ಮ್ಯಾಚ್​ ನೋಡುತ್ತ.. ನೋಡುತ್ತ.. RCBಗೆ ಕನ್ವರ್ಟ್​ ಆದ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿ; ಹೇಗೆ ಗೊತ್ತಾ?

author-image
Bheemappa
Updated On
ಮ್ಯಾಚ್​ ನೋಡುತ್ತ.. ನೋಡುತ್ತ.. RCBಗೆ ಕನ್ವರ್ಟ್​ ಆದ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿ; ಹೇಗೆ ಗೊತ್ತಾ?
Advertisment
  • ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಅಭಿಮಾನಿ ಹೀಗೆ ಮಾಡಿದ್ದೇಕೆ?
  • ಗ್ಯಾಲರಿಯಲ್ಲಿ ಕುಳಿತು ಅಭಿಮಾನಿ ಏನ್ ಮಾಡಿದ ಎನ್ನುವುದು ಇಲ್ಲಿದೆ
  • ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಕ್ಯಾಪಿಟಲ್ಸ್ ಸೋತಿದ್ದು ಕಾರಣನಾ?

ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಅಗ್ರ ಸಿಂಹಾಸನ ಅಲಂಕರಿಸಿದೆ. ಬೆಂಗಳೂರಿನ ಮೈದಾನದಲ್ಲಿ ಸೋತಿದ್ದ ಸೇಡನ್ನು ದೆಹಲಿಗೆ ಹೋಗಿ ಆರ್​ಸಿಬಿ ತೀರಿಸಿಕೊಂಡಿದೆ. ಇನ್ನು ಪಂದ್ಯ ವೀಕ್ಷಣೆಗೆ ಬಂದಿದ್ದ ಅಭಿಮಾನಿಯೊಬ್ಬ ಆರ್​ಸಿಬಿ ಜೆರ್ಸಿಯನ್ನು ಗ್ಯಾಲರಿಯಿಂದಲೇ ಆರ್ಡರ್ ಮಾಡಿದ್ದಾನೆ.

ಆರ್​ಸಿಬಿ ಹಾಗೂ ಡೆಲ್ಲಿ ನಡುವಿನ ಹೈವೋಲ್ಟೇಜ್​ ಪಂದ್ಯ ವೀಕ್ಷಣೆಗೆ ಬಂದಿದ್ದ ಅಭಿಮಾನಿಯೊಬ್ಬ ಬೆಂಗಳೂರು ತಂಡದ ಜೆರ್ಸಿಯನ್ನು ಆನ್​​ಲೈನ್​ ಅಲ್ಲಿ ಆರ್ಡರ್​ ಮಾಡಿದ್ದಾನೆ. ವಿಶೇಷ ಎಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜರ್ಸಿ ತೊಟ್ಟು ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಆದ್ರೆ ಪಂದ್ಯದ ನಡುವೆ ಡೆಲ್ಲಿ ತಂಡದ ಜೆರ್ಸಿ ತೊಟ್ಟಿದ್ದ ಅಭಿಮಾನಿ, ಆರ್​ಸಿಬಿ ಜೆರ್ಸಿಯನ್ನು ಆನ್​​ಲೈನ್​ ಆ್ಯಪ್​ವೊಂದರ ಮೂಲಕ ಆರ್ಡರ್ ಮಾಡಿದ್ದಾನೆ.

ಇದನ್ನೂ ಓದಿ:ಪಾಂಡ್ಯಗೆ ಅದೃಷ್ಟ ಕೈ ಹಿಡಿಯಿತಾ..? LSG ವಿರುದ್ಧ ಗೆಲ್ತಿದ್ದಂತೆ ಪಾಯಿಂಟ್​ ಟೇಬಲ್​ನಲ್ಲಿ ಮುಂಬೈ ಭಾರೀ ಜಿಗಿತ

publive-image

ಸದ್ಯ ಅಭಿಮಾನಿ ತನ್ನ ಮೊಬೈನಲ್ಲಿ ಆರ್​ಸಿಬಿ ಜೆರ್ಸಿಯನ್ನು ಆರ್ಡರ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಧ ವಿಧವಾದ ಕಮೆಂಟ್ಸ್​ಗಳನ್ನು ಮಾಡುತ್ತಿದ್ದಾರೆ. ಡೆಲ್ಲಿ ಅಭಿಮಾನಿ ಪಂದ್ಯವನ್ನು ನೋಡುತ್ತ ನೋಡುತ್ತ ಆರ್​ಸಿಬಿಗೆ ಕನ್ವರ್ಟ್​ ಆದ ಎಂದು ಕೆಲವರು ಗೇಲಿ ಮಾಡುತ್ತಿದ್ದಾರೆ. ಆರ್​ಸಿಬಿ ಅಭಿಮಾನಿಗಳು ಮಾತ್ರ ವೆಲ್​ಕಮ್​ ಟು ಆರ್​ಸಿಬಿ ಬ್ರೊ.. ಎನ್ನುತ್ತಿದ್ದಾರೆ.

ನಿನ್ನೆಯ ಡಬಲ್​ ಹೆಡ್ಡರ್​​ನ 2ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ್ದ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಟೀಮ್​ 20 ಓವರ್​ಗಳಲ್ಲಿ 163 ರನ್​​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನ ಹತ್ತಿದ್ದ ಆರ್​ಸಿಬಿ ತಂಡ ಕೇವಲ 18.3 ಓವರ್​ಗಳಲ್ಲಿ 165 ರನ್​ ಗಳಿಸಿ ಜಯಭೇರಿ ಬಾರಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಭರ್ಜರಿ ಅರ್ಧಶತಕ ಸಿಡಿಸಿದ್ದರು.


">April 28, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment