ಬೆಂಗಳೂರು IT ಕಂಪನಿಗಳೇ ಪಕ್ಕದ ತುಮಕೂರಿಗೆ ಬನ್ನಿ; ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರ್ಜರಿ ಆಫರ್‌!

author-image
admin
Updated On
ಬೆಂಗಳೂರು IT ಕಂಪನಿಗಳೇ ಪಕ್ಕದ ತುಮಕೂರಿಗೆ ಬನ್ನಿ; ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರ್ಜರಿ ಆಫರ್‌!
Advertisment
  • ಐ.ಟಿ ಕಂಪನಿಗಳಿಗೆ ಅತಿಥ್ಯ ವಹಿಸಲು ತುಮಕೂರು ಜಿಲ್ಲೆ ಸಜ್ಜು
  • ತುಮಕೂರು ನಗರದಲ್ಲಿ 30 ಸಾವಿರ ಚದರ ಅಡಿ ಜಾಗ ಲಭ್ಯವಿದೆ
  • ಐ.ಟಿ ಕಂಪನಿ ತೆರೆದರೆ ಕಡಿಮೆ ಬಾಡಿಗೆ, ಕಡಿಮೆ ವೆಚ್ಚದ ಸೌಲಭ್ಯಗಳು

ತುಮಕೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರತಿ ನಿತ್ಯ 5000ಕ್ಕೂ ಹೆಚ್ಚು ಐ.ಟಿ ಉದ್ಯೋಗಿಗಳು ಪಕ್ಕದ ತುಮಕೂರು ಜಿಲ್ಲೆಯಿಂದ ಪ್ರಯಾಣ ಮಾಡುತ್ತಾರೆ. ಹೀಗಾಗಿ ತುಮಕೂರಿನಲ್ಲೇ ಐ.ಟಿ ಕಂಪನಿಗಳು ತಮ್ಮ ಶಾಖೆ ತೆರೆಯಲಿ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭರ್ಜರಿ ಆಫರ್‌ಗಳನ್ನ ನೀಡಿದ್ದಾರೆ.

ಬೆಂಗಳೂರಿನ ಐ.ಟಿ. ಕಂಪನಿಗಳೇ ಪಕ್ಕದ ಜಿಲ್ಲೆ ತುಮಕೂರಿಗೆ ಶಿಫ್ಟ್ ಆಗಿ. ತುಮಕೂರಿಗೆ ಬಂದರೆ ಪ್ರೋತ್ಸಾಹಕ (Incentive) ಸೌಲಭ್ಯಗಳು ಸೇರಿ ಎಲ್ಲವೂ ನೀಡಲಾಗುತ್ತೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಐ.ಟಿ ಕಂಪನಿಗಳಿಗೆ ಅತಿಥ್ಯ ವಹಿಸಲು ಪಕ್ಕದ ಕಲ್ಪತರು ನಾಡು ತುಮಕೂರು ಸಜ್ಜಾಗಿದೆ. ಈ ಬಗ್ಗೆ ಐ.ಟಿ ಇಲಾಖೆಯ ನಿರ್ದೇಶಕ ರಾಹುಲ್ ಜೊತೆ ಮಾತನಾಡುವುದಾಗಿ ಡಿಸಿ ಶುಭ ಕಲ್ಯಾಣ್ ಅವರು ಹೇಳಿದ್ದು, ತುಮಕೂರಿಗೆ ಐ.ಟಿ, ಐ.ಟಿ. ಸೇವಾ ಕಂಪನಿಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

publive-image

ತುಮಕೂರು ನಗರದಲ್ಲಿ ಸುಲಭವಾಗಿ ಐ.ಟಿ ಕಂಪನಿಗಳನ್ನು ಆರಂಭಿಸುವ ಸೌಲಭ್ಯಗಳಿವೆ. ತುಮಕೂರು ನಗರದಲ್ಲಿ 30 ಸಾವಿರ ಚದರ ಅಡಿ ಜಾಗ ಲಭ್ಯವಿದೆ. ತುಮಕೂರು ಸಮೀಪ ವಸಂತ ನರಸಾಪುರದಲ್ಲಿ ಸಾಫ್ಟವೇರ್ ಪಾರ್ಕ್ ಇದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಗೆ ಸವಾಲಾದ ಸೋನು ನಿಗಮ್.. ಖಡಕ್ ವಾರ್ನಿಂಗ್..! 

ತುಮಕೂರಿನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಎಸ್‌ಟಿಆರ್‌ಆರ್ ಮೂಲಕ ಸುಲಭ ಸಂಚಾರ ಸಾಧ್ಯವಿದೆ. ಹೀಗಾಗಿ ಬೆಂಗಳೂರಿನಲ್ಲಿರುವ ಐ.ಟಿ. ಕಂಪನಿಗಳು ತುಮಕೂರಿಗೆ ಬಂದು ತಮ್ಮ ಶಾಖೆ ತೆರೆಯಬಹುದು.
ತುಮಕೂರು ನಗರದಲ್ಲಿ ಐ.ಟಿ ಕಂಪನಿ ತೆರೆದರೆ ಕಡಿಮೆ ಬಾಡಿಗೆ, ಕಡಿಮೆ ವೆಚ್ಚ ಸೇರಿದಂತೆ ಸರ್ಕಾರದಿಂದಲೇ ಪ್ರೋತ್ಸಾಹ ಸಿಗಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment