ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?

author-image
Ganesh
Updated On
IPL ಸ್ಕ್ಯಾಮ್​​​ ಬಗ್ಗೆ ಮೌನಮುರಿದ ಲಲಿತ್​ ಮೋದಿ; ದೇಶ ಬಿಡಲು ದಾವೂದ್​​​ ಕಾರಣವೇ?
Advertisment
  • ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್​ ಉಗ್ರ ದಾವೂದ್
  • ದಾವೂದ್​ನ ರಕ್ಷಿಸಲು ಪಾಕಿಸ್ತಾನ ಕುತಂತ್ರ ಬುದ್ಧಿ ಮಾಡ್ತಿದೆ
  • ಕರಾಚಿಯಲ್ಲಿ ಬಚ್ಚಿಟ್ಟುಕೊಂಡಿರುವ ಪಾಪಿ ಪಾಕಿಸ್ತಾನ

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಿಂದ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ.

ಅನೇಕ ವರ್ಷಗಳಿಂದ ಪಾಕಿಸ್ತಾನ ಕರಾಚಿಯಲ್ಲಿ ದಾವೂದ್ ಇಬ್ರಾಹಿಂ, ಅವನ ವಿಶೇಷ ಸಹಾಯಕರಾದ ಚೋಟಾ ಶಕೀಲ್ ಮತ್ತು ಮುನ್ನಾ ಜಿಂಗ್ರಾರನ್ನು ಪಾಕ್ ಅಡಗಿಸಿಟ್ಟಿದೆ. ಆದರೆ ಕರಾಚಿ ಮೇಲೆಯೇ ಭಾರತ ಕ್ಷಿಪಣಿ ಹಾಗೂ ಡೋನ್ ದಾಳಿ ಮಾಡ್ತಿದೆ.

ಇದನ್ನೂ ಓದಿ: 3 ರಾಜ್ಯ, 26 ಸ್ಥಳ! ಪಾಕಿಸ್ತಾನ ಮತ್ತೆ ಪುಂಡಾಟ.. ನಿನ್ನೆ ರಾತ್ರಿ ಏನೆಲ್ಲ ನಡೆದು ಹೋಯಿತು..?

ಹೀಗಾಗಿ ಪ್ರಾಣ ಭಯದಿಂದ ಮೂವರೂ ಪ್ರಸ್ತುತ ಪಾಕಿಸ್ತಾನವನ್ನು ತೊರೆದು ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ಆದಾಗ್ಯೂ ಭಾರತ ಆತನ ಇರುವಿಕೆಯ ತಿಳಿದುಕೊಳ್ಳಲು ಪ್ರಯತ್ನಿಸ್ತಿದೆ. ದಾರಿ ತಪ್ಪಿಸಲು ಪಾಕಿಸ್ತಾನ ಇಂತಹ ಸುಳ್ಳು ಮಾಹಿತಿ ನೀಡ್ತಿದೆಯಾ ಎಂಬ ಅನುಮಾನ ಕೂಡ ಇದೆ. ದಾವೂದ್ ಮತ್ತು ಅವನ ಬೆಂಬಲಿಗರು ಪಾಕಿಸ್ತಾನದಲ್ಲೇ ಬೇರೆಡೆ ಇರಬಹುದು ಅಂತಲೂ ಊಹಿಸಲಾಗ್ತಿದೆ.

ಇದನ್ನೂ ಓದಿ: ಭಿಕ್ಷೆ ಬೇಡಿದ್ದ ಪಾಕಿಸ್ತಾನಕ್ಕೆ IMF ಆಸರೆ​; 19 ಸಾವಿರ ಕೋಟಿ ಸಾಲ ಮಂಜೂರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment