/newsfirstlive-kannada/media/post_attachments/wp-content/uploads/2025/06/RCB-stampede-10-Photos.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ದುರಂತಕ್ಕೆ ರಾಜ್ಯ ಸರ್ಕಾರ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದೆ. DC ಜಗದೀಶ್​ ಅವರ ನೇತೃತ್ವದಲ್ಲಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಮ್ಯಾಜಿಸ್ಟ್ರಿಯಲ್ ತನಿಖೆಯಲ್ಲಿ ಕಾಲ್ತುಳಿತಕ್ಕೆ ಸೂಕ್ತ ಕಾರಣವೇನು ಅನ್ನೋ ಸತ್ಯಾಂಶವನ್ನು ಎದುರು ನೋಡಲಾಗುತ್ತಿದೆ.
ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದು, ಈಗಾಗಲೇ ಸಿಐಡಿಯಿಂದ ತನಿಖೆ ಚುರುಕುಗೊಂಡಿದೆ. ಇದರ ಜೊತೆಗೆ DC ಜಗದೀಶ್​ ಅವರ ನೇತೃತ್ವದಲ್ಲೂ ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸಲಾಗುತ್ತಿದೆ.
DC ಜಗದೀಶ್​ ಅವರು ಈಗಾಗಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿದ್ದು, ಕಾಲ್ತುಳಿತ ಸಂಭವಿಸಿದ ಜಾಗಗಳನ್ನು ಪರಿಶೀಲನೆ ನಡೆಸಿದ್ದಾರೆ. ಮ್ಯಾಜಿಸ್ಟ್ರಿಯಲ್ ತನಿಖೆಯ ಮುಂದುವರಿದ ಭಾಗವಾಗಿ ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಕುಟುಂಬದಿಂದಲೂ ಹೇಳಿಕೆ ದಾಖಲಿಸಲು ಡೇಟ್ ಫಿಕ್ಸ್​ ಮಾಡಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಅವ್ಯವಸ್ಥೆ ಸಂಬಂಧ ಸಾಲು ಸಾಲು ದೂರು ಕೇಳಿ ಬಂದಿದೆ. ಆ ಜಾಗದಲ್ಲಿ ಆ್ಯಂಬುಲೆನ್ಸ್ ಇರಲಿಲ್ಲ. ಪ್ರಥಮ ಚಿಕಿತ್ಸೆ ಇಲ್ಲ, ಅಗ್ನಿಶಾಮಕ ದಳವೂ ಇಲ್ಲ. ಹೀಗಾಗಿ 11 ಕುಟುಂಬದ ಸದಸ್ಯರಿಂದ ಹೇಳಿಕೆ ದಾಖಲಿಸಲು ಒಂದೊಂದು ಕುಟುಂಬಕ್ಕೆ ಪ್ರತ್ಯೇಕ ಸಮಯವನ್ನು ನಿಗದಿ ಮಾಡಲಾಗಿದೆ.
ಇಷ್ಟು ದಿನ ಮಕ್ಕಳನ್ನು ಕಳೆದುಕೊಂಡ ನೋವಲ್ಲಿದ್ದ ಕಾರಣ ಅಧಿಕಾರಿಗಳು ಯಾರನ್ನು ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ಸೂತಕದ ವಾತಾವರಣದಿಂದ ಕುಟುಂಬಸ್ಥರ ಭೇಟಿಗೆ ಅವಕಾಶ ಇರಲಿಲ್ಲ. ಇದೇ ಕಾರಣಕ್ಕೆ ಈಗ 11 ಕುಟುಂಬಕ್ಕೂ ಡಿಸಿ ಅವರಿಂದ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ.. DCP ಮೊದಲೇ ಅಪಾಯದ ಎಚ್ಚರಿಕೆ ನೀಡಿದ್ರೂ ನಿರ್ಲಕ್ಷ್ಯ ಮಾಡಿದ್ರಾ?
ಇದೇ ಜೂನ್ 16ಕ್ಕೆ ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಲು ಡಿಸಿ ದಿನಾಂಕ ನಿಗದಿ ಮಾಡಿದ್ದಾರೆ. ಅಂದು ಬೆಳಗ್ಗೆಯಿಂದ ಸಂಜೆವರೆಗೆ ಒಂದೊಂದು ಕುಟುಂಬಕ್ಕೆ ಪ್ರತ್ಯೇಕ ಸಮಯ ಕೊಟ್ಟು ಹೇಳಿಕೆ ದಾಖಲಿಸಲು ಡಿಸಿ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ