ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!

author-image
Ganesh Nachikethu
Updated On
ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!
Advertisment
  • ಕಳೆದ ಎರಡು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಕೇಸ್​​ ಭಾರೀ ಸದ್ದು
  • ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್..!
  • ಈ ಕೇಸ್​ ಬಗ್ಗೆ ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹೇಳಿದ್ದೇನು ಗೊತ್ತಾ?

ಹಾಸನ: ಕಳೆದ ಎರಡು ದಿನಗಳಿಂದ ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹಾಸನ ಅಶ್ಲೀಲ ವಿಡಿಯೋ ಕೇಸ್​​ನಲ್ಲಿ ಮಾಜಿ ಸಚಿವ ಹೆಚ್​​.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​​​​ ಸರ್ಕಾರ ಕೇಸ್​ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿ ಆದೇಶಿಸಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತಾಡಿದ್ದಾರೆ.

ಯಾರಾದ್ರೂ ಸಂತ್ರಸ್ತೆ ಪೊಲೀಸ್​ ರಕ್ಷಣೆ ನೀಡುವಂತೆ ಕೇಳಿದ್ರಾ ಅನ್ನೋ ಪ್ರಶ್ನೆಗೆ ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಉತ್ತರ ನೀಡಿದ್ದಾರೆ. ಯಾರು ಇದುವರೆಗೂ ರಕ್ಷಣೆ ಕೊಡಿ ಎಂದು ನನ್ನ ಬಳಿ ಬಂದಿಲ್ಲ. ನಾನು ಆಫೀಸ್​ನಲ್ಲೇ ಇರುತ್ತೇನೆ, ಯಾರು ಬೇಕಾದ್ರೂ ಬಂದು ರಕ್ಷಣೆ ಕೇಳಬಹುದು ಎಂದಿದ್ದಾರೆ.

ನನಗೆ ಸಿಎಂ ಸಿದ್ದರಾಮಯ್ಯ ಆಗಲಿ, ಡಿಸಿಎಂ ಡಿ.ಕೆ ಶಿವಕುಮಾರ್​​ ಅವರಾಗಲಿ ಯಾವುದೇ ಸೂಚನೆ ನೀಡಿಲ್ಲ. ಪ್ರಭಾವಿ ರಾಜಕಾರಣಿಗಳು ಎಂದು ಸರ್ಕಾರದಿಂದ ಯಾವುದೇ ಒತ್ತಡ ಇಲ್ಲ. ನಾವು ಅದಕ್ಕೆ ತಲೆ ಕೂಡ ಕಡೆಸಿಕೊಳ್ಳುವುದಿಲ್ಲ. ಯಾರಿಗಾದ್ರೂ ರಕ್ಷಣೆ ಬೇಕಾದ್ರೆ ನೀಡುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದರು.

ಇದನ್ನೂ ಓದಿ: ಪ್ರಜ್ವಲ್ ಫಾರಿನ್​​ಗೆ ಹೋಗಬೇಕಾಗಿತ್ತು ಹೋಗಿದ್ದಾನೆ, ಇವರೇನು FIR ಹಾಕ್ತಾರೆಂದು ಗೊತ್ತಿತ್ತಾ? -ರೇವಣ್ಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment