/newsfirstlive-kannada/media/post_attachments/wp-content/uploads/2024/10/SLEEP.jpg)
ಮಧ್ಯಾಹ್ನ ತಿಂದ ನಂತರ ನಿದ್ದೆ ಬರುವುದು ಸಹಜ! ಆರೋಗ್ಯ ತಜ್ಞರ ಪ್ರಕಾರ.. ನಾವು ಮಧ್ಯಾಹ್ನ ಆಹಾರವನ್ನು ಸೇವಿಸಿದಾಗ, ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಆಗುತ್ತುತ್ತದೆ. ಈ ಕಾರಣದಿಂದಾಗಿ ಮೆದುಳಿಗೆ ರಕ್ತ ಪೂರೈಕೆಯು ಕಡಿಮೆ ಆಗಬಹುದು. ಈ ಕಾರಣದಿಂದ ನಿದ್ರೆ ಮತ್ತು ಆಯಾಸ ಆಗಬಹುದು.
ತಿಂದ ನಂತರ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಹೆಚ್ಚು ನಿದ್ರೆ ಮಾಡುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ, ಆತಂಕ ಪಡುವ ಅಗತ್ಯವಿಲ್ಲ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ.. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರು ಮಧ್ಯಾಹ್ನದ ಸಮಯದಲ್ಲಿ ಚಿಕ್ಕ ನಿದ್ರೆ ತೆಗೆದುಕೊಳ್ಳುತ್ತಾರೆ. ಜಾಗರೂಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಣ್ಣ ನಿದ್ರೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಇದು ಅಭ್ಯಾಸವಾಗಿದ್ದರೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು!
ಇದನ್ನೂ ಓದಿ:Rain news: ಬೆಂಗಳೂರಿಗರೇ ಅಲರ್ಟ್.. ಇನ್ನೂ ಎಷ್ಟು ದಿನ ಮಳೆ ಬರುತ್ತೆ..?
ಹಗಲಿನಲ್ಲಿ ಮಲಗಿದರೆ ಏನು ಪರಿಣಾಮ..?
ಹಾರ್ವರ್ಡ್ ಹೆಲ್ತ್ ವರದಿ ಹೇಳುವಂತೆ.. ಹಗಲಿನಲ್ಲಿ ಒಂದು ಸಣ್ಣ ನಿದ್ದೆ ಅಥವಾ ನಿದ್ರೆಯು ಜ್ಞಾಪಕಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹವನ್ನು ಸಕ್ರಿಯವಾಗಿರಿಸುತ್ತದೆ. ಇದು ಅಭ್ಯಾಸವಾದರೆ ದೀರ್ಘಾವಧಿಯಲ್ಲಿ ಅನೇಕ ನಷ್ಟಗಳನ್ನು ಉಂಟುಮಾಡಬಹುದು. ಹೀಗಾಗಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ನೀವು ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎನ್ನುತ್ತಾರೆ ಸಂಶೋಧಕರು.
ಇದನ್ನೂ ಓದಿ:ಜನರು ನಿತ್ಯ ಅಂದಾಜು ಎಷ್ಟು ಹೆಜ್ಜೆ ನಡೆಯುತ್ತಿದ್ದಾರೆ? ಉತ್ತಮ ಆರೋಗ್ಯಕ್ಕೆ ಎಷ್ಟು ಹೆಜ್ಜೆ ನಡೆಯಬೇಕು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ