ ಭಾರತ ಸರ್ಕಾರ; ಪಾಕ್​ಗೆ ಮತ್ತೊಂದು ಮಾಸ್ಟರ್​ ಸ್ಟ್ರೋಕ್..!
Advertisment
  • ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ತಿರುವ ಭಾರತ
  • ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ
  • ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ದೊಡ್ಡ ಕ್ರಮ

ಪಹಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ಮೊತ್ತೊಂದು ಮಾಸ್ಟರ್​ ಸ್ಟ್ರೋಕ್ ನೀಡಿದೆ. ಭಾರತದಲ್ಲಿ ಪಾಕಿಸ್ತಾನದ ಎಲ್ಲಾ ನ್ಯೂಸ್​ ಚಾನಲ್​​ಗಳು, ಯೂಟ್ಯೂಬ್​ಗಳನ್ನು ಬ್ಯಾನ್ ಮಾಡಿದೆ.

ಕೇಂದ್ರ ಸರ್ಕಾರದಿಂದ ಪಾಕ್​ ನ್ಯೂಸ್ ಚಾನಲ್, ಯೂಟ್ಯೂಬ್ ಚಾನಲ್​​ಗಳನ್ನು ಬ್ಯಾನ್ ಮಾಡಲಾಗಿದೆ. ತಪ್ಪು, ಸುಳ್ಳು ಮಾಹಿತಿ, ದಾರಿ ತಪ್ಪಿಸುವ ಮಾಹಿತಿ ನೀಡ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಭಾರತದ ಸೇನೆ, ಕೇಂದ್ರ ಸರ್ಕಾರದ ವಿರುದ್ಧ ದಾರಿ ತಪ್ಪಿಸುವ ಮಾಹಿತಿಯನ್ನು ಪಾಕಿಸ್ತಾನ ಪ್ರಸಾರ ಮಾಡುತ್ತಿದೆ. ಪಾಕ್ ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್​ಗೆ ಸೇರಿದ ಯೂಟ್ಯೂಬ್ ಚಾನಲ್ ಕೂಡ ಬ್ಯಾನ್ ಆಗಿದೆ.

ಇದನ್ನೂ ಓದಿ: ಕರ್ನಾಟಕದಿಂದ ನಾಲ್ವರು ಪಾಕಿಸ್ತಾನಿಯರು ಗಡಿಪಾರು.. ಇನ್ನೂ ಎಷ್ಟು ಮಂದಿ ಉಳ್ಕೊಂಡಿದ್ದಾರೆ..?

publive-image

ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿರುವ ಎಲ್ಲಾ ಭಾರತೀಯರೂ ವಾಪಸ್ ಬರಲು ಮೇ 1 ಡೆಡ್​ಲೈನ್. ಇನ್ನು, ಭಾರತದಲ್ಲಿರುವ ಪಾಕಿಸ್ತಾನಿಯರು ಭಾರತದಿಂದ ತೊಲಗಳು ನೀಡಲಾಗಿರುವ ಡೆಡ್​ಲೈನ್​ ನಿನ್ನೆ ಮುಕ್ತಾಯಗೊಂಡಿದೆ. ದೀರ್ಘಾವಧಿ ವೀಸಾದ ಮೇಲಿರುವ ಪಾಕಿಸ್ತಾನಿಯರಿಗೆ ವಿನಾಯತಿ ನೀಡಲಾಗಿದೆ. ಅಲ್ಲದೇ, ಸಿಂಧುನದಿ ಒಪ್ಪಂದ ಅಮಾನತು ಸೇರಿದಂತೆ ಉಗ್ರ ಪೋಷಕರ ಪಾಕ್ ವಿರುದ್ಧ ಅನೇಕ ದಿಟ್ಟ ನಿರ್ಧಾರಗಳನ್ನು ಭಾರತ ತೆಗೆದುಕೊಂಡಿದೆ.

ಏಪ್ರಿಲ್ 22 ರಂದು ಪಹಲ್ಗಾಮ್​​ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ 26 ಮಂದಿ ಜೀವ ಕಳೆದುಕೊಂಡಿದ್ದಾರೆ. ಅವರಲ್ಲಿ ಶಿವಮೊಗ್ಗ ಮಂಜುನಾಥ್ ಹಾಗೂ ಹಾವೇರಿ ಮೂಲದ ಭರತ್ ಭೂಷಣ್ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರ ಜೊತೆ ಮೀಟಿಂಗ್.. ಕುತೂಹಲ ಮೂಡಿಸಿದ ರಾಜನಾಥ್ ಸಿಂಗ್- ಮೋದಿ ಭೇಟಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment